ಬೆಂಗಳೂರು: ಉದ್ಯಾನ ನಗರಿ ಕೊರೊನಾ ಹಬ್ ಆಗಿ ಬದಲಾಗಿದೆ. ಸೋಮವಾರ ಒಂದೇ ದಿನ ಕೊರೊನಾ ಕೇಸ್ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿಯ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.
ಈ ಹಿಂದೆ ನಗರದ ವಾಣಿಜ್ಯ ಪ್ರದೇಶ ಚಿಕ್ಕಪೇಟೆಯಲ್ಲಿ ಅನೇಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಇದೀಗ ಬಸವನಗುಡಿ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಇಂದಿನಿಂದ ಜುಲೈ 6ವರೆಗೆ ಎಲ್ಲಾ ಅಂಗಡಿ-ಮಳಿಗೆಗಳು ಬಂದ್ ಇರಲಿವೆ. ಬಸವನಗುಡಿ ಸುತ್ತಮುತ್ತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.