ಬೆಂಗಳೂರು: ಕೊರೊನಾ ಭೀತಿಯಿಂದ ಜನರು ಮನೆಯಿಂದ ಹೊರ ಬರದ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 5.30 ಕೋಟಿ ರೂಪಾಯಿ ನಷ್ಟವಾಗಿದೆ.
ಈಗಾಗಲೇ ನಿಗಮದ ಸಿಬ್ಬಂದಿಗೆ ಮಾಸ್ಕ್ ಮತ್ತು ಬಸ್ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಸೂಚಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
![ಕೊರೊನಾ ಪರಿಣಾಮದಿಂದ ಸಾರಿಗೆ ಇಲಾಖೆಗೆ ನಷ್ಟ, Corona Effect losse to Transport department](https://etvbharatimages.akamaized.net/etvbharat/prod-images/6445803_thum.jpg)
ಒಟ್ಟು 818 ಮಾರ್ಗಗಳ ಬಸ್ಗಳನ್ನು ರದ್ದು ಮಾಡಲಾಗಿದೆ. ಈ ಹಿಂದೆ ಪ್ರತಿದಿನ 22ರಿಂದ 23 ಸಾವಿರ ಇದ್ದ ಆನ್ಲೈನ್ ಟಿಕೆಟ್ ಬುಕ್ಕಿಂಗ್ 5,500ಕ್ಕೆ ಕುಸಿದಿದೆ. ಇನ್ನು ಬಸ್ಗಳಲ್ಲಿ ಸ್ಯಾನಿಟೈಸರ್ ಮತ್ತು ಇತರೆ ಅವಶ್ಯಕ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಇಡಲು ಸೂಚಿಸಲಾಗಿದೆ. ಇನ್ನು ನಿಗಮದ ಪ್ರತಿಷ್ಠಿತ ವಾಹನಗಳಲ್ಲಿ ನೀಡಲಾಗುತ್ತಿರುವ ಬ್ಲಾಂಕೆಟ್, ಬೆಡ್ ಸ್ಪ್ರೆಡ್ಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಅವುಗಳನ್ನು ಪ್ರಯಾಣಿಕರಿಗೆ ತರುವಂತೆ ಸೂಚಿಸಲಾಗಿದೆ.