ETV Bharat / state

ಕಾಂಗ್ರೆಸ್​ನಿಂದ ಮುಂದುವರಿದ ಪೇಸಿಎಂ ಅಭಿಯಾನ: ಗ್ರಾಫಿಕ್ ವಿಡಿಯೋ ಬಿಡುಗಡೆ - ಬಿಜೆಪಿ ಸರ್ಕಾರ

ರಾಜ್ಯ ಸರ್ಕಾರದ ಭ್ರಷ್ಟಾಚಾರ ಆರೋಪದ ಬಗ್ಗೆ ಶೇ 40ರಷ್ಟು ಕಮಿಷನ್​ ಸರ್ಕಾರ ಎಂಬ ಜಾಹೀರಾತನ್ನು ಕಾಂಗ್ರೆಸ್​ ನೀಡಿದೆ. ಅಲ್ಲದೇ, ಪೇಸಿಎಂ ಎಂಬ ಅಣಕದ ಗ್ರಾಫಿಕ್ ವಿಡಿಯೋ ಬಿಡುಗಡೆ ಮಾಡಿದೆ.

congress-releases-graphic-video-on-state-government-corruption
ಕಾಂಗ್ರೆಸ್​ನಿಂದ ಮುಂದುವರಿದ ಪೇಸಿಎಂ ಅಭಿಯಾನ: ಗ್ರಾಫಿಕ್ ವಿಡಿಯೋ ಬಿಡುಗಡೆ
author img

By

Published : Sep 23, 2022, 7:49 PM IST

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಪೇಸಿಎಂ ಅಭಿಯಾನವನ್ನು ಮುಂದುವರಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಪೇಸಿಎಂ ಅಭಿಯಾನ ನಡೆಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರಕ್ಕೆ ತೀವ್ರ ಮಜುಗರ ಉಂಟಾಗುತ್ತಿದೆ. ಇದನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮುಂದುವರಿಸಿರುವ ಬೆನ್ನಲ್ಲೇ ಇನ್ನೊಂದು ಹಂತದಲ್ಲಿ ಅಭಿಯಾನ ಕಾಂಗ್ರೆಸ್ ಆರಂಭಿಸಿದೆ.

ಬೆಂಗಳೂರು ನಗರದಲ್ಲಿ ಸಂಚರಿಸುವ ಕೆಲ ಆಟೋಗಳಿಗೆ ಶೇ 40ರಷ್ಟು ಕಮಿಷನ್​ ಸರ್ಕಾರ ಎಂಬ ಜಾಹೀರಾತು ಒಳಗೊಂಡ ಕವರ್​ಗಳನ್ನ ಅಳವಡಿಸಿ ಪ್ರಚಾರ ಮಾಡಿದರೆ, ಸಂಜೆಯ ಹೊತ್ತಿಗೆ ಗ್ರಾಫಿಕ್ ವಿಡಿಯೋ ಸಹ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಈ ಅಭಿಯಾನವನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಸಾಗಿದೆ.

congress-releases-graphic-video-on-state-government-corruption
ಕಾಂಗ್ರೆಸ್​ನಿಂದ ಮುಂದುವರಿದ ಪೇಸಿಎಂ ಅಭಿಯಾನ

ಇದನ್ನೂ ಓದಿ: ಕಾಂಗ್ರೆಸ್​​ನ ಪೇಸಿಎಂ ಅಭಿಯಾನಕ್ಕೆ ತಿರುಗೇಟು: ಕೈಪೇ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ ಬಿಜೆಪಿ

ಮೂರು ದಿನದ ಹಿಂದೆ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ರಾತೋರಾತ್ರಿ ನಗರದ ಹಲವೆಡೆ ಸಿಎಂ ಭಾವಚಿತ್ರ ಒಳಗೊಂಡ ಪೇಸಿಎಂ ಕ್ಯೂಆರ್ ಕೋಡ್ ಒಳಗೊಂಡ ಪೋಸ್ಟರ್​ಗಳನ್ನು ಅಂಟಿಸುವ ಮೂಲಕ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿತ್ತು. ಇದಾದ ಬಳಿಕ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವಿವಿಧ ಹಗರಣಗಳ ಮಾಹಿತಿ ನೀಡಿ ಲೇವಡಿ ಮಾಡಲಾಗಿತ್ತು.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಪೇಸಿಎಂ ಪೋಸ್ಟರ್ ಅಭಿಯಾನ: ಸಿಎಂ ನಿವಾಸಕ್ಕೆ ಹೆಚ್ಚಿದ ಪೊಲೀಸ್ ಭದ್ರತೆ

ನಿನ್ನೆ ಅಷ್ಟೇ ಪೇ ಸಿಎಂ ಪೋಸ್ಟರ್ ಜೊತೆಗೆ ಪಿಎಸ್ಐ ಸ್ಕ್ಯಾಮ್ ₹80,00,000, ₹40% ಕಾಂಟ್ರಾಕ್ಟರ್ಸ್, 50 ಲಕ್ಷ ಅಸಿಸ್ಟೆಂಟ್ ಪ್ರೊಫೆಸರ್, 30 ಲಕ್ಷ ಜೂನಿಯರ್ ಇಂಜಿನಿಯರ್ಸ್ ನೇಮಕಕ್ಕೆ ಹಣ ರಿಸೀವ್ ಆಗಿದೆ ಎಂಬಂತೆ ಪೋಸ್ಟರ್ ರಚನೆ ಮಾಡಿ ಹರಿಬಿಡಲಾಗಿತ್ತು. ಇದೀಗ ಇಂದು ಆಟೋಗಳಿಗೆ 40% ಸರ್ಕಾರ ಎಂಬ ಜಾಹೀರಾತು ನೀಡಲಾಗಿದೆ. ಇಷ್ಟೇ ಅಲ್ಲ, ಎಸ್​​ಐ ಪೋಸ್ಟ್​, ಲಕ್ಚರ್ ಪೋಸ್ಟ್​, ಬಿಡಿಎ ಸೈಟ್​ಗೆ ಪೇಸಿಎಂ ಮಾಡಬಹುದು ಎಂಬ ಅಣಕದ ಗ್ರಾಫಿಕ್ ವಿಡಿಯೋ ಸಹ ಬಿಡುಗಡೆ ಮಾಡಿದೆ.

ಕಾಂಗ್ರೆಸ್​ನಿಂದ ಮುಂದುವರಿದ ಪೇಸಿಎಂ ಅಭಿಯಾನ

ಇನ್ನು, ರೇಸ್​ ಕೋರ್ಸ್ ರಸ್ತೆಯಲ್ಲಿ ಪೇಸಿಎಂ ಪೋಸ್ಟರ್​ಗಳನ್ನು ಅಂಟಿಸುವ ಪ್ರತಿಭಟನೆಯಲ್ಲಿ ರಾಷ್ಟ್ರೀಯ ನಾಯಕರಾದ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್​ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮತ್ತಿತರ ನಾಯಕರು ಪಾಲ್ಗೊಂಡಿದ್ದು, ಈ ವೇಳೆ ನಾಯಕರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.