ETV Bharat / state

ರೋಷನ್​ ಬೇಗ್​​ ಅಮಾನತಿಗೆ ಬೆಂಬಲಿಗರು ಗರಂ - kannadanews

ಎಐಸಿಸಿಯಿಂದ ಮಾಜಿ ಸಚಿವ ರೋಷನ್ ಬೇಗ್ ಸಸ್ಪೆಂಡ್ ಆದ ಹಿನ್ನೆಲೆ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಎಂಎ ಹಗರಣಕ್ಕೆ ಕಾಂಗ್ರೆಸ್ ನ ಮೊದಲ ವಿಕೆಟ್ ಪತನ
author img

By

Published : Jun 19, 2019, 9:08 AM IST

ಬೆಂಗಳೂರು: ಎಐಸಿಸಿಯಿಂದ ಮಾಜಿ ಸಚಿವ ರೋಷನ್ ಬೇಗ್ ಸಸ್ಪೆಂಡ್ ಹಿನ್ನೆಲೆ ಅವರ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಪಕ್ಷದಿಂದ ಅಮಾನತು ಮಾಡಿದ್ದಕ್ಕೆ ರೋಷನ್ ಬೇಗ್ ಬೆಂಬಲಿಗರು ಕಳೆದ ರಾತ್ರಿಯಿಂದಲೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶಿವಾಜಿನಗರದ ರೋಷನ್ ಬೇಗ್ ಮನೆಗೆ ಆಗಮಿಸಿದ ಬೆಂಬಲಿಗರು ಭೇಟಿಗೆ ಪ್ರಯತ್ನ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರೋಷನ್ ಬೇಗ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಸ್ಪೆಂಡ್ ಮಾಡಬೇಕಿರೋರನ್ನ ಮಾಡ್ತಿಲ್ಲ. ಶಾಸಕರಾದ ನಾಗೇಂದ್ರ, ರಮೇಶ್‍ ಜಾರಕಿಹೊಳಿ, ಅವರ ಬೆಂಬಲಿಗ ಶಾಸಕರು ಸಾಕಷ್ಟು ಮಂದಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ನಾವು ಅಲ್ಪಸಂಖ್ಯಾತರು ಅಂತ ಹೀಗೆ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ಪಾರ್ಟಿಯಿಂದ ರಾಹುಲ್ ಗಾಂಧಿ ಮಾಡಿಸ್ತಿಲ್ಲ. ಇದನ್ನ ಮಾಡಿಸ್ತಿರೋದು ರಾಜ್ಯ ಸಮ್ಮಿಶ್ರ ಸರ್ಕಾರ ಎಂದು ಆರೋಪಿಸಿದ್ದಾರೆ. ಸಿಎಲ್​​ಪಿ ನಾಯಕರ ಬಗ್ಗೆ ರೋಷನ್ ಬೇಗ್ ಮಾತನಾಡಿದ್ರು. ಅದಕ್ಕೆ ಹೀಗೆಲ್ಲಾ ಮಾಡಸ್ತಿದ್ದಾರೆ. ಪ್ರಭಾವಿ ಅಲ್ಪಸಂಖ್ಯಾತ ನಾಯಕನನ್ನ ತುಳಿಯುವ ಪ್ರಯತ್ನ ಮಾಡ್ತಿದ್ದಾರೆ. 40 ವರ್ಷದಿಂದ ಸಾಕಷ್ಟು ಹಗರಣಗಳು ಆಗಿವೆ. ದಿನೇಶ್ ಗುಂಡೂರಾವ್ ಅವ್ರೆಲ್ಲಾ ಸೇರಿ ಹೀಗೆ ಮಾಡ್ತಿದ್ದಾರೆ. ನಮ್ಮ ಸಾಹೇಬ್ರು ತಪ್ಪು ಮಾಡಿದ್ರೆ ಸಿಬಿಐ ತನಿಖೆಗೆ ಒತ್ತಾಯ ಮಾಡ್ತಿರಲಿಲ್ಲ. ಈ ಪ್ರಕರಣವನ್ನ ಅವರೇ ತನಿಖೆಗೆ ನೀಡಿ ಅಂದಿದ್ದಾರೆ.

ನಮ್ಮವರ ತಲೆ ದಂಡವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಬೇಗ್​ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ದಿಢೀರ್​ ನಿರ್ಧಾರದಿಂದ ರೋಷನ್ ಬೇಗ್ ಕೂಡ ವಿಚಲಿತರಾಗಿದ್ದಾರೆ. ಮಾಧ್ಯಮಗಳನ್ನ ಕಂಡು ಮನೆಯೊಳಗೆ ಹೋದ ರೋಷನ್ ಬೇಗ್, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿನ್ನೆ ತಡರಾತ್ರಿ 12ರ ನಂತರ ಅವರು ನಿವಾಸಕ್ಕೆ ಆಗಮಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆ ಹೆಚ್ಚಿದೆ.

Intro:newsBody:ಐಎಂಎ ಹಗರಣಕ್ಕೆ ಕಾಂಗ್ರೆಸ್ ನ ಮೊದಲ ವಿಕೆಟ್ ಪತನ; ಬೇಗ್ ಅಭಿಮಾನಿಗಳು ಗರಂ

ಬೆಂಗಳೂರು: ಎಐಸಿಸಿಯಿಂದ ಮಾಜಿ ಸಚಿವ ರೋಶನ್ ಬೇಗ್ ಸಸ್ಪೆಂಡ್ ಹಿನ್ನಲೆ ಅವರ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ.
ಪಕ್ಷದಿಂದ ಉಚ್ಚಾಟನೆ ಮಾಡಿದ್ದಕ್ಕೆ ರೋಶನ್ ಬೇಗ್ ಬೆಂಬಲಿಗರು ಕಳೆದ ರಾತ್ರಿಯಿಂದಲೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶಿವಾಜಿನಗರದ ರೋಶನ್ ಬೇಗ್ ಮನೆಗೆ ಆಗಮಿಸಿದ ಬೆಂಬಲಿಗರು ಭೇಟಿಗೆ ಪ್ರಯತ್ನ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರೋಶನ್ ಬೇಗ್ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಸ್ಪೆಂಡ್ ಮಾಡಬೇಕಿರೋವರನ್ನ ಮಾಡ್ತಿಲ್ಲ. ಶಾಸಕರಾದ ನಾಗೇಂದ್ರ, ರಮೇಶ್‍ ಜಾರಕಿಹೊಳಿ, ಅವರ ಬೆಂಬಲಿಗ ಶಾಸಕರು ಸಾಕಷ್ಟು ಮಂದಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ನಾವು ಅಲ್ಪ ಸಂಖ್ಯಾತರರು ಅಂತ ಹೀಗೆ ಮಾಡ್ತಿದ್ದಾರೆ. ಇದು ಕಾಂಗ್ರೆಸ್ ಪಾರ್ಟಿಯಿಂದ ರಾಹುಲ್ ಗಾಂಧಿ ಮಾಡಿಸ್ತಿಲ್ಲ. ಇದನ್ನ ಮಾಡಿಸ್ತಿರೋದು ರಾಜ್ಯ ಸಮ್ಮಿಶ್ರ ಸರ್ಕಾರ ಎಂದು ಆರೋಪಿಸಿದ್ದಾರೆ.
ಸಿಎಲ್ ಪಿ ನಾಯಕರ ಬಗ್ಗೆ ರೋಷನ್ ಬೇಗ್ ಮಾತನಾಡಿದ್ರು. ಅದಕ್ಕೆ ಹೀಗೆಲ್ಲಾ ಮಾಡ್ತಿಸ್ತಿದ್ದಾರೆ. ಪ್ರಭಾವಿ ಅಲ್ಪಸಂಖ್ಯಾತ ನಾಯಕನನ್ನ ತುಳಿಯುವ ಪ್ರಯತ್ನ ಮಾಡ್ತಿದ್ದಾರೆ. 40 ವರ್ಷದಿಂದ ಸಾಕಷ್ಟು ಹಗರಣಗಳು ಆಗಿವೆ. ದಿನೇಶ್ ಗುಂಡೂರಾವ್ ಅವ್ರೆಲ್ಲಾ ಸೇರಿ ಹೀಗೆ ಮಾಡ್ತಿದ್ದಾರೆ. ನಮ್ಮ ಸಾಹೇಬ್ರು ತಪ್ಪು ಮಾಡಿದ್ರೆ ಸಿಬಿಐ ಗೆ ತನಿಖೆಗೆ ಒತ್ತಾಯ ಮಾಡ್ತಿರಲಿಲ್ಲ. ಈ ಪ್ರಕರಣವನ್ನ ಅವ್ರೇ ತನಿಖೆಗೆ ನೀಡಿ ಅಂದಿದ್ದಾರೆ. ಾದರೂ ನಮ್ಮವರ ತಲೆದಂಡವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಡರಾತ್ರಿ ಮನೆಗೆ, ಇಂದು ಸುದ್ದಿಗೋಷ್ಠಿ ಸಾಧ್ಯತೆ
ಪಕ್ಷದಿಂದ ಸಸ್ಪೆಂಡ್ ಆದ ಹಿನ್ನಲೆ, ರೋಷನ್ ಬೇಗ್ ಗೆ ಆತಂಕ ಹೆಚ್ಚಾಗಿದೆ. ದಿಢೀರ್‍ ಪಕ್ಷದ ನಿರ್ಧಾರದಿಂದ ಅವರು ವಿಚಲಿತರಾಗಿದ್ದಾರೆ. ಮಾಧ್ಯಮಗಳನ್ನ ಕಂಡು ಮನೆಯೊಳಗೆ ಹೋದ ರೋಷನ್ ಬೇಗ್, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಳೆ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡ್ತೇನೆ ಎಂದು ಹೇಳಿ ತೆರಳಿದ್ದಾರೆ. ನಿನ್ನೆ ತಡರಾತ್ರಿ 12ರ ನಂತರ ಅವರು ನಿವಾಸಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವ ಸಾಧ್ಯತೆ ಹೆಚ್ಚಿದೆ.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.