ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಹಿರಿಯ ಕಾಂಗ್ರೆಸಿಗ ಬಿಕೆ ಹರಿಪ್ರಸಾದ್ ಕುಟುಂಬದ ಒಟ್ಟು ಆಸ್ತಿ 74 ಕೋಟಿ ರೂ ಆಗಿದ್ದು, ಹರಿಪ್ರಸಾದ್ ಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ.
ವಿಧಾನಪರಿಷತ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿರುವ ಅವರು ಚುನಾವಣಾ ಅಧಿಕಾರಿಗೆ ನೀಡಿದ ಆಸ್ತಿ ವಿವರದಲ್ಲಿ ಈ ಕೆಳಗಿನ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಸ್ವಂತ ಮನೆ ಹಾಗೂ ಎರಡು ಕಾರು ಹೊಂದಿರುವ ಅವರ ವಿಶೇಷ ಎಂದರೆ ಯಾವುದೇ ಚಿನ್ನಾಭರಣ ಹೊಂದಿಲ್ಲ. ಬಿಕೆ ಹರಿಪ್ರಸಾದ್ ವೈಯಕ್ತಿಕವಾಗಿ ಹೊಂದಿರುವ ಒಟ್ಟು ಆಸ್ತಿ ಮೌಲ್ಯ 35 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಒಟ್ಟು ಚರಾಸ್ತಿ 12.86 ಕೋಟಿ ರೂ ಆಗಿದ್ದರೆ, ಸ್ಥಿರಾಸ್ತಿ ಮೌಲ್ಯ 22.50 ಕೋಟಿ ಆಗಿದೆ. ಇವರು ಒಟ್ಟು 12.47 ಲಕ್ಷ ರೂ ಸಾಲ ಹೊಂದಿದ್ದಾರೆ.
ಓದಿ:ವಿಧಾನ್ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ನಜೀರ್ ಅಹಮದ್ ಸಾಲವೆಷ್ಟು ಗೊತ್ತಾ!?
ಇನ್ನು ಇವರ ಪತ್ನಿ ಒಟ್ಟು 39 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಇದರಲ್ಲಿ 31.43 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 7.7 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಹೆಸರಿನಲ್ಲಿ ಒಟ್ಟು 2 ಕೋಟಿ ರೂಪಾಯಿ ಸಾಲ ಇದ್ದು. ಒಟ್ಟು ಇವರ ಬಳಿ 31.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದೆ ಎಂದು ಮಾಹಿತಿ ನೀಡಿದ್ದಾರೆ.