ಬೆಂಗಳೂರು: ವಿಧಾನಸೌಧಕ್ಕೂ ಕೊರೊನಾ ವೈರಸ್ ಭೀತಿ ತಟ್ಟಿದ್ದು, ಶಕ್ತಿಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ.
ಇಂದು ವಿಧಾನಸೌಧದ ಎಲ್ಲಾ ದ್ವಾರಗಳಲ್ಲಿಯೂ ಸಚಿವರುಗಳು, ಶಾಸಕರುಗಳ ಕೈಗೆ ಸ್ಯಾನಿಟೈಜರ್ ಹಾಕಲಾಗುತ್ತಿದೆ.
ಓದಿ:ರಾಜ್ಯದಲ್ಲಿ ಇದುವರೆಗೆ ಪತ್ತೆಯಾದ ಕೊರೊನಾ ಸೋಂಕಿತ ಪ್ರಕರಣಗಳ ವಿವರ ಇಲ್ಲಿದೆ..
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಶಿವರಾಂ ಹೆಬ್ಬಾರ್, ಆರ್.ಅಶೋಕ್, ರೇಣುಕಾಚಾರ್ಯ ಮುಂತಾದವರು ತಮ್ಮ ಕೈಗೆ ಸ್ಯಾನಿಟೈಸರ್ ಹಾಕಿಸಿಕೊಂಡು ಶುಚಿಗೊಳಿಸಿಕೊಂಡರು.
ಈಗಾಗಲೇ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.