ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನಲೆ, ಸೌತ್ ವೆಸ್ಟರ್ನ್ ರೈಲ್ವೆ ನಗರದ ನಾಲ್ಕು ರೈಲು ನಿಲ್ದಾಣಗಳಲ್ಲಿ ಜನ ಜಂಗುಳಿ ತಡೆಯುವ ನಿಟ್ಟಿನಲ್ಲಿ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಿಸಿದೆ.
ಈ ಬಗ್ಗೆ ಸೌತ್ ವೆಸ್ಟರ್ನ್ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದು, ತಾತ್ಕಾಲಿಕವಾಗಿ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಿಸಲಾಗಿದೆ. ಟಿಕೆಟ್ ದರವನ್ನು ಹತ್ತರಿಂದ, ಐವತ್ತು ರೂಪಾಯಿಗೆ ಏರಿಕೆ ಮಾಡಲಾಗಿದೆ. ನಗರದ ಮೆಜೆಸ್ಟಿಕ್, ಕಂಟೋನ್ಮೆಂಟ್, ಯಶವಂತಪುರ, ಯಲಹಂಕ ಹಾಗೂ ಕೆ.ಆರ್.ಪುರಂ ರೈಲ್ವೆ ನಿಲ್ದಾಣಗಳಲ್ಲಿ ಈ ಹೊಸ ಟಿಕೆಟ್ ದರ ಜಾರಿಗೆ ತರಲಾಗಿದೆ.
ಇನ್ನು 18.03.2020 ರಿಂದ 31.03.2020 ರವರೆಗೆ ಹೆಚ್ಚು ಜನರ ಸಂಚಾರ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.