ಬೆಂಗಳೂರು: "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿರುವುದರಿಂದ ರೌಡಿಗಳನ್ನು ಮುಂದಿಟ್ಟು ಬೆದರಿಸಿ ಗೆಲುವಿನ ತಂತ್ರಗಾರಿಕೆ ರೂಪಿಸಲು ಬಿಜೆಪಿ ಯತ್ನಿಸುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ. "ಬಿಜೆಪಿಗೆ ರೌಡಿಶೀಟರ್ಗಳನ್ನು ಕಂಡರೆ ಅದೇನು ಮಮಕಾರ, ವಾತ್ಸಲ್ಯ, ಅದೇನು ಪ್ರೀತಿ. ಬಿಜೆಪಿ ರೌಡಿ ಮೋರ್ಚಾಗೆ ಸೇರ್ಪಡೆಗೊಳಿಸಲು ರೌಡಿಶೀಟ್ ತೆಗೆದು ಅನುವು ಮಾಡಿಕೊಡುತ್ತಿರುವುದೇ ಆರಗ ಜ್ಞಾನೇಂದ್ರ" ಎಂದು ಲೇವಡಿ ಮಾಡಿದೆ.
-
ಬಿಜೆಪಿಗೆ ರೌಡಿ ಶೀಟರ್ಸ್ ಕಂಡರೆ ಅದೇನು ಮಮಕಾರ, ಅದೇನು ವಾತ್ಸಲ್ಯ, ಪ್ರೀತಿ!#BJPRowdyMorcha ಗೆ ಸೇರ್ಪಡೆಗೊಳಿಸಲು ರೌಡಿ ಶೀಟ್ ತೆಗೆದು ಅನುವು ಮಾಡಿ ಕೊಡುತ್ತಿರುವುದೇ @JnanendraAraga ಅವರೇ?
— Karnataka Congress (@INCKarnataka) February 19, 2023 " class="align-text-top noRightClick twitterSection" data="
ಸೋಲುವ ಭಯದಲ್ಲಿರುವ @BJP4Karnataka ರೌಡಿಗಳನ್ನ ಮುಂದಿಟ್ಟುಕೊಂಡು ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ಎದುರಿಸುವ ತಂತ್ರ ಹೂಡಿರುವಂತಿದೆ. pic.twitter.com/ML4GhPJEW3
">ಬಿಜೆಪಿಗೆ ರೌಡಿ ಶೀಟರ್ಸ್ ಕಂಡರೆ ಅದೇನು ಮಮಕಾರ, ಅದೇನು ವಾತ್ಸಲ್ಯ, ಪ್ರೀತಿ!#BJPRowdyMorcha ಗೆ ಸೇರ್ಪಡೆಗೊಳಿಸಲು ರೌಡಿ ಶೀಟ್ ತೆಗೆದು ಅನುವು ಮಾಡಿ ಕೊಡುತ್ತಿರುವುದೇ @JnanendraAraga ಅವರೇ?
— Karnataka Congress (@INCKarnataka) February 19, 2023
ಸೋಲುವ ಭಯದಲ್ಲಿರುವ @BJP4Karnataka ರೌಡಿಗಳನ್ನ ಮುಂದಿಟ್ಟುಕೊಂಡು ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ಎದುರಿಸುವ ತಂತ್ರ ಹೂಡಿರುವಂತಿದೆ. pic.twitter.com/ML4GhPJEW3ಬಿಜೆಪಿಗೆ ರೌಡಿ ಶೀಟರ್ಸ್ ಕಂಡರೆ ಅದೇನು ಮಮಕಾರ, ಅದೇನು ವಾತ್ಸಲ್ಯ, ಪ್ರೀತಿ!#BJPRowdyMorcha ಗೆ ಸೇರ್ಪಡೆಗೊಳಿಸಲು ರೌಡಿ ಶೀಟ್ ತೆಗೆದು ಅನುವು ಮಾಡಿ ಕೊಡುತ್ತಿರುವುದೇ @JnanendraAraga ಅವರೇ?
— Karnataka Congress (@INCKarnataka) February 19, 2023
ಸೋಲುವ ಭಯದಲ್ಲಿರುವ @BJP4Karnataka ರೌಡಿಗಳನ್ನ ಮುಂದಿಟ್ಟುಕೊಂಡು ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ಎದುರಿಸುವ ತಂತ್ರ ಹೂಡಿರುವಂತಿದೆ. pic.twitter.com/ML4GhPJEW3
"ಸೋಲುವ ಭಯದಲ್ಲಿರುವ ರಾಜ್ಯ ಬಿಜೆಪಿ ರೌಡಿಗಳನ್ನು ಮುಂದಿಟ್ಟುಕೊಂಡು ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ಎದುರಿಸುವ ತಂತ್ರ ಹೂಡಿರುವಂತಿದೆ. ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರಿಗೆ ರೌಡಿಶೀಟ್ ಕೊಡುಗೆ, ಅಸಲಿ ರೌಡಿಗಳಿಗೆ ರೌಡಿಶೀಟ್ ತೆರವು ಮಾಡುವ ಉಡುಗೊರೆ ನೀಡಲಾಗಿದೆ. ರಾಜ್ಯ ಬಿಜೆಪಿ ದೃಷ್ಟಿಯಲ್ಲಿ ವಿದ್ಯಾರ್ಥಿಗಳು, ಹೋರಾಟಗಾರರು ರೌಡಿಗಳಂತೆ ಕಾಣುತ್ತಾರೆ. ಹಾಗಾದರೆ ರೌಡಿಗಳು ಮಾತ್ರ ಸಭ್ಯಸ್ಥರಂತೆ ಕಾಣುತ್ತಾರೆಯೇ? ಆರಗ ಜ್ಞಾನೇಂದ್ರ ಅವರು ಬಿಜೆಪಿ ರೌಡಿ ಮೋರ್ಚಾಗೆ ಸದಸ್ಯರನ್ನು ತಯಾರು ಮಾಡುತ್ತಿರುವಂತಿದೆ" ಎಂದಿದೆ.
-
ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಪ್ರಶ್ನೆಯೇ ಇಲ್ಲ, ಹೀಗಿರುವಾಗ @JoshiPralhad ಸಿಎಂ ಆಗುವ ಪ್ರಶ್ನೆ ಉದ್ಭವಿಸುವುದು ಎಲ್ಲಿಂದ!!
— Karnataka Congress (@INCKarnataka) February 19, 2023 " class="align-text-top noRightClick twitterSection" data="
ಸಿಎಂ ಸೀಟಿಗಾಗಿ ಇಡೀ ಬಿಜೆಪಿಯನ್ನು ತನ್ನ ಕಂಟ್ರೋಲಿಗೆ ತೆಗೆದುಕೊಂಡು ಆಡಿಸುತ್ತಿರುವ @blsanthosh ರಾಜ್ಯದ ಕಡೆ ತಲೆ ಹಾಕಲು ಬಿಡುವುದೂ ಇಲ್ಲ.
ಹಾಗೆಯೇ ಜೋಶಿ ಮುಖ ತೋರಿಸಿದರೆ ನಾಲ್ಕು ಮತವೂ ಬರುವುದಿಲ್ಲ! pic.twitter.com/NZZUW4FoJt
">ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಪ್ರಶ್ನೆಯೇ ಇಲ್ಲ, ಹೀಗಿರುವಾಗ @JoshiPralhad ಸಿಎಂ ಆಗುವ ಪ್ರಶ್ನೆ ಉದ್ಭವಿಸುವುದು ಎಲ್ಲಿಂದ!!
— Karnataka Congress (@INCKarnataka) February 19, 2023
ಸಿಎಂ ಸೀಟಿಗಾಗಿ ಇಡೀ ಬಿಜೆಪಿಯನ್ನು ತನ್ನ ಕಂಟ್ರೋಲಿಗೆ ತೆಗೆದುಕೊಂಡು ಆಡಿಸುತ್ತಿರುವ @blsanthosh ರಾಜ್ಯದ ಕಡೆ ತಲೆ ಹಾಕಲು ಬಿಡುವುದೂ ಇಲ್ಲ.
ಹಾಗೆಯೇ ಜೋಶಿ ಮುಖ ತೋರಿಸಿದರೆ ನಾಲ್ಕು ಮತವೂ ಬರುವುದಿಲ್ಲ! pic.twitter.com/NZZUW4FoJtರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಪ್ರಶ್ನೆಯೇ ಇಲ್ಲ, ಹೀಗಿರುವಾಗ @JoshiPralhad ಸಿಎಂ ಆಗುವ ಪ್ರಶ್ನೆ ಉದ್ಭವಿಸುವುದು ಎಲ್ಲಿಂದ!!
— Karnataka Congress (@INCKarnataka) February 19, 2023
ಸಿಎಂ ಸೀಟಿಗಾಗಿ ಇಡೀ ಬಿಜೆಪಿಯನ್ನು ತನ್ನ ಕಂಟ್ರೋಲಿಗೆ ತೆಗೆದುಕೊಂಡು ಆಡಿಸುತ್ತಿರುವ @blsanthosh ರಾಜ್ಯದ ಕಡೆ ತಲೆ ಹಾಕಲು ಬಿಡುವುದೂ ಇಲ್ಲ.
ಹಾಗೆಯೇ ಜೋಶಿ ಮುಖ ತೋರಿಸಿದರೆ ನಾಲ್ಕು ಮತವೂ ಬರುವುದಿಲ್ಲ! pic.twitter.com/NZZUW4FoJt
"ಬಿಜೆಪಿ ಸರ್ಕಾರ ಮಹಿಳೆಯರು ತಲೆಗೆ ಮುಡಿಯುವ ಹೂವನ್ನು ಕಿವಿಯ ಮೇಲೆ ಮುಡಿಸುತ್ತಿದೆ. ಕಳೆದ ಬಜೆಟ್ನಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಭರವಸೆ ನೀಡಿದ್ದು ಏನಾಯ್ತು ಬಸವರಾಜ ಬೊಮ್ಮಾಯಿ ಅವರೇ? ನಿಮ್ಮ ಬೋಗಸ್ ಭರವಸೆ ನಂಬಲು ಜನರನ್ನು ಮೂರ್ಖರೆಂದು ತಿಳಿದಿರುವಿರಾ? ಉಚಿತ ಬಸ್ ಪಾಸ್ ಎಂಬುದು ಕಿವಿ ಮೇಲೆ ಹೂವು" ಎಂದು ಕಿಚಾಯಿಸಿದೆ.
ಇದನ್ನೂ ಓದಿ: ಕೆಲ ರಾಜಕಾರಣಿಗಳಿಗೆ ಬ್ರಾಹ್ಮಣ ಸಮುದಾಯದ ಕುರಿತು ದೃಷ್ಟಿದೋಷವಿದೆ, ತಪಾಸಣೆ ಅಗತ್ಯ: ಎಸ್ ಸುರೇಶ್ ಕುಮಾರ್
"ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂ ಆಗುವ ಪ್ರಶ್ನೆ ಉದ್ಭವಿಸುವುದು ಎಲ್ಲಿಂದ? ಸಿಎಂ ಸೀಟಿಗಾಗಿ ಇಡೀ ಬಿಜೆಪಿಯನ್ನು ತನ್ನ ಕಂಟ್ರೋಲಿಗೆ ತೆಗೆದುಕೊಂಡು ಆಡಿಸುತ್ತಿರುವ ಬಿ.ಎಲ್ ಸಂತೋಷ್ ರಾಜ್ಯದ ಕಡೆ ತಲೆ ಹಾಕಲು ಬಿಡುವುದೂ ಇಲ್ಲ. ಹಾಗೆಯೇ ಜೋಶಿ ಮುಖ ತೋರಿಸಿದರೆ ನಾಲ್ಕು ಮತವೂ ಬರುವುದಿಲ್ಲ" ಎಂದಿದೆ.
"ಬಿಜೆಪಿಗರು ಗೋ ಪ್ರೇಮಿಗಳಲ್ಲ, ಗೋಮಾಂಸ ಪ್ರೇಮಿಗಳು ಎನ್ನುವುದು ಹಳೆಯ ಸತ್ಯ. ಮೇಘಾಲಯದ ಬಿಜೆಪಿ ರಾಜ್ಯಾಧ್ಯಕ್ಷ ಗೋಮಾಂಸ ಸೇವಿಸುತ್ತಾರಂತೆ, ಬಿಜೆಪಿ ಎಂದಿಗೂ ವಿರೋಧಿಸಿಲ್ಲವಂತೆ. ಬಿಜೆಪಿಗರ ಬಾಯಲ್ಲಿ ಮಾತ್ರ "ಗೋಮಾತಾ" ಒಳಗೆ "ಗೋ ಖಾತಾ"! ಗೋವಾಕ್ಕೆ ಗೋಮಾಂಸ ರಫ್ತು ಮಾಡುವ ರಾಜ್ಯ ಬಿಜೆಪಿಗೆ ದಮ್ಮು ತಾಕತ್ತು ಇದ್ದರೆ ಈ ಬಗ್ಗೆ ಮಾತಾಡಲಿ" ಎಂದು ಸವಾಲು ಹಾಕಿದೆ.
"ಪ್ರತಿಭಾವಂತ ಪರಿಶಿಷ್ಠ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷದಿಂದ ಪ್ರೋತ್ಸಾಹ ನೀಡಲಿಲ್ಲ ಸರ್ಕಾರ. ಲೂಟಿಯಲ್ಲಿ ಹಣ ಖಾಲಿಯಾಗಿದೆಯೇ ಅಥವಾ ಪರಿಶಿಷ್ಠರ ಏಳಿಗೆಯನ್ನು ಸಹಿಸಲಾಗದ ಅಸಹನೆಯೇ? ಈ ಹಿಂದೆಯೇ ದಲಿತರ ಕಿವಿ ಮೇಲೆ ಹೂವು ಇಟ್ಟ ಬಸವರಾಜ ಬೊಮ್ಮಾಯಿಯವರು ಈಗ ಮತ್ತೊಮ್ಮೆ ಹೊಸ ಹೂವಿನೊಂದಿಗೆ ಬಂದಿದ್ದಾರೆ. ಆದರೆ ಜನ ನಂಬುವ ಸ್ಥಿತಿಯಲ್ಲಿಲ್ಲ" ಎಂದು ಟೀಕಿಸಿದೆ.
ಇದನ್ನೂ ಓದಿ: ಎಂಎಲ್‌ಎಗಳು ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ: ಕೆ ಎಸ್ ಈಶ್ವರಪ್ಪ