ಬೆಂಗಳೂರು : ಒಂದೆಡೆ ಚೈತ್ರ ಮಾಸದ ಯುಗಾದಿ ಹಬ್ಬದ ಆಗಮನಕ್ಕೆ ನಾಡಿನ ಜನತೆ ಕಾಯ್ತಿದ್ದಾರೆ. ಹಿಂದೂಗಳ ಹೊಸ ವರ್ಷ ಆರಂಭವನ್ನು ಸ್ವಾಗತ ಮಾಡುವುದಕ್ಕೆ ಮನೆ ಮನೆಗಳಲ್ಲಿ ತಯಾರಿ ನಡೆಯುತ್ತಿದೆ. ನಗರದಲ್ಲಿ ಹಬ್ಬದ ವಾತಾವರಣ ಇದ್ದರೂ ಬೆಲೆ ಏರಿಕೆ ಮತ್ತು ಕೊರೊನಾ ಸೋಂಕು ಜನರನ್ನು ಹಬ್ಬದ ಆಚರಣೆಗೆ ಹಿಂದೇಟು ಹಾಕುವಂತೆ ಮಾಡಿದೆ.
ಯುಗಾದಿ ಪ್ರಯುಕ್ತ ಸೋಮವಾರ ನಗರದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಕೆಲವೇ ಗ್ರಾಹಕರು ಹೂವು-ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿದ್ರು. ಹಬ್ಬಕ್ಕೆ ತಳಿರು-ತೋರಣ ಸೇರಿದಂತೆ ಬೇವು ಬೆಲ್ಲ ಖರೀದಿಸಿದರು. ಆದ್ರೆ ಈ ಬಾರಿ ಹೂವು-ಹಣ್ಣಿನ ಬೆಲೆ ಗಗನಕ್ಕೇರಿದ್ದು, ಕೊರೊನಾ ನಡುವೆ ಬೆಲೆಯೇರಿಕೆ ಬಿಸಿಯಿಂದ ಜನ್ರು ಬೇಸರಗೊಂಡಿದ್ದಾರೆ.
ಈ ಯುಗಾದಿಗೆ ಹೂವು-ಹಣ್ಣು ಪ್ರತಿ ಕೆ.ಜಿ.ಗೆ ಎಷ್ಟು ದರವಿದೆ?
- ಮಲ್ಲಿಗೆ ಹೂವು - Kg 300-500
- ಸೇವಂತಿಗೆ - Kg 250
- ಗುಲಾಬಿ - Kg 350
- ಸೇಬು - Kg 200
- ದಾಳಿಂಬೆ - Kg 100-200
- ಬೇವು-ಮಾವು - 1 ಕಟ್ಟು 30ರೂಪಾಯಿ
ಒಂದೆಡೆ ಗ್ರಾಹಕರು ಬೆಲೆ ಏರಿಕೆಯಿಂದ ಹೆಚ್ಚು ವಸ್ತುಗಳನ್ನು ಖರೀದಿಸುವ ಬದಲು ಖರ್ಚು ನಿಭಾಯಿಸೋಕೆ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡ್ತಿದ್ದಾರೆ. ಈ ಹಬ್ಬದಿಂದ ಹೆಚ್ಚು ಆದಾಯ ಬರುತ್ತೆ ಅಂತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರಿಗಳು ಗ್ರಾಹಕರು ಬಂದ್ರೂ ಕೂಡಾ ನಮಗೆ ವ್ಯಾಪಾರ ಆಗ್ತಿಲ್ಲ. ದುಬಾರಿ ಅಂತ ಜನ್ರು ಹೆಚ್ಚು ಖರೀದಿ ಮಾಡ್ತಿಲ್ಲ. ಜತೆಗೆ ಈ ಬಾರಿ ಕೊರೊನಾ ಭಯಕ್ಕೆ ಖರೀದಿಸಲು ಬರೋಕೆ ಹಿಂದೇಟು ಹಾಕ್ತಿದ್ದಾರೆ ಅಂತಿದ್ದಾರೆ.
ಇನ್ನೊಂದೆಡೆ ಹಬ್ಬದ ನಿಮಿತ್ತ ನಗರ ಕಾಡುಮಲ್ಲೇಶ್ವರಂ ದೇವಸ್ಥಾನ, ಕನ್ನೀಕಾ ಪರಮೇಶ್ವರಿ ದೇವಸ್ಥಾನ, ಗಂಗಮ್ಮದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿಯೂ ಸಕಲ ಸಿದ್ದತೆಯನ್ನು ನಡೆಸಲಾಗ್ತಿದೆ. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದ್ರಿಂದ ಮಾಸ್ಕ್ ಸ್ಯಾನಿಟೈಜರ್ ಬಳಸಲಾಗ್ತಿದೆ. ಕಡ್ಡಾಯವಾಗಿ ಭಕ್ತಾದಿಗಳು ದೇವಸ್ಥಾನಕ್ಕೆ ಬರುವವರು ಮಾಸ್ಕ್ ಬಳಸಬೇಕು. ಜೊತೆಗೆ ಕೆಲ ದೇವಸ್ಥಾನಗಳಲ್ಲಿ ಇಂದು ಯಾವುದೇ ಪ್ರಸಾದ ವಿತರಣೆ ಇರೋದಿಲ್ಲ ಅಂತ ಸೂಚಿಸಲಾಗಿದೆ.
ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆ ಹಿನ್ನೆಲೆ ದೇವಸ್ಥಾನಗಳಲ್ಲೂ ಮುನ್ನಚ್ಚೆರಿಕೆ ತೆಗೆದುಕೊಳ್ಳಲಾಗಿದೆ. ಈ ಚೈತ್ರ ಮಾಸದ ಯುಗಾದಿಹಬ್ಬಕ್ಕೆ ಬೆಲೆ ಏರಿಕೆ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಶಾಕ್ ನೀಡಿದೆ. ಹೀಗಿದ್ರೂ ಕೂಡಾ ಬರುವ ಹಬ್ಬವನ್ನ ಮಾಡ್ಲೇಬೇಕು ಅಂತ ಜನರು ಬಜೆಟ್ ನೋಡ್ಕೊಂಡು ಹಬ್ಬ ಮಾಡೋಕೆ ಮುಂದಾಗಿದ್ದಾರೆ.