ಬೆಂಗಳೂರು : ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಣೆ ಮಾಡಿದ್ದ ಸಿಬ್ಬಂದಿ, ತನಗೆ ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಹೆದರಿ ಕೆಎಸ್ಆರ್ಪಿ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
4ನೇ ಬೆಟಾಲಿಯನ್ ಕೆಎಸ್ಆರ್ಪಿಯಲ್ಲಿ ಕಾರ್ಯನಿರ್ವಹಿಸುವ 50 ವರ್ಷದ ಹೆಡ್ ಕಾನ್ಸ್ಟೇಬಲ್ ಜೂನ್ 20 ರಂದು ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ನಿನ್ನೆ ರಿಪೋರ್ಟ್ ಪಾಸಿಟಿವ್ ಬಂದ ಬಳಿಕ ಕಮಾಂಡ್ ಆಸ್ಪತ್ರೆಗೆ ಶಿಫ್ಟ್ ಮಾಡಲು ತಿಳಿಸಲಾಗಿತ್ತು. ಹೀಗಾಗಿ ನಿನ್ನೆ ರಾತ್ರಿ ಕೆ.ಎಸ್ ಆರ್ ಪಿ ಬಸ್ಸಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಓದಿ:ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪತ್ನಿ, ಮಗಳಿಗೂ ಅಂಟಿದ ಕೊರೊನಾ...!
50 ವರ್ಷದ ಕೆಎಸ್ ಆರ್ ಪಿ ಹೆಡ್ ಕಾನ್ಸ್ಟೇಬಲ್ ಕಳೆದ ಹಲವು ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು 11 ಜನರಿಗೆ ಈಗಾಗಲೇ ಕೊರೊನಾ ಪಾಸಿಟಿವ್ ಬಂದಿತ್ತು. ಈ 11ಜನರ ಸಂಪರ್ಕದಲ್ಲಿದ್ದ ಕಾರಣ ಕಳೆದ ಕೆಲ ದಿನಗಳಿಂದ ಈ ಕಾನ್ಸ್ಟೇಬಲ್ ಅವರನ್ನೂ ಕ್ವಾರಂಟೈನ್ ಮಾಡಲಾಗಿತ್ತು.