ಬೆಂಗಳೂರು: ನೇತಾಜಿ ಸುಭಾಶ್ ಚಂದ್ರ ಬೋಸ್ ಆಟದ ಮೈದಾನದಲ್ಲಿ 2,000 ಸಾವಿರ ಭಕ್ತರ ಉಚಿತ ಪ್ರವಾಸ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಈ ಪ್ರವಾಸವು ಮಲೆ ಮಹದೇಶ್ವರ ಬೆಟ್ಟ, ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ ರಂಗನಾಥ ದೇವಸ್ಥಾನ, ಮೈಸೂರು ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನಗಳನ್ನು ಒಳಗೊಂಡಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಘುವೀರ್ ಎಸ್.ಗೌಡ ಅವರು ಗೋ ಪೂಜೆ ಸಲ್ಲಿಸಿ, ಆಗಮಿಸಿದ್ದ ಭಕ್ತ ಸಮುದಾಯಕ್ಕೆ ಶುಭ ಹಾರೈಸಿ, ಬೀಳ್ಕೊಟ್ಟರು.
ಬಳಿಕ ರಘುವೀರ್ ಎಸ್.ಗೌಡ ಮಾತನಾಡಿ, ಬಡವರ, ಹಿರಿಯ ನಾಗರಿಕರ ಸೇವೆ ಮಾಡುವುದು ಏಳು ಜನ್ಮದ ಪುಣ್ಯದ ಫಲ. ತಂದೆ, ತಾಯಿ ಮತ್ತು ಗುರುಹಿರಿಯರ ಆಶೀರ್ವಾದದಿಂದ ಕಳೆದ 20 ವರ್ಷಗಳಿಂದ ನಿರಂತರ ಜನಸೇವೆ ಮಾಡಿಕೊಂಡು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಮನೆಯ ಮಗನಾಗಿ ಅವರ ನೋವು, ನಲಿವುಗಳಿಗೆ ಸದಾ ಸ್ಪಂದಿಸುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೀರೆ, ದಿನಸಿ ಮತ್ತು ನೂರಾರು ಆಟೋ ಚಾಲಕರಿಗೆ ಉಚಿತ ಆಟೋ ಟೈರ್ಗಳು, ಇನ್ಯೂರೆನ್ಸ್ ಬಾಂಡ್‌ಗಳನ್ನು ವಿತರಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೆಚ್ಚದ ಸಹಾಯಹಸ್ತ ನೀಡಲಾಗಿದೆ ಎಂದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರತಿ ಬಡಾವಣೆಗೆ ದೇವರ ಹೆಸರು ಇಡಲಾಗಿದೆ.ಅತಿ ಹೆಚ್ಚು ದೇವಾಲಯಗಳು ಇಲ್ಲಿವೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ದೇವಾಲಯಕ್ಕೆ ತೆರಳಬೇಕು. ದೇವರ ದರ್ಶನ ಪಡೆಯಬೇಕು ಎಂಬ ಅಭಿಲಾಷೆ ಹೊಂದಿರುತ್ತಾರೆ. ಅದರೆ ನಾನಾ ರೀತಿಯ ಅನಾನುಕೂಲತೆಯಿಂದ ಹೋಗಲು ಸಾಧ್ಯವಾಗಲ್ಲ ಎಂದು ಹೇಳಿದರು.
ಇದನ್ನೂ ಓದಿ: ಆರ್.ವಿ ವಿಶ್ವವಿದ್ಯಾಲಯದ ಕುಲಪತಿ ಪಾಂಡುರಂಗ ಶೆಟ್ಟಿ ನಿಧನ: ಇಂದು ಸಂಜೆ ಅಂತ್ಯಸಂಸ್ಕಾರ