ಬೆಂಗಳೂರು: ನಗರದ ಪೂರ್ವ ವಲಯದಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ಘೋಷಣೆಯಾಗಿದೆ. ಇಂದಿರಾನಗರ 100 ಫೀಟ್ ರಸ್ತೆಯ ಬಳಿಯಿರುವ (TOIT) ರೆಸ್ಟೋರೆಂಟ್ನ ಹನ್ನೊಂದು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಈ ಕ್ಲಸ್ಟರ್ನಲ್ಲಿ 110 ಜನ ಸಿಬ್ಬಂದಿಗಳಿದ್ದು, 99 ಜನ ಪ್ರಾಥಮಿಕ ಸಂಪರ್ಕಿತರಾಗಿದ್ದು, ಸೋಂಕು ಪರೀಕ್ಷೆ ನಡೆಸಲಾಗಿದೆ. 119 ಮಂದಿ ದ್ವಿತೀಯ ಸಂಪರ್ಕಿತರಿದ್ದು, ಇನ್ನಷ್ಟೇ ಪರೀಕ್ಷೆಗೊಳಪಡಿಸಬೇಕಿದೆ.
ಸಂಪರ್ಕಿತರನ್ನು ಹೋಂ ಐಸೋಲೇಷನ್ನಲ್ಲಿ ಇಡಲಾಗಿದೆ. ಬೆಂಗಳೂರು ಟರ್ಫ್ ಕ್ಲಬ್ಗೆ ನಿನ್ನೆ ಬೆಳಗ್ಗೆ 10 ಗಂಟೆಗೆ ಚುನಾವಣೆ ನಡೆದಿತ್ತು. ಅನುಮತಿ ಇಲ್ಲದೇ ರಾತ್ರಿ ಡಿನ್ನರ್ ಪಾರ್ಟಿ ನಡೆಸಲಾಗಿದೆ.
ಮಾರ್ಷಲ್ಗಳು ರೆಸ್ಟೋರೆಂಟ್ಗೆ ಭೇಟಿ ನೀಡಿದ ಸಮಯದಲ್ಲಿ ಇನ್ನೂರಕ್ಕೂ ಹೆಚ್ಚು ಜನ ಸೇರಿದ್ದನ್ನು ಗಮನಿಸಿದ್ದು, ಪಾರ್ಟಿ ಸ್ಥಗಿತಗೊಳಿಸಲು ತಿಳಿಸಿದ್ದಾರೆ. ಅಲ್ಲದೇ ಕಾರ್ಯಕ್ರಮದ ಆಯೋಜಕರಾದ ಬೆಂಗಳೂರು ಟರ್ಫ್ ಕ್ಲಬ್ಗೆ ಮಾರ್ಷಲ್ಗಳು ದಂಡ ವಿಧಿಸಿದರು.