ಕೆ.ಆರ್.ಪುರ (ಬೆಂಗಳೂರು): ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ 16 ದಿನಗಳಲ್ಲಿ160 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿರುವ ಎಚ್ಎಎಲ್ ಸಂಸ್ಥೆಯ ಕಾರ್ಯಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಿಯಂತ್ರಣ ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಸಚಿವರು, ಈ ಕೋವಿಡ್ ಕೇಂದ್ರದಲ್ಲಿ ಒಟ್ಟು160 ಹಾಸಿಗೆಗಳಿದ್ದು, ಮೂಲಭೂತ ಸೌಕರ್ಯಗಳಾದ ಶೌಚಾಲಯ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕೇವಲ 16 ದಿನಗಳಲ್ಲಿ 160 ಬೆಡ್ಗಳನ್ನ ಒಳಗೊಂಡ ಕೋವಿಡ್ ಕೇರ್ ಸೆಂಟರ್ ಎಚ್ಎಎಲ್ ರಕ್ಷಣಾ ಸಂಸ್ಥೆಯು ತಮ್ಮ ಸಿಎಸ್ಆರ್ ಫಂಡ್ನಿಂದ ನಿರ್ಮಾಣ ಮಾಡಿದೆ. ಕೋವಿಡ್ ಕೇರ್ ಕೇಂದ್ರವನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನು ಮುಂದಿನ ವಾರ ಉದ್ಘಾಟನೆ ಮಾಡಿ, ಮಹದೇವಪುರ ವಲಯದ ಕೋವಿಡ್ ಕೇರ್ ಸೆಂಟರ್ ಆಗಿ ಉಪಯೋಗ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.