ETV Bharat / state

'ನನ್ನ ಹೆಸರು ಹಿಡಿದು ಕರೆಯಿರಿ, ಹಾಸನ ಜಿಲ್ಲೆಯ ಶಾಸಕ ಅಂತ ಯಾಕಂತೀರಿ'; HDK ಮೇಲೆ ಶಿವಲಿಂಗೇಗೌಡ ಸಿಡಿಮಿಡಿ

ನಾವು ಬಡವರ ಮಕ್ಕಳು, ನನ್ನನ್ನು ಯಾಕೆ ಹಾಸನ ಜಿಲ್ಲೆಯ ಶಾಸಕರು ಎಂದು ಕರೀತಿರಿ. ಹೆಸರು ಹಿಡಿದು ಕರೀರಿ ಎಂದು ಕಾಂಗ್ರೆಸ್​ ಶಾಸಕ ಶಿವಲಿಂಗೇಗೌಡ ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ಸಿಡಿಮಿಡಿಗೊಂಡರು.

author img

By

Published : Jul 5, 2023, 10:38 PM IST

ಕಾಂಗ್ರೆಸ್​ ಶಾಸಕ ಶಿವಲಿಂಗೇಗೌಡ ಮಾಜಿ ಸಿಎಂ ಹೆಚ್​ಡಿಕೆ

ಕಾಂಗ್ರೆಸ್​ ಶಾಸಕ ಶಿವಲಿಂಗೇಗೌಡ ಅವರು ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ಸಿಡಿಮಿಡಿಗೊಂಡಿದ್ದರು

ಬೆಂಗಳೂರು: ನನ್ನ ಹೆಸರು ಹಿಡಿದು ಕರೆಯಿರಿ. ಹಾಸನ ಜಿಲ್ಲೆ ಶಾಸಕ ಅಂದರೆ‌ ಹೇಗೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ಸಿಡಿಮಿಡಿಗೊಂಡ ಘಟನೆ ವಿಧಾನಸಭೆಯಲ್ಲಿ ನಡೆಯಿತು. ವಿಧಾನಸಭೆಯ ಕಲಾಪದಲ್ಲಿ ನಿಯಮ 69ರ ಚರ್ಚೆಯಲ್ಲಿ ತೆಂಗು ಮತ್ತು ಕೊಬ್ಬರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವುದರಿಂದ ಹಾಗೂ ಕನಿಷ್ಟ ಬೆಂಬಲ ಬೆಲೆಯೂ ಸಹ ಕಡಿಮೆಯಾಗುತ್ತಿರುವುದರಿಂದ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ನಡೆದ ಚರ್ಚೆ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಅರಸೀಕೆರೆ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಮಧ್ಯೆ ರೋಚಕ ಜಟಾಪಟಿ ನಡೆಯಿತು. ಚರ್ಚೆ ಆರಂಭಿಸಿದ ಹೆಚ್​ಡಿಕೆ ಹಾಸನ ಜಿಲ್ಲೆಯ ಶಾಸಕ ಎಂದು ಹೆಸರು ಉಲ್ಲೇಖಿಸದೇ ಮಾತು ಆರಂಭಿಸಿದರು.

ಈ ವೇಳೆ ಹಾಸನ ಜಿಲ್ಲೆಯ ಶಾಸಕ ಎಂದು ಕರೆದ ಮಾಜಿ ಸಿಎಂ ಹೆಚ್ಡಿಕೆಗೆ ಶಿವಲಿಂಗೇಗೌಡ ಸಿಡಿಮಿಡಿಗೊಂಡರು. ಎದ್ದು ನಿಂತು ನಾವು ಬಡವರ ಮಕ್ಕಳು, ಯಾಕೆ ನನ್ನನ್ನು ಹಾಸನ ಜಿಲ್ಲೆಯ ಶಾಸಕರು ಅಂತಾ ಕರೀತೀರಿ. ಹೆಸರು ಹಿಡಿದು ಕರೀರಿ, ನಿಮಗೆ 10 ಲಕ್ಷ ಜನರು ಸೆಲ್ಫಿ ತೆಗೆದುಕೊಂಡರೆ, ನನಗೆ 2 ಲಕ್ಷ ಜನ ಆದರೂ ಸೆಲ್ಫಿ ತೆಗೆಯುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸರಿಯಾದ ಸಮಯಕ್ಕೆ ಸದನಕ್ಕೆ ಬರುವ ಸದಸ್ಯರಿಗೆ ಸೂಕ್ತ ಬಹುಮಾನ: ಸ್ಪೀಕರ್ ಯು.ಟಿ.ಖಾದರ್‌ ಘೋಷಣೆ

ನಿಮ್ಮನ್ನು ನಾವು ಎರಡು ಸಾರಿ ಮುಖ್ಯಮಂತ್ರಿಗಳಾಗಿ ಮಾಡಿಲ್ವಾ..?. ನೀವು ನನ್ನ ಹೆಸರು ಹಿಡಿದು ಕರೆಯೋದು ಬೇಡ. ಆದರೆ ಹಾಸನ ಜಿಲ್ಲೆಯ ಶಾಸಕರು ಅಂತಾ ಯಾಕೆ ಕರೀತೀರಿ. ಈವಾಗ ಏನೋ ನೀವು ನಮ್ಮ ವಿಶ್ವಾಸ ಕಳೆದುಕೊಂಡ್ರಿ, ಅದಕ್ಕಾಗಿ ನಾವು ಹೊರಗಡೆ ಬಂದಿದ್ದೇವೆ. ಆದರೆ, ನೀವು ಹಾಸನ ಜಿಲ್ಲೆಯ ಶಾಸಕರು ಅಂತಾ ಕರೆಯೋದು ಎಷ್ಟು ಸರಿ?. ಎಂದು ಪ್ರಶ್ನಿಸಿದರು. ಕೊನೆಗೂ ಆಯ್ತು ಇರೀ ಶಿವಲಿಂಗೇಗೌಡ್ರೇ, ಅದೇನೋ ನಿನ್ನೆ ಹೇಳ್ರಿದ್ರಲ್ವ ವರ್ಗಾವಣೆಯ ದಾಖಲೆ ಕೊಡಿ ಅಂತಾ ಎಂದು ಕೊಬ್ಬರಿ ಬಗ್ಗೆ ಕುಮಾರಸ್ವಾಮಿ ಮಾತು ಮುಂದುವರಿಸಿದರು.

ಇದನ್ನೂ ಓದಿ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಕೊಕ್ಕೆ.. ಮೊದಲ ಮಹತ್ವದ ತೀರ್ಮಾನ!

ಇಲ್ಲೇ ಪಂಚೆ ಹಾಕಿಕೊಂಡು ಮಲಗುತ್ತೇನೆ: ಕೊಬ್ಬರಿಗೆ ಬೆಂಬಲ ಬೆಲೆ ನಿರ್ಣಯ ಮಾಡಿಲ್ಲ ಅಂದರೆ ಇಲ್ಲೇ ಪಂಚೆ ಹಾಸಿಕೊಂಡು ಮಲಗ್ತೀವಿ ಎಂದು ಹೆಚ್ ಡಿ ರೇವಣ್ಣ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು.

ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಇವ್ತತೇ ನಿರ್ಧಾರ ಮಾಡಿ. ಇಲ್ಲವಾದಲ್ಲಿ ಇಲ್ಲೇ ಪಂಚೆ ಹಾಸಿಕೊಂಡು ಮಲಗ್ತೇವೆ. ಹೇಗೋ ಸ್ಪೀಕರ್ ರಾತ್ರಿಗೆ ಊಟ ಹಾಕಿಸ್ತಾರೆ. ಇವತ್ತೇ ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಸರ್ಕಾರ ನಿರ್ಣಯ ಮಾಡಬೇಕು. ಇಲ್ಲವಾದಲ್ಲಿ ಸದನದಲ್ಲಿ ಅಹೋರಾತ್ರಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಧರಣಿ ಹಿಂಪಡೆದ ಬಿಜೆಪಿ; ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.