ETV Bharat / state

ಮನೆಗಳ್ಳರಿಗೆ ಸಾಥ್ ಕೊಟ್ಟಿದ್ದ ಕಾನ್ಸ್​​ಟೇಬಲ್​​​ ಅರೆಸ್ಟ್ - ಜ್ಞಾನಭಾರತಿ ಠಾಣಾ ಪೊಲೀಸರು

ಮನೆಗಳ್ಳರಿಗೆ ಸಾಥ್ ಕೊಟ್ಟಿದ್ದ ಕಾನ್ಸ್​​ಟೇಬಲ್​ನನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

Constable who assisted the burglars was arrested
ಮನೆಗಳ್ಳರಿಗೆ ಸಾಥ್ ಕೊಟ್ಟಿದ್ದ ಕಾನ್​ಸ್ಟೇಬಲ್​ ಅರೆಸ್ಟ್
author img

By ETV Bharat Karnataka Team

Published : Oct 17, 2023, 2:42 PM IST

ಬೆಂಗಳೂರು: ರಕ್ಷಕನೇ ಭಕ್ಷಕನಾದ ಕಥೆಯಿದು. ಕಳ್ಳರನ್ನು ಹಿಡಿಯ ಬೇಕಾದವನೇ ಕಳ್ಳರ ಗುಂಪಿನ ನಾಯಕನಾದ ಸ್ಟೋರಿ ಇದು. ಮನೆ ಕಳ್ಳತನಕ್ಕೆ ಇಳಿದಿದ್ದ ಪೊಲೀಸ್ ಕಾನ್ಸ್​ಟೇಬಲ್​​ ಒಬ್ಬರನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಏರ್‌ಪೋರ್ಟ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಲ್ಲಪ್ಪ ಬಂಧಿತ ಪೊಲೀಸ್ ಕಾನ್ಸ್​ಟೇಬಲ್​​

ಈ ಹಿಂದೆ ಬನಶಂಕರಿ ಠಾಣೆಯ ಕ್ರೈಂ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಲ್ಲಪ್ಪ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ. ಪ್ರಕರಣವೊಂದರ ಆರೋಪಿಗಳ ವಿಚಾರಣೆ ವೇಳೆ ಯಲ್ಲಪನ ಪಾತ್ರ ಇರುವುದು ಬಯಲಾಗಿತ್ತು. ಪ್ರಾಥಮಿಕ ಹಂತದಲ್ಲಿ ಯಲಪ್ಪನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿದ್ದರಿಂದ ಆತನನ್ನ ಅಮಾನತುಗೊಳಿಸಿ, ತನಿಖೆಗೆ ಆದೇಶ ನೀಡಲಾಗಿತ್ತು.

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಪ್ಪನ ವಿರುದ್ಧ ಚಾರ್ಜ್​ಶೀಟ್​ ಸಹ ಸಲ್ಲಿಕೆಯಾಗಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದ ಯಲ್ಲಪ್ಪ ಮತ್ತೆ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜ್ಞಾನಭಾರತಿ, ಚಂದ್ರಾ ಲೇಔಟ್ ಹಾಗೂ ಚಿಕ್ಕಜಾಲ ವ್ಯಾಪ್ತಿಯಲ್ಲಿಯೂ ಯಲ್ಲಪ್ಪ ಮನೆಗಳ್ಳರಿಗೆ ಸಾಥ್ ನೀಡಿರುವುದು ಬಯಲಾಗಿದೆ. ಸದ್ಯ ಆರೋಪಿಯ ಕೃತ್ಯ ಬಯಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ಜ್ಞಾನಭಾರತಿ ಠಾಣಾ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನದ ಶೌಚಾಲಯದ ವಾಶ್ ಬೇಸಿನ್​ನಲ್ಲಿ 1.8 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.