ETV Bharat / state

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ ನಾಯಕರ ಪ್ರತಿಭಟನೆ

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ

author img

By

Published : Aug 19, 2022, 4:00 PM IST

Updated : Aug 19, 2022, 9:58 PM IST

ಬೆಂಗಳೂರು: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ‌ ಸಚಿವ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ರಮೇಶ್ ಕುಮಾರ್, ರಾಮಲಿಂಗಾ ರೆಡ್ಡಿ, ರಿಜ್ವಾನ್ ಹರ್ಷದ್, ಸೌಮ್ಯಾ ರೆಡ್ಡಿ ಮಾಜಿ ಸಂಸದ ಉಗ್ರಪ್ಪ ಸೇರಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನೆ ವೇಳೆ ಮೊಟ್ಟೆ ಪ್ರದರ್ಶನ ಮಾಡಿ ತಮ್ಮ ನಾಯಕನಿಗೆ ಎಸೆದಿರುವ ವಿರುದ್ಧ ಕೈ ನಾಯಕರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. "ನೀವು ಸಿದ್ದರಾಮಯ್ಯಗೆ ಮೊಟ್ಟೆಯಿಂದ ಹೊಡೆದಿದ್ದೀರಿ‌. ಹೊಟ್ಟೆ ತುಂಬುವ ಅನ್ನಭಾಗ್ಯ ಕೊಟ್ಟದ್ದು ಸಿದ್ದರಾಮಯ್ಯ. ಅನ್ನಭಾಗ್ಯದಿಂದ ಮೊಟ್ಟೆ ಹೊಡೆಯುವಷ್ಟು ಶಕ್ತಿ ಬಂದಿದ್ದು ಸಂತೋಷ" ಎಂದು ಪೋಸ್ಟರ್ ಪ್ರದರ್ಶನ ಮಾಡಿದರು.

ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಹೇಗೆ ನೋಡಿಲ್ವೇ?: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡುತ್ತಾ, ಆರ್. ಎಸ್.ಎಸ್, ಬಿಜೆಪಿಯವರು ಗೋಡ್ಸೆ ಅಭಿಮಾನಿಗಳು. ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಹೇಗೆ ನೋಡಿಲ್ವೇ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರ ಪ್ರತಿಭಟನೆ

ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಿಮ್ಮ ನಿಷ್ಠೆ ಸಂವಿಧಾನಕ್ಕೆ ಬದ್ಧವಾಗಿರಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠೆ ಇರಬಾರದು. ಹಾಗೇನಾದರೂ ನೀವು ತಿಳಿದುಕೊಂಡಿದ್ದರೆ ತಪ್ಪು. ಭೇದ ಭಾವವಿಲ್ಲದೆ ನೀವು ಅಧಿಕಾರ ಚಲಾಯಿಸಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಸಿದ್ದರಾಮಯ್ಯ ಅವರ ಮೇಲೆ‌ ಮೊಟ್ಟೆ ಎಸೆದಿದ್ದು ಪ್ರಜಾಪ್ರಭುತ್ವದ ಮೇಲೆ ಎಸೆದಂತೆ. ಸಂವಿಧಾನದ ಮೇಲೆ ಎಸೆದಂತೆ. ಕುಣಿಯಲಾರದ ನಟಿ ನೆಲ ಡೊಂಕು ಎಂಬಂತೆ ಆಗಿದೆ‌. ಕೈಲಾಗದವರು ಮೈ ಪರಚಿಕೊಂಡಂತೆ‌. ಇದು ವ್ಯವಸ್ಥಿತ ಸಂಚು‌ ಎಂದು ಹರಿಹಾಯ್ದರು.

ಭದ್ರತಾ ವೈಫಲ್ಯವಾಗಿದೆ: ಪ್ರತಿಭಟನೆ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಮಾಜಿ‌ ಮುಖ್ಯಮಂತ್ರಿ ಹೋದ ಸಂಧರ್ಭದಲ್ಲಿ ‌ಭದ್ರತಾ ವೈಪಲ್ಯವಾಗಿದೆ. ಆರೋಪಿಗಳನ್ನು ಬಿಜೆಪಿ ಶಾಸಕರು ಬಿಡಿಸಿಕೊಂಡು ಬಂದಿದ್ದಾರೆ. ನೀವೇ ಈ ರೀತಿ‌ ಮಾಡಿದ್ರೆ ನಮ್ಮ ಯುವ‌ ಕಾಂಗ್ರೆಸ್ ಅವರು ಇದೇ ರೀತಿ ಮಾಡ್ತಾರೆ. ಹೀಗಾಗಿ ಇದೆಲ್ಲ ಬಿಡಿ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಲು ಬಂದವರು ಪೊಲೀಸ್ ವಶಕ್ಕೆ

Last Updated : Aug 19, 2022, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.