ಬೆಂಗಳೂರು: ರಾಜೀನಾಮೆ ಪರ್ವದಿಂದ ತಮ್ಮ ತಮ್ಮ ಶಾಸಕರನ್ನು ಕೂಡಿಟ್ಟುಕೊಳ್ಳುವ ತಂತ್ರಕ್ಕೆ ಮುಂದಾಗಿರುವ ಮೂರು ಪಕ್ಷಗಳು ಒಂದೊಂದು ರೆಸಾರ್ಟ್ನಲ್ಲಿ ತಮ್ಮ ಶಾಸಕರನ್ನು ಇರಿಸಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಯಶವಂತಪುರದಲ್ಲಿರುವ ತಾಜ್ ವಿವಾಂತ್ ರೆಸಾರ್ಟ್ನಲ್ಲಿ ತಮ್ಮ ಶಾಸಕರನ್ನು ಕಳೆದ ಎರಡು ದಿನಗಳಿಂದ ಇರಿಸಿದ್ದು, ಇಂದು ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಬಳಿಯ ಪ್ರಕೃತಿ ರೆಸಾರ್ಟ್ಗೆ ವಾಸ್ತವ್ಯ ಶಿಪ್ಟ್ ಆಗಿದೆ.
ದೇವನಹಳ್ಳಿ ಪ್ರಕೃತಿ ರೆಸಾರ್ಟ್ಗೆ ಈಗಾಗಲೇ ಕಾಂಗ್ರೆಸ್ ಶಾಸಕರು ಆಗಮಿಸಿದ್ದು, ಇನ್ನು ಮೂರು ದಿನಗಳ ಕಾಲ ಈ ರೆಸಾರ್ಟ್ನಲ್ಲೇ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ಬಸ್ನಲ್ಲಿ ಪೊಲೀಸ್ ಭದ್ರತೆಯ ಮೂಲಕ ಶಾಸಕರು ರೆಸಾರ್ಟ್ಗೆ ಶಾಸಕರು ಆಗಮಿಸಿದ್ದರು.
ಅಧಿವೇಶನದ ಬಳಿಕ ಕೆಲ ಶಾಸಕರು ಹೋಟೆಲ್ಗೆ ಬಾರದೆ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಿದ್ದರೆ ಎನ್ನುವ ಹಿನ್ನೆಲೆ ಎಲ್ಲಾ ಶಾಸಕರನ್ನು ಒಂದು ಕಡೆ ಇರಿಸಲು ಮುಂದಾದ ಕಾಂಗ್ರೆಸ್ ಮುಖಂಡರು, ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಇರುವ ಪ್ರಕೃತಿ ರೆಸಾರ್ಟ್ಗೆ ಎಲ್ಲರನ್ನು ಶಿಫ್ಟ್ ಮಾಡಲು ಮುಂದಾದರು. ಈ ಹಿನ್ನೆಲೆ ಇಂದು ಮಧ್ಯಾಹ್ನ ಪ್ರಕೃತಿ ರೆಸಾರ್ಟ್ಗೆ ಖಾಸಗಿ ಬಸ್ನಲ್ಲಿ ಶಾಸಕರು ಆಗಮಿಸಿದ್ದಾರೆ..
ಈ ಹಿಂದೆ ಬೆಂಗಳೂರಲ್ಲಿ ಇದ್ದ ತಾಜ್ ವಿವಂತಾ ರೆಸಾರ್ಟ್ನಲ್ಲಿ ವಾಸ್ತವ್ಯವಿದ್ದಾಗ ವೈಯಕ್ತಿಕ ಕೆಲಸಗಳಿಂದಾಗಿ ಹಲವಾರು ಶಾಸಕರು ಹೊರಗಡೆ ಹೋಗುತ್ತಿದ್ದರು. ಈ ವೇಳೆ ಬಿಜೆಪಿ ಪಕ್ಷದ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡುತ್ತಾರೆ ಎಂಬ ಅನುಮಾನದ ಹಿನ್ನೆಲೆ ಶಾಸಕರನ್ನು ಪ್ರಕೃತಿ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಬೆಂಗಳೂರಿನಿಂದ ಹೊರಗೆ ಇರುವ ದೇವನಹಳ್ಳಿ ಪ್ರಕೃತಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡುವುದರಿಂದ ಹೊರಗಡೆಯ ಸಂಪರ್ಕ ಇಲ್ಲದೆ ಒಗ್ಗಟ್ಟಾಗಿ ಇರಬಹುದು ಅನ್ನೋದು ಕೈ ನಾಯಕರ ಉದ್ದೇಶವಾಗಿದೆ.
ಈಗಾಗಲೇ ಕೈ ಶಾಸಕರ ವಾಸ್ತವ್ಯಕ್ಕೆ ಪ್ರಕೃತಿ ರೆಸಾರ್ಟ್ನಲ್ಲಿ ರೂಂ ಗಳು ಬುಕ್ ಆಗಿದ್ದು, ಶಾಸಕರು ತಮ್ಮ ತಮ್ಮ ರೂಂ ಗಳಲ್ಲಿ ತಂಗಿದ್ದಾರೆ. ಇನ್ನು ಇಲ್ಲಿ ಒಂದು ರೂಂಗೆ ದಿನವೊಂದಕ್ಕೆ 14 ಸಾವಿರ ರೂ. ಬಾಡಿಗೆಯಿದೆಯಂತೆ. ಇನ್ನು ಪ್ರಕೃತಿ ರೆಸಾರ್ಟ್ಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದ್ದು, ನೂರಾರು ಪೊಲೀಸ್ ಸಿಬ್ಬಂದಿ ರೆಸಾರ್ಟ್ ಸುತ್ತಮುತ್ತ ಬೀಡು ಬಿಟ್ಟಿದ್ದಾರೆ.