ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ನಿತ್ಯ ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಜುಲೈ 01 ರಿಂದ 10ರವರೆಗೆ ದಿನವೊಂದಕ್ಕೆ ಸರಾಸರಿಯಾಗಿ ನಿತ್ಯ 115ರ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರುತ್ತಿದ್ದು, ಎಷ್ಟು ಪರೀಕ್ಷೆಗಳು ನಡೆದಿವೆ, ಅದರಲ್ಲಿ ಪಾಸಿಟಿವ್ ಎಷ್ಟು ನೆಗೆಟಿವ್ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಗ್ರಾಫಿಕ್ಸ್:
ದಿನಾಂಕ | ಪರೀಕ್ಷೆ | ನೆಗೆಟಿವ್ ಪ್ರಕರಣಗಳು | ಪಾಸಿಟಿವ್ ಪ್ರಕರಣಗಳು | ಸರಾಸರಿ |
01/07/20 | 16670 | 15185 | 1272 | 8:92 |
02/07/20 | 16210 | 14470 | 1502 | 9:91 |
03/07/20 | 18307 | 16290 | 1694 | 9:91 |
04/07/20 | 17592 | 15294 | 1839 | 10:90 |
05/07/20 | 16899 | 14649 | 1925 | 11:89 |
06/07/20 | 15880 | 13742 | 1843 | 12:88 |
07/07/20 | 17742 | 15549 | 1498 | 8:92 |
08/07/20 | 19134 | 16503 | 2062 | 11:89 |
09/07/20 | 20028 | 17568 | 2228 | 11:89 |
10/07/20 | 19228 | 16473 | 2313 | 12:88 |
ಒಟ್ಟಾರೆಯಾಗಿ 10 ದಿನಗಳಲ್ಲಿ ರಾಜ್ಯದಲ್ಲಿ 1,77,690 ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, ನಿತ್ಯ ಪಾಸಿಟಿವ್ ಹಾಗೂ ನೆಗೆಟಿವ್ ಸರಾಸರಿಯನ್ನು ಗಮನಿಸಿದರೆ 100 ಪರೀಕ್ಷೆಗಳಲ್ಲಿ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 90 ನೆಗೆಟಿವ್ ಫಲಿತಾಂಶಗಳು ಹೊರ ಬರುತ್ತಿವೆ. 10 ದಿನದ ಸರಾಸರಿಯ ಪ್ರಕಾರ ನಿತ್ಯ 17,769 ಕೋವಿಡ್ ಪರೀಕ್ಷೆಗಳು ನಡೆಸಲಾಗುತ್ತಿದ್ದು, ಜುಲೈ 1ಕ್ಕೆ 100 ಕೊರೊನಾ ಪರೀಕ್ಷೆಯಲ್ಲಿ 8 ಪಾಸಿಟಿವ್ ಆಗಿದ್ದು, 92 ನೆಗೆಟಿವ್ ಬರುತ್ತಿತ್ತು ಎಂದು ವರದಿ ತಿಳಿಸುತ್ತದೆ.
ಜುಲೈ. 10ರ ವರದಿಯ ಪ್ರಕಾರ 100 ಕೋವಿಡ್ ಪರೀಕ್ಷೆಯಲ್ಲಿ 12 ಪಾಸಿಟಿವ್ ಹಾಗೂ 88 ನೆಗೆಟಿವ್ ಪ್ರಕರಣ ಬಂದಿದೆ. ಅಂದರೆ 9 ದಿನದ ಸರಾಸರಿಯಲ್ಲಿ 4 ಪಾಸಿಟಿವ್ ಪ್ರಕರಣಗಳು ಏರಿಕೆ ಆಗಿವೆ.