ಬೆಂಗಳೂರು: ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಸರ್ಕಾರಿ ಎಸ್ಸಿ ಮತ್ತು ಎಸ್ಟಿ ನೌಕರರ ವತಿಯಿಂದ ಆಯೋಜಿಸಿರುವ ಸಮಾವೇಶವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ನಾನು ಸಿಎಂ ಆಗಲು ಅಂಬೇಡ್ಕರ್ ಅವರೇ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಸಂವಿಧಾನ ಬಂದು 72 ವರ್ಷ ಆಗಿದೆ. ನಮಗೆಲ್ಲ ಸಮಾನ ಅವಕಾಶ ಸಿಕ್ಕಿದ್ದು ಸಂವಿಧಾನ ಜಾರಿ ಆದ ದಿನದಿಂದ. ಸಂವಿಧಾನ ಜಾರಿ ಆಗುವ ಮುನ್ನ ನಮ್ಗೆ ಮನುಷ್ಯರಂತೆ ನೋಡುತ್ತಿರಲಿಲ್ಲ. ಸಂವಿಧಾನದಲ್ಲಿ ಬರೀ ಸಮಾಜದ ಸಮಸ್ಯೆಗಳನ್ನು ಗುರುತಿಸಿಲ್ಲ. ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಅಂಬೇಡ್ಕರ್. ಆದ್ದರಿಂದ ಅಂಬೇಡ್ಕರ್ ಎಂದೆಂದಿಗೂ ಪ್ರಸ್ತುತ. ಕೆಲವೇ ಕಲವು ಮೇಧಾವಿ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಅಗ್ರಸ್ಥಾನದಲ್ಲಿದ್ದಾರೆ. ನಾನು ಸಿಎಂ ಆಗಲು ಅಂಬೇಡ್ಕರ್ ಅವರೇ ಕಾರಣ ಎಂದು ಹೇಳಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮನುವಾದಿಗಳು ಎಂದೂ ಕೂಡ ಒಪ್ಪಿಕೊಂಡಿಲ್ಲ. ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟು ಹಾಕಿದ್ರು. ಸಮಾಜವನ್ನು ಧರ್ಮದ ಚೌಕಟ್ಟಿನಲ್ಲಿ ಕಟ್ಟುಹಾಕಲು ಮನುಸ್ಮೃತಿ ಇತ್ತು. ಅದಕ್ಕಾಗಿಯೇ ಅಂಬೇಡ್ಕರ್ ಮನುಸ್ಮೃತಿಯನ್ನು ಸುಟ್ಟಿದ್ರು. ದೇಶದ ಸಂಪತ್ತು ಸಮಾನವಾಗಿ ಹಂಚಿಕೆ ವಾಗಿಲ್ಲ. ಮನುವಾದಿಗಳಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನದ ಆಶಯಗಳು ಜಾರಿವಾಗಬೇಕು ಅಂದ್ರೆ ಆ ಸಂವಿಧಾನವನ್ನು ಗೌರವಿಸುವವರು ಅಧಿಕಾರದಲ್ಲಿ ಇರಬೇಕು. ಇದು ನನ್ನ ಅಭಿಪ್ರಾಯ ಅಲ್ಲ. ಅಂಬೇಡ್ಕರ್ ಅಭಿಪ್ರಾಯ ಇದೆ. ಬರೀ ಜೈ ಭೀಮ್ ಹೇಳುವುದೇ ನಮ್ಮ ಕೆಲಸ ಅಲ್ಲ. ವಾಜಪೇಯಿ ಅವರು ಪ್ರಧಾನಿ ಆದ್ರೂ ಸಂವಿಧಾನ ಪುನಾರಚನೆ ಆಗಬೇಕುಬೆಂದು ಕಮಿಟಿ ಮಾಡಿದ್ರು. ಯಾಕೇ ಈ ಕಮಿಟಿ ಮಾಡಿದ್ರು ವಾಜಪೇಯಿ ಅವರು.. ಸಂವಿಧಾನದಲ್ಲಿ ಏನಾದ್ರು ತಪ್ಪು ಇದ್ದರೆ ಅದನ್ನು ತಿದ್ದಬೇಕು ಎಂದು ಹೇಳಿದರು.
ಆದ್ರೆ ಸಂವಿಧಾನ ಪುನಾರಚನೆ ಮಾಡೊಕ್ಕೆ ವಾಜಪೇಯಿ ಹೊರಟಿದ್ರು. ಹೋಗ್ಲಿ ಈಗ ಸಂವಿಧಾನ ಪುನಾರಚನೆ ಮಾಡೊದು ಬಿಟ್ಟಿದ್ದಾರಾ..? ಅವ್ನು ಯಾವ್ನೋ ಅನಂತ ಕುಮಾರ್ ಹೆಗಡೆ ಹೇಳಿದ್ದಾ.. ನಾವು ಅಧಿಕಾರಕ್ಕೆ ಬಂದಿದ್ದು ಸಂವಿಧಾನ ಬದಲಾವಣೆ ಮಾಡೊಕ್ಕೆ ಎಂದು. ಹೀಗೇ ಹೇಳಿದ್ರೆ ನಮ್ಗೆ ಕೋಪ ಬರುವುದಿಲ್ವಾ..? ಅನಂತರ ಕುಮಾರ್ ಹೀಗೆ ಹೇಳಿದ್ರು ಅವ್ನು ಮಂತ್ರಿಯಾಗಿ ಮುಂದುವರೆದ ಎಂದರು.
ಅನಂತ ಕುಮಾರ ಹೆಗ್ಡೆ ಕಡೆಯಿಂದ ಈ ಮನುವಾದಿ ಗಿರಾಕಿಗಳು ಹೇಳಿಸಿದ್ದಾರೆ. ಕೆಲವರು ಹೇಳ್ತಾರೆ ಸಂವಿಧಾನ ಸುಟ್ಟು ಹಾಕ್ತಿವಿ ಎಂದು. ಹೀಗೆ ಹೇಳುವವರಿಗೆ ಸಂವಿಧಾನದ ಮೇಲೆ ಗೌರವ ಇದೇನಾ..? ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರು ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದ್ರೆ ನಾವು ಎಲ್ಲರು ಒಗ್ಗೂಡಿ ಅದರ ವಿರುದ್ಧ ಹೊರಾಡಬೇಕು. ಸಂವಿಧಾನವೇ ನಮ್ಗೆ ಬೈಬಲ್ ಇದ್ದ ಹಾಗೇ. ನಾನು ಅಂಬೇಡ್ಕರ್ ಅವರ ಪ್ರೇರಣೆಯಿಂದ ಬದುಕು ಕಟ್ಟಿಕೊಂಡವನು ಎಂದರು.
ಮಾಜಿ ಸಚಿವ ಹೆಚ್ ಅಂಜನೇಯ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ಅನೇಕ ಹುದ್ದೆ ಖಾಲಿ ಇವೆ. ಆದ್ರೂ ಹುದ್ದೆ ಭರ್ತಿ ಮಾಡುತ್ತಿಲ್ಲ. ಸರ್ಕಾರಿ ಕಂಪನಿಗಳು ಲಾಭದಲ್ಲಿ ಇದ್ದಾವೆ. ಆದ್ರೂ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಮೀಸಲಾತಿ ನೀಡಬೇಕಾಗುತ್ತೆ ಅಂತ ನಮ್ಮ ಉದ್ಯೋಗಾವಕಾಶಗಳನ್ನು ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.
ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೇ ಬರೀ ಅಹಿಂದ ನಾಯಕ ಅಂತಾರೆ. ದಾವಣಗೆರೆಯಲ್ಲಿ ಎಲ್ಲಾ ವರ್ಗದ ಜನರು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಸೇರಿದ್ರು. ವಿಶ್ವದ ಯಾವುದೇ ವ್ಯಕ್ತಿ ಜನ್ಮದಿನಕ್ಕೆ ಅಷ್ಟೊಂದು ಜನ ಸೇರಿಲ್ಲ. ಆದ್ರೆ ಸಿದ್ದರಾಮಯ್ಯ ಜನ್ಮದಿನಕ್ಕೆ ಅಷ್ಟೊಂದು ಜನ ಸೇರಿದ್ರು. ಇದೊಂದು ಐತಿಹಾಸಿಕ ಜನ್ಮದಿನ ಎಂದು ಬಣ್ಣಿಸಿದರು.
ಹೆಚ್ ಆಂಜನೇಯ ಹಾಸ್ಯ ಚಟಾಕಿ ಹಾರಿಸಿ, ನಾವು, ಮಹಾದೇವಪ್ಪ ನಾನು ಸಿದ್ದರಾಮಯ್ಯ ಎಡಬಲ ಎಂದು ಹೇಳಿದರು. ಈ ವೇಳೆ ಸಭಾಂಗಣ ನಗೆಗಡಲಲ್ಲಿ ತೇಲಿತು. ನಾನು ಸಿದ್ದರಾಮಯ್ಯ ಎಡಗಡೆ ಕೂರುತ್ತೇನೆ. ಮಹಾದೇವಪ್ಪ ಬಲಕ್ಕೆ ಕೂರುತ್ತಾರೆ. ನಾವಿಬ್ಬರು ಅಣ್ಣ-ತಮ್ಮ ಇದ್ದ ಹಾಗೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಜಗಳ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಖಾತೆ ವಿಚಾರವಾಗಿ ಅಸಮಾಧಾನ ಇತ್ತು ಅಂದರು.
ಓದಿ: ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಬೆಳ್ಳಂದೂರು ಪರಿಸ್ಥಿತಿ ವೀಕ್ಷಣೆ