ETV Bharat / state

ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು: ಡಿಕೆಶಿ ವಿಶ್ವಾಸ

ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

KPCC President D.K. Shivakumar
ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು: ಡಿಕೆಶಿ ವಿಶ್ವಾಸ
author img

By

Published : Nov 4, 2020, 2:32 PM IST

ಬೆಂಗಳೂರು: ಮುನಿರತ್ನ ಅವರು ಡ್ರಾಮಾ, ಸಿನಿಮಾ ಮಾಡುತ್ತಾರೆ. ಆದರೆ, ನಾವು ಸಿನಿಮಾ ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್​ ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು: ಡಿ.ಕೆ. ಶಿವಕುಮಾರ್​ ವಿಶ್ವಾಸ

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುನಿರತ್ನ ಅವರು ಡ್ರಾಮಾ, ಸಿನಿಮಾ ಮಾಡುತ್ತಾರೆ. ನಮಗೂ ಅವರಿಗೂ ಇರುವುದ ಅದೇ ವ್ಯತ್ಯಾಸ. ಅವರು ನಟ, ನಿರ್ಮಾಪಕ ಹಾಗೂ ನಿರ್ದೇಶಕರು. ಅವರ ಹಾಗೆ ಸೆಟ್ ಹಾಕಿಸಿ, ಕಟ್, ಪೇಸ್ಟ್ ಎಲ್ಲಾ ಇಲ್ಲ ನಮ್ಮದು. ಮುನಿರತ್ನ ಅವರೇ ನೀವು ಸಿಎಂ ಆಗಬೇಡ ಅಂದವರು ಯಾರು?. ಇದು ಬಿಜೆಪಿ ಸರ್ಕಾರ ಅಲ್ಲ. ಕಾಂಗ್ರೆಸ್ ಬಿಜೆಪಿ ಸರ್ಕಾರ ಎಂದು ಲೇವಡಿ ಮಾಡಿದರು.

ಆರ್ ಆರ್ ನಗರದಲ್ಲಿ ಶೇಕಡವಾರು ಮತದಾನ ಕಡಿಮೆ ವಿಚಾರ ಮಾತನಾಡಿ, ಬೆಂಗಳೂರು ನಗರದಲ್ಲಿ ವಿದ್ಯಾವಂತ ಮತದಾರರು ನಾವು ಯಾಕೆ ಬಂದು ಮತದಾನ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿ ಅವರು ಈ ತೀರ್ಮಾನ ಮಾಡಿದ್ದಾರೆ. ಸಿಎಂ ಸೇರಿದಂತೆ ಎಲ್ಲ ಬಂದು ವೋಟ್ ಹಾಕಿ ವೋಟ್ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರಿಗೆ ಇಷ್ಟವಿಲ್ಲದೇ ವೋಟ್ ಹಾಕಿಲ್ಲ ಎಂದರು.

ಮಾಧ್ಯಮಗಳ ಮೇಲೆ ಬೇಸರ: ರಾಜಕೀಯ ಚದುರಂಗದಲ್ಲಿ ಮಾಧ್ಯಮಗಳ ವಿಶ್ಲೇಷಣೆ ನಡೆಯುತ್ತಿದೆ. ನೀವು ಏನ್ ಬೇಕೊ ಮಾಡಿ. ಮಾಧ್ಯಮ ಜಡ್ಜ್ ಆಗಿದ್ದೀರಿ, ವಿಚಾರಣೆಯ ಆಫೀಸರ್ಸ್ ಆಗಿದ್ದೀರಿ. ಎಲ್ಲವನ್ನೂ ನೋಡುತ್ತಿದ್ದೇವೆ. ಯಾರದ್ದು ಬೇಕು ಅಷ್ಟೇ ತೋರಿಸುವುದು, ನಿಮ್ಮ ಅನುಕೂಲಕ್ಕೆ ಏನ್ ಬೇಕು ಹಾಗೆ ಮಾಡುತ್ತಿದ್ದೀರಾ? ನಿಮ್ಮ ಅನುಕೂಲಕ್ಕೆ ಹೇಗ್ ಬೇಕು ಹಾಗೆ ಮಾಡಿ ಎಂದು ಸಲಹೆಯಿತ್ತರು.

ಮತದಾರರ ಮೇಲೆ ವಿಶ್ವಾಸವಿದೆ: ನಮ್ಮ ಮತದಾರ ಮೇಲೆ ನಮಗೆ ವಿಶ್ವಾಸ ಇದೆ. ಎಲ್ಲ ಮತದಾರರಿಗೆ ಅಭಿನಂದನೆಗಳು. ಜೊತೆಗೆ ನಮ್ಮ ಕಾರ್ಯಕರ್ತರು, ಬೇರೆ ಪಾರ್ಟಿ ಕಾರ್ಯಕರ್ತರು ಸಹಾಯ ಮಾಡಿದ್ದಾರೆ. ಯಾರು ಸಹಾಯ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಎರಡೂ ಪಕ್ಷದ ಕಡೆಯಿಂದ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರ ಎಂದರು.

ಕಾಂಗ್ರೆಸ್ ಗೆಲುವು: ರೂಲಿಂಗ್ ಪಾರ್ಟಿ ಇದ್ದಾಗ ಹೇಗೆ ಆಗುತ್ತೆ ಅಂತ ಗೊತ್ತಿದೆ. ಚುನಾವಣಾ ಆಯೋಗ ದೂರು ತೆಗೆದುಕೊಂಡು ಸ್ವಲ್ಪ ಆ್ಯಕ್ಟ್ ಮಾಡಿದ್ರು. ತನಿಖೆ ಮಾಡಿದ್ದಾರೆ ಅದು ಗೊತ್ತಿದೆ. ನನಗಿಂತ ಸಿದ್ದರಾಮಯ್ಯ ಅವರು ಅನುಭವ ಇರುವವರು. ಯಾರು ಏನೇ ಲೆಕ್ಕಾಚಾರ ಹಾಕಲಿ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.