ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ರೌಡಿಗಳ ಪಡೆ ಕಟ್ಟುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರಬುದ್ಧರಿಗೆ ಬಿಜೆಪಿಯಲ್ಲಿ ಜಾಗವಿಲ್ಲ, ಅಲ್ಲೇನಿದ್ದರೂ ಲಂಚಕೋರರು ಹಾಗೂ ರೌಡಿಗಳಿಗಷ್ಟೇ ಬೆಲೆ! ವೋಟರ್ ಲಿಸ್ಟಿಂದ ಮತದಾರರ ಹೆಸರು ತೆಗೆದದ್ದಾಯಿತು. ಈಗ ಚುನಾವಣೆ ಸಮಯದಲ್ಲಿ ಮತದಾರರನ್ನು ಹೆದರಿಸಲು BJPRowdyMorcha.com ಕಟ್ಟುತ್ತಿದೆ ಬಿಜೆಪಿ! ಅಲ್ಲವೇ ಬಸವರಾಜ ಬೊಮ್ಮಾಯಿ? ಸುಸಂಸ್ಕೃತ ಪಕ್ಷಕ್ಕೆ ಸೇರಲು ಬೇಕಾದ ಅರ್ಹತೆ ಕೊಲೆ ಸುಲಿಗೆಯೇ? ಎಂದು ಪ್ರಶ್ನಿಸಿದ್ದಾರೆ.
ಇಂದಿನ ರೌಡಿಗಳೇ ಮುಂದಿನ ಬಿಜೆಪಿ ಮುಖಂಡರು : ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಂಡು ಇವರೇ ದೇಶಪ್ರೇಮಿಗಳು ಎನ್ನುತ್ತಾರಾ ಎಂಬ ಆತಂಕ ಎದುರಾಗಿದೆ. ಚುನಾವಣೆ ಹೊತ್ತಲ್ಲಿ ಏನೇನೋ ಸಮರ್ಥನೆ ಕೊಟ್ಟು 30-40 ಕೊಲೆ ಮಾಡಿದಂತಹ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿ ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ದೇಶಪ್ರೇಮಿಗಳು ಎನ್ನುತ್ತಾರಾ ಎಂಬ ಆತಂಕ ನನ್ನದು.
ಅದರಲ್ಲೂ ಬಿಜೆಪಿಯ ಸಿ ಟಿ ರವಿ ಬೇರೆ ಇಸ್ಲಾಮಾಬಾದ್ ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಎಂದು ಆಗಾಗ್ಗೆ ಹೇಳುವುದನ್ನು ನೋಡಿದರೆ ಮೇಲಿನ ಮಾತು ವಾಸ್ತವಕ್ಕೆ ಹತ್ತಿರವಿದೆಯೇನೋ ಅನಿಸುತ್ತದೆ ಎಂದಿದ್ದಾರೆ. ಎಷ್ಟೇ ಆದರೂ ಗೋಡ್ಸೆಯಂತಹ ದೇಶಕ್ಕೆ ಮೊದಲ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ? ಇವರಿಂದ ಇನ್ನೇನು ನಿರೀಕ್ಷಿಸಬಹುದು ಎಂದು ಕೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸೇರಲು ರೌಡಿಗಳು ಪರೇಡ್ಗೆ ಸಜ್ಜಾಗಿದ್ದಾರೆ: ಸಿಎಂಗೆ ಬಾಂಬೆ ಬೊಮ್ಮಣ್ಣ ಎಂದು ಕಾಂಗ್ರೆಸ್ ಟ್ವೀಟ್ ಅಭಿಯಾನ