ETV Bharat / state

ಡಿಕೆಶಿಗೆ ಜಾಮೀನು ಸಿಕ್ಕಿದ್ದಕ್ಕೆ ಸಂತಸ: ಕಾಂಗ್ರೆಸ್​​​ ನಾಯಕರ ಪ್ರತಿಕ್ರಿಯೆ - bangalore news

ದೆಹಲಿ ಹೈಕೋರ್ಟ್​ನಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಜಾಮೀನು ಸಿಕ್ಕಿರುವುದಕ್ಕೆ ಕಾಂಗ್ರೆಸ್​​ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರ ಸಂತಸದ ಮಾತು
author img

By

Published : Oct 23, 2019, 8:38 PM IST

ಬೆಂಗಳೂರು: ದೆಹಲಿ ಹೈಕೋರ್ಟ್​ನಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಜಾಮೀನು ಸಿಕ್ಕಿರುವುದಕ್ಕೆ ಕಾಂಗ್ರೆಸ್​​ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದೆಹಲಿ ಹೈಕೋರ್ಟ್ ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಐಟಿ-ಇಡಿ ಮುಖಾಂತರ ಸುಳ್ಳು ಕೇಸ್ ಹಾಕಿ, ಡಿಕೆಶಿ ಅವರ ರಾಜಕೀಯ ಭವಿಷ್ಯ ಹಾಳು ಮಾಡಲು ಹೋಗಿದ್ದರು. ಮೋದಿ-ಅಮಿತ್ ಶಾ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ನ್ಯಾಯಾಂಗ ವ್ಯವಸ್ಥೆ ಸತ್ಯದ ಪರವಾಗಿದೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಕಾರ್ಯ ದೇಶದಲ್ಲಿ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ ಎಂದರು.

ಇನ್ನು ಎಂಎಲ್​ಸಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ದೀಪಾವಳಿ ಹಬ್ಬ ಪ್ರಾರಂಭವಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಬೇಲ್ ಸಿಕ್ಕಿರುವುದು ಸಂತಸ ತಂದಿದೆ. ರಾಜ್ಯದ ಜನರು ಅಣ್ಣ- ತಮ್ಮ ಎಂಬ ಭಾವನೆಯನ್ನು ಇರಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಕೋರ್ಟ್ ತೀರ್ಪುನ್ನು ಸ್ವಾಗತ ಮಾಡುತ್ತೇವೆ ಎಂದರು.

ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಡಿಕೆಶಿಗೆ ನೀಡಿರುವ ಜಾಮೀನನ್ನು ಸ್ವಾಗತ ಮಾಡುತ್ತೇವೆ. ನ್ಯಾಯಾಂಗ ಇವತ್ತು ಒಳ್ಳೆಯ ತೀರ್ಪುನ್ನು ನೀಡಿದೆ. ನ್ಯಾಯಾಂಗ ಇವತ್ತು ಸತ್ಯವನ್ನು ಎತ್ತಿಹಿಡಿದಿದೆ ಎಂದರು.

ಕಾಂಗ್ರೆಸ್ ನಾಯಕರ ಸಂತಸದ ಮಾತು

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಡಿ.ಕೆ.ಶಿವಕುಮಾರ್​ಗೆ ಕೋರ್ಟ್ ಬೇಲ್ ನೀಡಿರೋದು ಸಂತಸ ತಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರನ್ನ ಟಾರ್ಗೆಟ್ ಮಾಡ್ತಿದೆ. ನಮ್ಮ ಪಕ್ಷದ ಮುಂಚೂಣಿ ನಾಯಕರಲ್ಲಿ ಡಿಕೆಶಿ ಕೂಡ ಒಬ್ಬರು. ಅವರು ಬಂದ ಮೇಲೆ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಎಲ್ಲ ಪ್ರಕರಣಗಳಲ್ಲಿ ಪ್ರಾಮಾಣಿಕವಾಗಿ ಗೆದ್ದು ಬರ್ತಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿತ್ತು. ಕೇಂದ್ರ ಎಷ್ಟೇ ದ್ವೇಷ ರಾಜಕಾರಣ ಮಾಡಲಿ. ನಮಗೆ ಈ ನೆಲದ ಕಾನೂನಿನ ಮೇಲೆ ನಂಬಿಕೆಯಿದೆ. ಅವರು ಸಂಪೂರ್ಣವಾಗಿ ಗೆದ್ದು ಬರ್ತಾರೆ ಎಂದು ಹೇಳಿದರು.

ಮಾಜಿ ಸಚಿವ ನರೇಂದ್ರ ಸ್ವಾಮಿ ಮಾತನಾಡಿ, ಡಿಕೆಶಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹರ್ಷಗೊಂಡಿದ್ದಾರೆ. ನ್ಯಾಯಾಲಯದ ಮೇಲೆ ಇನ್ನಷ್ಟು ಗೌರವ ಹೆಚ್ಚಾಗಿದೆ. ಅವರ ಶಕ್ತಿ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಪಕ್ಷದಲ್ಲಿ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ ಎಂದರು.

ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಮಾತನಾಡಿ, ಡಿಕೆಶಿಯವರ ಮೇಲಿನ ಆರೋಪಕ್ಕೆ ದಾಖಲೆ ನೀಡಲಾಗಿದೆ. ದಾಖಲೆಗಳು ಇರೋದ್ರಿಂದ ಅವರ ಬಂಧನ ಸರಿಯಿಲ್ಲ. ಬಂಧಿಸಿ ವಿಚಾರಣೆ ನಡೆಸೋದು ಬೇಡ ಅಂತ ಕೋರ್ಟ್ ಅಭಿಪ್ರಾಯಿಸಿದೆ. ಹೀಗಾಗಿ ಡಿಕೆಶಿಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಕ್ಕೆ ಅಂತಿಮ ಜಯ ಸಿಗುತ್ತೆ ಅನ್ನೋದು ಸಾಬೀತಾಗಿದೆ. ಅವರು ಸಾರ್ವಜನಿಕ ಬದುಕಿನಲ್ಲಿ ಮತ್ತಷ್ಟು ಪ್ರಬಲರಾಗ್ತಾರೆ ಎಂದರು.

ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಮಾತನಾಡಿ, ಅವರು ಸಾಕಷ್ಟು ನೋವು ತಿಂದಿದ್ದಾರೆ. ಕಿರುಕುಳವನ್ನೂ ಅವರು ಅನುಭವಿಸಿದ್ದಾರೆ. ಮುಂದೆ ಅವರಿಗೆ ಒಳ್ಳೆಯದಾಗಲಿ. ಕರ್ನಾಟಕದ ಜನ ಪ್ರಾರ್ಥನೆ ಮಾಡಿದ್ದರು. ಇನ್ನಷ್ಟು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಲಿ. ಆತ್ಮವಿಶ್ವಾಸ, ಹೋರಾಟ ಮನೋಭಾವ ಹೆಚ್ಚಲಿ. ಕೇಂದ್ರ ಸರ್ಕಾರ ಕೂಡ ಅರ್ಥ ಮಾಡಿಕೊಳ್ಳಬೇಕು. ಪ್ರತಿಪಕ್ಷಗಳನ್ನ ತುಳಿಯುವ ಕೆಲಸ ಬಿಡಬೇಕು ಎಂದರು.

Intro:newsBody:ಡಿಕೆ ಶಿವಕುಮಾರ್ ಗೆ ಜಾಮೀನು, ಕಾಂಗ್ರೆಸ್ ನಾಯಕರಿಂದ ಹರ್ಷ

ಬೆಂಗಳೂರು: ದಿಲ್ಲಿ ಹೈಕೋರ್ಟ್ ನಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಜಾಮೀನು ಲಭಿಸಿರುವುದಕ್ಕೆ ಕಾಂಗ್ರೆಸ್ ನಾಯಕರಿಂದ ಹರ್ಷ ವ್ಯಕ್ತವಾಗಿದೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿವಿಧ ಮುಖಂಡರು ಡಿಕೆಶಿ ಇರುವ ಸಂಬಂಧ ಸಂತಸ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ವಿವಿಧ ಮುಖಂಡರು ಪ್ರತಿಕ್ರಿಯೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಎಂ ಎಲ್ ಸಿ ನಾರಾಯಣ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ದೀಪಾವಳಿ ಹಬ್ಬ ಪ್ರಾರಂಭ ಆಗಿದೆ. ನಮ್ಮ ನಾಯಕ ಡಿಕೆ ಶಿವಕುಮಾರ್ ಅವರನ್ನು ಬಂಧನ ಮಾಡಿದ್ರು. ಇವತ್ತು ನಮ್ಮ ಡಿಕೆ ಶಿವಕುಮಾರ್ ಅವರಿಗೆ ಬೇಲ್ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಜನ ತಮ್ಮ ಅಣ್ಣ ತಮ್ಮ ಅನ್ನೊ ರೀತಿಯಲ್ಲಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಕೋರ್ಟ್ ತೀರ್ಪುನ್ನು ಸ್ವಾಗತ ಮಾಡುತ್ತೇವೆ ಎಂದರು.
ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ಡಿಕೆಶಿ ಗೆ ನೀಡಿರುವ ಜಾಮೀನನ್ನು ನಾವು ಸ್ವಾಗತ ಮಾಡುತ್ತೇವೇ. ನ್ಯಾಯಾಂಗ ಇವತ್ತು ಒಳ್ಳೆಯ ತೀರ್ಪುನ್ನು ನೀಡಿದೆ. ಇಡಿ ಬಂಧನ ಮಾಡಿದ್ದು ತಪ್ಪು. ನ್ಯಾಯಾಂಗ ಇವತ್ತು ಸತ್ಯವನ್ನು ಎತ್ತಿಹಿಡಿದಿದೆ. ನ್ಯಾಯಾಂಗದ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇವೆ ಎಂದರು.
ಹೈಕೋರ್ಟ್ ತೀರ್ಪು ಸಂತಸ ತಂದಿದೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ದೆಹಲಿ ಹೈಕೋರ್ಟ್ ಕೊಟ್ಟಿರುವ ತೀರ್ಪು ನನಗೆ ಸಂತೋಷವಾಗಿದೆ. ತೀರ್ಪುನ್ನ ನಾನು ಸ್ವಾಗತ ಮಾಡುತ್ತೇನೆ. ಐಟಿ-ಇಡಿ ಮುಖಾಂತರ ಸುಳ್ಳು ಕೇಸ್ ಹಾಕಲಾಗಿದೆ. ಡಿ ಕೆ ಶಿವಕುಮಾರ್ ರಾಜಕೀಯ ಭವಿಷ್ಯ ಹಾಳು ಮಾಡಲು ಹೋಗಿದ್ದರು. ಮೋದಿ- ಅಮಿತ್ ಷಾ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಸತ್ಯದ ಪರವಾಗಿದೆ. ಡಿ ಕೆ ಶಿವಕುಮಾರ್ ಕಾನೂನು ಹೋರಾಟ ಮುಂದುವರೆಸುತ್ತಾರೆ. ಪಕ್ಷದ ಸಂಘಟನೆಯಲ್ಲಿ ಡಿ ಕೆ ಶಿವಕುಮಾರ್ ಪ್ರಬಲವಾಗಿ ಇದ್ದಾರೆ. ಒಳಗೆ ಹಾಕಿಸಬೇಕೆಂದು ಪ್ರಯತ್ನ ಮಾಡಿದ್ದರು. ದೆಹಲಿಯ ನ್ಯಾಯಾಲಯ ನೀಡಿರುವ ತೀರ್ಪುನ್ನು ಸ್ವಾಗತ ಮಾಡುತ್ತೇವೆ. ಕಪೋಲಕಲ್ಪಿತವಾಗಿ ಏನೆನೋ ಹೇಳಲು ಪ್ರಯತ್ನ ಮಾಡಿದ್ರು. ಡಿಕೆ ಶಿವಕುಮಾರ್ ಅವರಿಗೆ ನ್ಯಾಯ ಸಿಗುತ್ತೆ ಅಂತ ಹೋರಾಟ ಮಾಡಿದಕ್ಕೆ ಇವತ್ತು ಜಯ ಸಿಕ್ಕಿದೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಕಾರ್ಯ ದೇಶದಲ್ಲಿ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ. ನನಗೆ ಇವತ್ತು ಖುಷಿಯಾಗಿದೆ. ನಮ್ಮ ಪಕ್ಷದವನ್ನು ಇನ್ನೂ ಬಲಪಡಿಸುವ ಕೆಲಸ ಮಾಡುತ್ತೇವೆ. ಬಿಜೆಪಿ ಅವರ ಕೆಲಸ ವಿಫಲವಾಗಿದೆ ಎಂದರು.
ನಾವುಗಳು ಹಿರಿಯರು ಎಲ್ಲಾ ಒಟ್ಟಿಗೆ ಸೇರಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ, ಖರ್ಗೆ , ಪರಮೇಶ್ವರ್ ಎಲ್ಲಾ ಹಿರಿಯರು ಸೇರಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಡಿಕೆ ಶಿವಕುಮಾರ್ ಅವರು ನಿಜವಾಗಿ ನಮ್ಮ ಶಕ್ತಿ. ನಾವು ಉಪಚುನಾವಣೆ ತಯಾರಿ ನಾವು ಮಾಡಿಕೊಳ್ಳುತ್ತಿದ್ದೇವೆ. ಅನರ್ಹ ಅವರ ತೀರ್ಪು ಸುಪ್ರೀಂ ಕೋರ್ಟ್ ನಲ್ಲಿ ಇದೆ. ಕೋರ್ಟ್ ಯಾಕೆ ನಿಧಾನ ಮಾಡುತ್ತಿದೆ ಎಂದು ಗೊತ್ತಿಲ್ಲ. ಬಿಜೆಪಿ ತಂತ್ರಗಾರಿಕೆ ವಿರುದ್ಧ ನಾವು ಖಂಡಿತ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಡಿಕೆಶಿ ನಾಯಕತ್ವ ಇನ್ನೂ ಹೆಚ್ಚಾಗಿ ಸಿಗಲಿದೆ. ಡಿಕೆಶಿ ಕಾಂಗ್ರೆಸ್ ಜೊತೆ ಇರಬಾರದು ಎಂಬ ಬಿಜೆಪಿ ಸಂಚು ವಿಫಲವಾಗಿದೆ. ಉಪಚುನಾವಣೆಯಲ್ಲಿ ಡಿಕೆಶಿ ಸೇರಿ ನಾವೆಲ್ಲ ಒಟ್ಟಿಗೆ ಎದುರಿಸ್ತೇವೆ. ಉಪಚುನಾವಣೆ ವಿಚಾರದಲ್ಲೂ ಗೊಂದಲ ಇನ್ನೂ ಇದೆ. ಸುಪ್ರೀಂಕೋರ್ಟ್ ಉಪಚುನಾವಣೆ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಾವೆಲ್ಲ ಒಗ್ಗಟ್ಟಿನಿಂದ ಉಪಚುನಾವಣೆ ಎದುರಿಸ್ತೇವೆ ಎಂದು ಹೇಳಿದರು.
ಬಿಜೆಪಿ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಡಿಕೆ ಶಿವಕುಮಾರ್ ಗೆ ಕೋರ್ಟ್ ಬೇಲ್ ನೀಡಿರೋದು ಸಂತಸ ತಂದಿದೆ. ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರನ್ನ ಟಾರ್ಗೆಟ್ ಮಾಡೋ ಕೆಲಸ ಮಾಡ್ತಿದೆ. ನಮ್ಮ ಪಕ್ಷದ ಮುಂಚೂಣಿ ನಾಯಕರಲ್ಲಿ ಡಿಕೆಶಿ ಕೂಡ ಒಬ್ಬರು. ಅವರು ಬಂದ ಮೇಲೆ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ. ಎಲ್ಲ ಪ್ರಕರಣಗಳಲ್ಲಿ ಪ್ರಾಮಾಣಿಕವಾಗಿ ಗೆದ್ದು ಬರ್ತಾರೆ ಎಂದರು.
ದುರುದ್ದೇಶದಿಂದ ಬಂಧಿಸಲಾಗಿತ್ತು
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿತ್ತು. ಕೇಂದ್ರ ಎಷ್ಟೇ ದ್ವೇಷ ರಾಜಕಾರಣ ಮಾಡಲಿ. ನಮಗೆ ಈ ನೆಲದ ಕಾನೂನಿನ ಮೇಲೆ ನಂಬಿಕೆಯಿದೆ. ಅವರು ಸಂಪೂರ್ಣವಾಗಿ ಗೆದ್ದು ಬರ್ತಾರೆ ಎಂದು ಹೇಳಿದರು.
ಕಾರ್ಯಕರ್ತರು ಹರ್ಷಗೊಂಡಿದ್ದಾರೆ
ಮಾಜಿ ಸಚಿವ ನರೇಂದ್ರ ಸ್ವಾಮಿ ಮಾತನಾಡಿ, ಡಿಕೆಶಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಆಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹರ್ಷಗೊಂಡಿದ್ದಾರೆ.ನ್ಯಾಯಾಲಯದ ಮೇಲೆ ಇನ್ನಷ್ಟು ಗೌರವ ಹೆಚ್ಚಾಗಿದೆ. ಅವರ ಶಕ್ತಿ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಪಕ್ಷಕ್ಕೆ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ ಎಂದರು.
ದಾಖಲೆ ಇರೋದ್ರಿಂದ ಬಂಧನ ಸರಿಯಲ್ಲ
ಕಾಂಗ್ರೆಸ್ ನಾಯಕ ಬಿ.ಎಲ್.ಶಂಕರ್ ಮಾತನಾಡಿ, ಡಿಕೆಯವರ ಮೇಲಿನ ಆರೋಪಕ್ಕೆ ದಾಖಲೆ ನೀಡಲಾಗಿದೆ. ದಾಖಲೆಗಳು ಇರೋದ್ರಿಂದ ಅವರ ಬಂಧನ ಸರಿಯಿಲ್ಲ. ಬಂಧಿಸಿ ವಿಚಾರಣೆ ನಡೆಸೋದು ಬೇಡ ಅಂತ ಕೋರ್ಟ್ ಅಭಿಪ್ರಾಯಿಸಿದೆ. ಹೀಗಾಗಿ ಡಿಕೆಶಿಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಕ್ಕೆ ಅಂತಿಮ ಜಯ ಸಿಗುತ್ತೆ ಅನ್ನೋದು ಸಾಬೀತಾಗಿದೆ. ಅವರು ಸಾರ್ವಜನಿಕ ಬದುಕಿನಲ್ಲಿ ಮತ್ತಷ್ಟು ಪ್ರಬಲರಾಗ್ತಾರೆ ಎಂದರು.
ಕಿರುಕುಳ ಅನುಭವಿಸಿದ್ದಾರೆ
ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಮಾತನಾಡಿ, ಅವರು ಸಾಕಷ್ಟು ನೋವು ತಿಂದಿದ್ದಾರೆ. ಕಿರುಕುಳವನ್ನೂ ಅವರು ಅನುಭವಿಸಿದ್ದಾರೆ. ಮುಂದೆ ಅವರಿಗೆ ಒಳ್ಳೆಯದಾಗಲಿ. ಕರ್ನಾಟಕದ ಜನ ಪ್ರಾರ್ಥನೆ ಮಾಡಿದ್ದರು. ಇನ್ನಷ್ಟು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಲಿ. ಆತ್ಮ ವಿಶ್ವಾಸ, ಹೋರಾಟ ಮನೋಭಾವ ಹೆಚ್ಚಲಿ. ಎರಡೂ ಅವರಲ್ಲಿರೋದ್ರಿಂದ ಆ ವಿಶ್ವಾಸವಿದೆ. ಕೇಂದ್ರ ಸರ್ಕಾರ ಕೂಡ ಅರ್ಥ ಮಾಡಿಕೊಳ್ಳಬೇಕು. ಪ್ರತಿಪಕ್ಷಗಳನ್ನ ತುಳಿಯುವ ಕೆಲಸ ಬಿಡಬೇಕು ಎಂದು ಅಭಿಪ್ರಾಯ ಪಟ್ಟರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.