ETV Bharat / state

ಪೆಟ್ರೋಲ್, ಡೀಸೆಲ್‌ಗೂ ತಟ್ಟಿದ ಕೊರೊನಾ ‌ಎಫೆಕ್ಟ್.. ದರ ಇಳಿಯುವುದೇ!? - ಕಚ್ಚಾ ತೈಲ ಬೆಲೆ ಶೇ 30 ರಿಂದ 40 ರಷ್ಟು ಕಡಿಮೆ

ಪೆಟ್ರೋಲ್, ಡೀಸೆಲ್ ‌ಬೆಲೆ ನಿರಂತರವಾಗಿ ಕಳೆದ ಒಂದು ವಾರದಿಂದ ಇಳಿಕೆಯತ್ತ ಸಾಗಿದೆ. ಇಂಡಿಯನ್ ಆಯಿಲ್ ಕಂಪನಿಗಳು ಕೂಡಾ ಕಚ್ಚಾ ತೈಲ ಬೆಲೆ ಇಳಿಕೆ ಹಿನ್ನೆಲೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಮುಂದಾಗಿವೆ ಎಂದು ಪೆಟ್ರೋಲ್ ಅಸೋಸಿಯೇಷನ್ ಸದಸ್ಯರು ಮಾಹಿತಿ ನೀಡಿದ್ದಾರೆ.

corona-effect-on-petrol-and-diesel-rate-in-bengalore
ಪೆಟ್ರೋಲ್ ಡಿಸೇಲ್ ‌ಉದ್ಯಮಕ್ಕೂ ತಟ್ಟಿದೆಯಂತೆ ಕೊರೊನಾ ‌ಎಫೆಕ್ಟ್
author img

By

Published : Mar 10, 2020, 9:29 PM IST

ಬೆಂಗಳೂರು: ವಿಶ್ವದೆಲ್ಲೆಡೆ ಕೊರೊನಾ ಮಹಾಮಾರಿಯಿಂದಾಗಿ ಉದ್ಯಮ ಹಾಗೂ ಆರ್ಥಿಕತೆಯ ಮೇಲೆ ನೇರ ಎಫೆಕ್ಟ್ ಆಗ್ತಿದೆ. ಕೊರೊನಾಗೆ ವಿಶ್ವದ ಮಾರುಕಟ್ಟೆಯೇ ಕುಸಿದು ಹೋಗಿದೆ. ಈ ಹಿನ್ನೆಲೆ ವಾಹನ ಸಂಚಾರವು ತಗ್ಗಿದ್ದು ಪೆಟ್ರೋಲ್ ಡೀಸೆಲ್ ಉದ್ಯಮವು ಕೂಡಾ ಪಾತಾಳ ಸೇರಿ ಕಚ್ಚಾ ತೈಲ ಬೆಲೆ ದಿನದಿಂದ ದಿನಕ್ಕೆ ತಗ್ಗುತ್ತಿದೆ.

ಸೌದಿ ಆರೇಬಿಯಾ ಸೇರಿದಂತೆ ಒಪೆಕ್​​​ (ಆರ್ಗನೈಷನ್​​ ಆಫ್​ ದಿ ಪೆಟ್ರೋಲಿಯಂ ಎಕ್ಸ್​ಪೋರ್ಟಿಂಗ್​​​ ಕಂಟ್ರೀಸ್​​​​) ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡಲು ಮುಂದಾಗಿವೆ. ಆದರೆ, ಇದಕ್ಕೆ ಆರ್ಥಿಕ ನಷ್ಟದ ಕಾರಣ ನೀಡಿದ ರಷ್ಯಾ ವಿರೋಧವನ್ನ ವ್ಯಕ್ತಪಡಿಸಿ, ಕಚ್ಚಾ ತೈಲವನ್ನ ಯಥಾಸ್ಥಿತಿಯಾಗಿ ಉತ್ಪಾದನೆ ಮಾಡಲು ಮುಂದಾಗಿದೆ. ಇದರಿಂದಾಗಿ ರಷ್ಯಾದೊಂದಿಗೆ ವಾಣಿಜ್ಯ ಸಮರ ಆರಂಭಿಸಿರುವ ಸೌದಿ ಅರೇಬಿಯಾ ಕಚ್ಚಾ ತೈಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆ ಶೇ.30 ರಿಂದ 40 ರಷ್ಟು ಕಡಿಮೆಯಾಗಿದೆ.

ಪೆಟ್ರೋಲ್, ಡೀಸೆಲ್ ‌ಬೆಲೆ ನಿರಂತರವಾಗಿ ಕಳೆದ ಒಂದು ವಾರದಿಂದ ಇಳಿಕೆಯತ್ತ ಸಾಗಿದೆ. ಇಂಡಿಯನ್ ಆಯಿಲ್ ಕಂಪನಿಗಳು ಕೂಡಾ ಕಚ್ಚಾ ತೈಲ ಬೆಲೆ ಇಳಿಕೆ ಹಿನ್ನೆಲೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಮುಂದಾಗಿವೆ ಎಂದು ಪೆಟ್ರೋಲ್ ಅಸೋಸಿಯೇಷನ್ ಸದಸ್ಯರು ಮಾಹಿತಿ ನೀಡಿದ್ದಾರೆ.

1/3/2020 ರಂದು ಇದ್ದ ಪೆಟ್ರೋಲ್ ಡೀಸೆಲ್ ಬೆಲೆ:
ಪೆಟ್ರೋಲ್ - 74.17 ರೂ.
ಡೀಸೆಲ್ - 66.50 ರೂ.

ಇಂದಿನ ದರ – 10/03/2020

ಪೆಟ್ರೋಲ್ - 72.70 ರೂ.
ಡೀಸೆಲ್ - 65.16 ರೂ.

ಮುಂದಿನ ದಿನಗಳಲ್ಲಿ ಪೆಟ್ರೋಲ್ 6 ರಿಂದ 7 ರೂ‌. ಇಳಿದ್ರೇ ಡೀಸೆಲ್ 6 ರಿಂದ 8 ರೂ. ಇಳಿಕೆಯಾಗುವ ಸಾಧ್ಯತೆಯಿದೆ. ಸೌದಿ ರಾಷ್ಟ್ರಗಳು ಹಾಗೂ ರಷ್ಯಾ ನಡುವೆ ಆಯಿಲ್ ವಾರ್ ಶುರುವಾಗಿರೋದರಿಂದ ಕಚ್ಚಾ ತೈಲೆ ಬೆಲೆ ನಿರಂತರ ಇಳಿಕೆಯತ್ತ ಸಾಗಿದೆ. ಚೀನಾ ಸೇರಿ ನಾನಾ ದೊಡ್ಡ ರಾಷ್ಟ್ರಗಳಲ್ಲಿ ಅನೇಕ ಉದ್ಯಮಗಳು ಈ ಕೊರೊನಾದಿಂದ ನೆಲ ಕಚ್ಚಿವೆ. ವ್ಯಾಪಾರ-ವಹಿವಾಟು ಟ್ರಾನ್ಸ್​​ಪೋರ್ಟ್​ ಉದ್ಯಮ ಕೂಡಾ ಕುಂಠಿತವಾಗಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಇಳಿಕೆ ಕಾಣುವ ಸಾಧ್ಯತೆ ಕೂಡಾ ಹೆಚ್ಚಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.