ETV Bharat / state

ಬಜರಂಗದಳ ನಿಷೇಧ : ಡ್ಯಾಮೇಜ್ ಕಂಟ್ರೋಲ್​ಗೆ ಕೈ ಕಸರತ್ತು, ಚುನಾವಣೆ ಲಾಭಕ್ಕೆ ಬಿಜೆಪಿ ತಂತ್ರಗಾರಿಕೆ

ಕಾಂಗ್ರೆಸ್​ ತನ್ನ ಪ್ರಣಾಳಿಕೆಯನ್ನು ಬಜರಂಗದಳ ನಿಷೇಧ ಮಾಡುವ ಘೋಷಣೆ ಮಾಡಿತ್ತು. ಈಗ ಪಕ್ಷದ ನಾಯಕರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ.

Bajrang Dal ban
ಬಜರಂಗದಳ ನಿಷೇಧ
author img

By

Published : May 4, 2023, 10:40 PM IST

ಬೆಂಗಳೂರು : ಕಾಂಗ್ರೆಸ್​ ತನ್ನ ಪ್ರಣಾಳಿಕೆಯನ್ನು ಕಳೆದ ಎರಡು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಇದೀಗ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವುದರಿಂದ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್​ಗೆ ಹರಸಾಹಸ ಪಡುತ್ತಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಜರಂಗದಳ ನಿಷೇಧದ ಆಶ್ವಾಸನೆ ಯಿಂದ ಕಾಂಗ್ರೆಸ್ ಪಕ್ಷಕ್ಕೆ ಕಟ್ಟಾ ಹಿಂದೂಗಳ ಮತಕಳೆದುಕೊಳ್ಳುವ ಆತಂಕ ಎದುರಾಗಿದೆ. ಬಿಜೆಪಿ ಪಕ್ಷದ ಮುಖಂಡರು ಬಜರಂಗದಳ ನಿಷೇಧ ಮಾಡುವ ಮನಸ್ಥಿತಿ ಹೊಂದಿರುವ ಕಾಂಗ್ರೆಸ್​ನ್ನು ಕಟುವಾಗಿ ಟೀಕಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಮುಖಂಡರು '' ಜೈ ಭಜರಂಗ ಬಲಿ '' ಎಂದು ಚುನಾವಣೆ ಪ್ರಚಾರದಲ್ಲಿ ಘೋಷಣೆ ಕೂಗುತ್ತಿರುವುದು ಕಾಂಗ್ರೆಸ್ ಪಕ್ಷದ ದುಗುಡವನ್ನು ದ್ವಿಗುಣಗೊಳಿಸಿದೆ.

ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಕೆಲವು ಅಭ್ಯರ್ಥಿಗಳು ಬಜರಂಗ ದಳ ನಿಷೇಧದ ಭರವಸೆ ಈ ಸಂದರ್ಭದಲ್ಲಿ ಅನಗತ್ಯವಾಗಿದ್ದು, ಬಿಜೆಪಿ ಜೊತೆ ಜಿದ್ದಾಜಿದ್ದಿನ ಸ್ಪರ್ದೆ ಇರುವಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ಪರವಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಕುರಿತಂತೆ ಪ್ರಸ್ತಾಪಿಸಿ ಅನಗತ್ಯ ವಿವಾದ ಮೈಮೇಲೆಳೆದುಕೊಂಡಂತಾಗಿದೆ. ಕಾಂಗ್ರೆಸ್ ವಿರುದ್ಧ ಟೀಕಿಸಲು ಬಿಜೆಪಿಗೆ ಯಾವುದೇ ಪ್ರಮುಖ ವಿಷಯ ವಸ್ತು ಇಲ್ಲದಿರುವಾಗ ಬಜರಂಗದಳ ನಿಷೇಧದ ಅಸ್ತ್ರವನ್ನು ಕೈಯಾರೆ ನೀಡಿದಂತಾಗಿದೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬಜರಂಗದಳ ನಿಷೇಧದ ಭರವಸೆ ವಿವಾದದಿಂದ ಪಕ್ಷದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ತಡೆಗಟ್ಟಲು ಕಾಂಗ್ರೆಸ್​ನ ಹಿರಿಯ ಮುಖಂಡರುಗಳು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಜರಂಗದಳ ನಿಷೇಧದ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಿಂದ ಹಿಂದಕ್ಕೆ ಪಡೆಯುವುದಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹನುಮನ ನಾಡಿನಲ್ಲಿ ಹನುಮಾನ್ ಹೆಸರಲ್ಲಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ. ಹಳ್ಳಿ ಹಳ್ಳಿಗಳಲ್ಲಿ ಹನುಮಂತನ ದೇವಸ್ಥಾನ ಮತ್ತು ಗರಡಿಗಳನ್ನು ಸ್ಥಾಪನೆ ಮಾಡಿ ಯುವಕರಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡಲಿದೆ ಎಂದು ಕಾರವಾರ ಜಿಲ್ಲೆಯ ಹೊನ್ನಾವರದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿಲ್ಲ. ಆದರೆ ಕಾನೂನು ವಿರೋಧಿ ಚಟುವಟಿಕೆಯಲ್ಲಿ ಬಾಗಿಯಾದಲ್ಲಿ ನಿಷೇಧದಂತಹ ಕ್ರಮ ತೆಗೆದುಕೊಳ್ಳಲಾಗುವುದೆಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಜರಂಗದಳ ನಿಷೇಧ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಸಂಗತಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಆಂತರಿಕವಾಗಿ ಪಕ್ಷದ ಹಲವಾರು ಅಭ್ಯರ್ಥಿಗಳಲ್ಲಿ ಬಜರಂಗದಳ ವಿವಾದವು ತಮ್ಮ ಗೆಲುವಿಗೆ ಎಲ್ಲಿ ತೊಡಕಾಗಲಿದೆಯೋ ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯವಾಗಿ ಬಜರಂಗದಳ ವಿವಾದದಲ್ಲಿ ಅಂತರ ಕಾಯ್ದುಕೊಂಡು ಹಿಂದುಗಳ ವಿಶ್ವಾಸ ಗಳಿಸಿ ಮತ ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಪಕ್ಷದ ಬಜರಂಗದಳ ನಿಷೇಧದ ಚುನಾವಣಾ ಆಶ್ವಾಸನೆಯನ್ನು ಬಿಜೆಪಿ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇದನ್ನೇ ಚುನಾವಣಾ ವಿಷಯ ವಸ್ತುವನ್ನಾಗಿ ಬಿಂಬಿಸತೊಡಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಹಲವಾರು ಮುಖಂಡರು ಬಜರಂಗದಳ ನಿಷೇಧಿಸುವ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ತಮ್ಮ ಚುನಾವಣಾ ಪ್ರಚಾರದ ಸಮಾವೇಶಗಳಲ್ಲಿ '' ಜೈ ಭಜರಂಗ ಬಲಿ '' ಎಂದು ಘೋಷಣೆ ಕೂಗುವ ಮೂಲಕ ಹಿಂದುಗಳ ಮತಗಳನ್ನ ಸೆಳೆಯುತ್ತಿದ್ದಾರೆ.

ಈ ಬೆಳವಣಿಗೆಯ ನಡುವೆ ಬಜರಂಗದಳ ನಿಷೇಧದ ಪ್ರಸ್ತಾವನೆಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಆಂಜನೇಯ ದೇವಸ್ಥಾನಗಳಲ್ಲಿ '' ಹನುಮ ಚಾಲೀಸಾ '' ಪಠಿಸುವುದರೊಂದಿಗೆ ಬಜರಂಗದಳಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹನುಮಾನ್ ಚಾಲೀಸಾ ಪಠಣೆಯಲ್ಲಿ ಬಿಜೆಪಿಯ ಮುಖಂಡರುಗಳು, ಚುನಾವಣಾ ಅಭ್ಯರ್ಥಿಗಳು ಭಾಗಿಯಾಗಿ ಗಮನ ಸೆಳೆದಿದ್ದಾರೆ.

ಚುನಾವಣೆ ಮುಗಿಯುವ ತನಕ ಬಜರಂಗದಳ ನಿಷೇಧದ ವಿವಾದವನ್ನು ಜೀವಂತವಾಗಿಟ್ಟು ಅದರ ರಾಜಕೀಯ ಲಾಭ ಪಡೆಯಲು ಬಿಜೆಪಿ ತಂತ್ರಗಾರಿಕೆಯನ್ನು ಹೆಣೆದಿದೆ ಎಂದು ಹೇಳಲಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿನ ಬಜಂಗದಳ ನಿಷೇಧದ ಪ್ರಸ್ತಾವನೆಯನ್ನು ಸಮರ್ಥಿಸಿಕೊಳ್ಳುತ್ತಾ ತಾವು ಸಹ ಆಂಜನೇಯನ ಪರಮ ಭಕ್ತರು, ಹಿಂದೂಗಳು ಎನ್ನುತ್ತಾ ಹಿಂದೂಗಳ ಮತ ಸೆಳೆಯುವಲ್ಲಿ ಕಾರ್ಯನಿರ್ತರಾಗಿದ್ದಾರೆ. ಬಜರಂಗದಳ ನಿಷೇಧದ ವಿವಾದವು ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದ್ದು ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸಿದೆ.

ಇದನ್ನೂ ಓದಿ : ಐತಿಹಾಸಿಕ ಆಂಜನೇಯನ ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತೇವೆ; ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.