ETV Bharat / state

ಬಿಕ್ಕಟ್ಟು ನಿರ್ವಹಿಸುವುದು ಸದನದಲ್ಲಿ ರೋಮಾಂಚನದ ಚಿತ್ರ ನೋಡಿದಷ್ಟು ಸುಲಭವಲ್ಲ : ಕಾಂಗ್ರೆಸ್ ಲೇವಡಿ - ಕಾಂಗ್ರೆಸ್ ಟ್ವೀಟ್ ಸುದ್ದಿ

2012ರ ಫೆಬ್ರವರಿ ತಿಂಗಳಲ್ಲಿ ನಡೆದ ವಿಧಾನಸಭೆ ಅಧಿವೇಶನ ಸಂದರ್ಭ ವಿಧಾನಸಭೆಯಲ್ಲಿ ರಾಜ್ಯದ ಸಮಸ್ಯೆಯ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದ್ದ ವೇಳೆ ಸಹಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮೊಬೈಲ್ ಮೂಲಕ ಅಶ್ಲೀಲ ಚಿತ್ರ ನೋಡುತ್ತಿದ್ದ ಘಟನೆ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು..

banglore
ಕಾಂಗ್ರೆಸ್
author img

By

Published : Dec 13, 2020, 12:09 PM IST

Updated : Dec 13, 2020, 12:14 PM IST

ಬೆಂಗಳೂರು : ಸಾರಿಗೆ ನೌಕರರ ಬಿಕ್ಕಟ್ಟು ನಿರ್ವಹಿಸುವುದು ಸದನದಲ್ಲಿ ರೋಮಾಂಚಕ ಚಿತ್ರ ನೋಡಿದಷ್ಟು ಸುಲಭವಲ್ಲ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ.

  • ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ.

    ◼️ಪ್ರಯಾಣಿಕರ ಪರದಾಟ
    ◼️ಅನಾನುಭವಿ ಖಾಸಗಿ ಚಾಲಕರ ಪೀಕಲಾಟ
    ◼️ಸರ್ಕಾರದ ಮೊಂಡು ಹಠ
    ◼️ಖಾಸಗಿ ಬಸ್ ಮಾಲೀಕರ ನಿರಾಕರಣೆ@LaxmanSavadi ಅವರೇ ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್'ನಲ್ಲಿ "ರೋಮಾಂಚನದ" ಚಿತ್ರ ವೀಕ್ಷಿಸಿದಂತಲ್ಲ!!

    — Karnataka Congress (@INCKarnataka) December 13, 2020 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಅವಹೇಳನ ಮಾಡಿರುವ ಕಾಂಗ್ರೆಸ್, ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ. ಪ್ರಯಾಣಿಕರ ಪರದಾಟ, ಅನಾನುಭವಿ ಖಾಸಗಿ ಚಾಲಕರ ಪೀಕಲಾಟ, ಸರ್ಕಾರದ ಮೊಂಡು ಹಠ, ಖಾಸಗಿ ಬಸ್ ಮಾಲೀಕರ ನಿರಾಕರಣೆ ಈ ಎಲ್ಲವುಗಳನ್ನು ಎದುರಿಸುವ ಸ್ಥಿತಿ ಎದುರಾಗಿದೆ. ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಅವರೇ ಬಿಕ್ಕಟ್ಟುಗಳನ್ನು ನಿರ್ವಹಿಸುವುದೆಂದ್ರೆ ಸದನದಲ್ಲಿ ಕುಳಿತು ಮೊಬೈಲ್​ನಲ್ಲಿ ರೋಮಾಂಚನದ ಚಿತ್ರ ವೀಕ್ಷಿಸಿದಂತಲ್ಲ ಎಂದು ಹೇಳಿದೆ.

ಓದಿ: ‘ಸಾರಿಗೆ’ ಶಾಕ್.. ಸಾರಿಗೆ ಸಚಿವ ಸವದಿ ನೇತೃತ್ವದಲ್ಲಿ ಅಧಿಕಾರಿಗಳ ಮಹತ್ವದ ಸಭೆ ಆರಂಭ

2012ರ ಫೆಬ್ರವರಿ ತಿಂಗಳಲ್ಲಿ ನಡೆದ ವಿಧಾನಸಭೆ ಅಧಿವೇಶನ ಸಂದರ್ಭ ವಿಧಾನಸಭೆಯಲ್ಲಿ ರಾಜ್ಯದ ಸಮಸ್ಯೆಯ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದ್ದ ವೇಳೆ ಸಹಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮೊಬೈಲ್ ಮೂಲಕ ಅಶ್ಲೀಲ ಚಿತ್ರ ನೋಡುತ್ತಿದ್ದ ಘಟನೆ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಅಂದು ಸಹಕಾರ ಸಚಿವ ಲಕ್ಷ್ಮಣ್​ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ ಸಿ ಪಾಟೀಲ್ ಸದನದೊಳಗೆ ಚರ್ಚೆ ನಡೆಯುತ್ತಿದ್ದ ವೇಳೆ ತಮ್ಮ ಪಾಡಿಗೆ ತಾವು ಮೊಬೈಲ್ ಮೂಲಕ ಅಶ್ಲೀಲ ಚಿತ್ರ ನೋಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದು ಇಂದಿಗೂ ಲಕ್ಷ್ಮಣ್ ಸವದಿ ಪಾಲಿಗೆ ದೊಡ್ಡ ಕಳಂಕವಾಗಿ ಉಳಿದುಕೊಂಡಿದೆ. ಕಾಂಗ್ರೆಸ್ ಟೀಕೆಗೂ ಇದು ಆಸ್ಪದ ಮಾಡಿಕೊಟ್ಟಿದೆ.

Last Updated : Dec 13, 2020, 12:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.