ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಇಂದು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಆಯೋಗಕ್ಕೆ ದೂರು ಸಲ್ಲಿಸಿದರು.
ನಂತರ ಮಾತನಾಡಿದ ರಮೇಶ್ ಬಾಬು, ಚು.ಆಯೋಗಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲಾಗಿದೆ. 2019ರ ಉಪಚುನಾವಣೆ ಪ್ರಮಾಣ ಪತ್ರದನ್ವಯ ಅಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಸೌಭಾಗ್ಯ ಶುಗರ್ ಕಂಪನಿ ಸೇರಿ ಬೇರೆ ಬೇರೆ ಕಂಪನಿಯ ವಿಚಾರವಾಗಿ ದಾಖಲಾತಿ ಕೊಟ್ಟಿಲ್ಲ. ಅವರ ಕುಟುಂಬದ ಸದಸ್ಯರ ಹೆಸರಲ್ಲಿ ಇರುವ ದಾಖಲೆ ಕೊಟ್ಟಿಲ್ಲ. ಕೇಂದ್ರ ಹಾಗೂ ರಾಜ್ಯ ಎರಡಲ್ಲೂ ದೂರು ದಾಖಲು ಮಾಡಲಾಗುತ್ತಿದೆ ಎಂದರು.
ಪಕ್ಷದ ವಕ್ತಾರ ಎಂ.ಲಕ್ಷಣ್ ಮಾತನಾಡಿ, ಸೌಭಾಗ್ಯ ಶುಗರ್ ಪ್ರೈ ಲಿ 9 ಬ್ಯಾಂಕ್‌ಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರ ಹೆಸರಲ್ಲಿ 578 ಕೋಟಿ ರೂ ಸಾಲ ಪಡೆದಿದ್ದಾರೆ. ಈ ಕಂಪನಿ ದಿವಾಳಿ ಅಂತ ಘೋಷಣೆ ಮಾಡಿದ್ದರೂ ಕೂಡ ಕಂಪನಿ ನಡೆಯುತ್ತಿದೆ. ಬೇನಾಮಿ ಅಭಿನಂದನ್ ಪಾಟೀಲ್ ಹೆಸರಲ್ಲಿ ನಡೆಸುತ್ತಿದ್ದಾರೆ. 2018 ಹಾಗೂ 2019 ರ ಉಪ ಚುನಾವಣೆಯಲ್ಲಿ ಪತ್ರ ಡಿಪೆಂಡೆಂಟ್ ಅಂತ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ವರ್ಚಸ್ಸಿದೆ, ಶೀಘ್ರದಲ್ಲೇ ಅವರಿಗೆ ದೊಡ್ಡ ಜವಾಬ್ದಾರಿ: ಅರುಣ್ ಸಿಂಗ್