ETV Bharat / state

ಅಧಿವೇಶನಕ್ಕೆ ಹಾಜರಿ ಕಡ್ಡಾಯ: ಅತೃಪ್ತ MLAಗಳಿಗೆ ಜೆಡಿಎಸ್​​-ಕಾಂಗ್ರೆಸ್​​ನಿಂದ ವಿಪ್​ ಜಾರಿ

ನಾಳೆಯಿಂದ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದ್ದು, ಈ ಮಧ್ಯೆ ಸಮ್ಮಿಶ್ರ ಸರ್ಕಾರದ ಎಲ್ಲ ಶಾಸಕರಿಗೂ ವಿಪ್​ ಜಾರಿ ಮಾಡಲಾಗಿದೆ.

ಜೆಡಿಎಸ್​​-ಕಾಂಗ್ರೆಸ್​​ನಿಂದ ವಿಪ್
author img

By

Published : Jul 11, 2019, 8:36 PM IST

Updated : Jul 11, 2019, 8:41 PM IST

ಬೆಂಗಳೂರು: ನಾಳೆಯಿಂದ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದ್ದು, ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ.

rebels got party whip
ಜೆಡಿಎಸ್​​-ಕಾಂಗ್ರೆಸ್​​ನಿಂದ ವಿಪ್

ಜೆಡಿಎಸ್​ನ 37 ಶಾಸಕರು ಹಾಗೂ ಕಾಂಗ್ರೆಸ್​ನ ಎಲ್ಲ ಶಾಸಕರಿಗೂ ವಿಪ್​ ಜಾರಿ ಮಾಡಲಾಗಿದ್ದು, ಸದನದಲ್ಲಿ ಹಾಜರಿರಬೇಕು ಮತ್ತು ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ಗೈರು ಹಾಜರಾದರೆ ಹಾಗೂ ಹಾಜರಿದ್ದು ಸರಕಾರದ ವಿರುದ್ಧ ಮತ ಚಲಾಯಿಸಿದರೆ ಅನರ್ಹಗೊಳಿಸಲಾಗುವುದು ಎಂದು ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಅಧಿವೇಶನಕ್ಕೆ ಹಾಜರಿ ಕಡ್ಡಾಯ

ಜೆಡಿಎಸ್​ ಶಾಸಕರಿಗೆ ಜೆಡಿಎಲ್​ಪಿ ಮುಖಂಡ ಕುಮಾರಸ್ವಾಮಿ ವಿಪ್​ ಜಾರಿ ಮಾಡಿದ್ದಾರೆ. ಅಧಿವೇಶಕ್ಕೆ ಹಾಜರಾಗದಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದರ ಮಧ್ಯೆ ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ ಕಾಂಗ್ರೆಸ್​ ಶಾಸಕರಿಗೆ ವಿಪ್‌ ಜಾರಿ ಮಾಡಿದ್ದಾರೆ. ಎಲ್ಲ ಶಾಸಕರ ಕೊಠಡಿಗೆ ವಿಪ್‌ ನೋಟಿಸ್ ಅಂಟಿಸಲಾಗಿದೆ ಎಂದು ತಿಳಿದು ಬಂದಿದೆ. ಅಧಿವೇಶನದ ಕಲಾಪ ನಡೆಯುವಾಗ ಯಾವುದೇ ಸಂದರ್ಭದಲ್ಲಿ ಮಂಡನೆಯಾಗುವ ಹಣಕಾಸು ಮಸೂದೆಗಳು, ಶಾಸನಗಳು ಹಾಗು ಇತರೆ ಕಲಾಪಗಳಲ್ಲಿ ಭಾಗವಹಿಸಿ " ಸರಕಾರದ ಪರ ಕಡ್ಡಾಯವಾಗಿ ಮತ " ಚಲಾವಣೆ ಮಾಡಬೇಕೆಂದು ವಿಪ್‌ನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸುಪ್ರೀಂಕೋರ್ಟ್​ ಸೂಚನೆ ಹಿನ್ನೆಲೆಯಲ್ಲಿ ಇಂದು ಅತೃಪ್ತ 11 ಶಾಸಕರು ಖುದ್ದಾಗಿ ರಾಜೀನಾಮೆ ನೀಡಲು ಸ್ಪೀಕರ್​ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿದ್ದರು. ಈ ವೇಳೆಯೇ ಅತೃಪ್ತರ ಕೈಗೆ ವಿಪ್​ ನೀಡಲು ಮುಖಂಡರು ಸಕಲ ತಯಾರಿ ನಡೆಸಿದ್ದರು. ಆದರೆ ತರಾತುರಿಯಲ್ಲಿ ಅವರು ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅತೃಪ್ತ ಶಾಸಕರ ಮನೆಗೆ ವಿಪ್ ನೋಟಿಸ್ ತಲುಪಿಸುವ ಕೆಲಸ ಸಹ ನಡೆದಿದೆ ಎಂದು ತಿಳಿದು ಬಂದಿದೆ.

Intro: ವಿಧಾನಸಭೆ ಅಧಿವೇಶನಕ್ಕೆ ಕಡ್ಡಾಯ ಹಾಜರಿರಲು
ಕಾಂಗ್ರೆಸ್- ಜೆಡಿಎಸ್ ಶಾಸಕರಿಗೆ " ವಿಪ್ " ಜಾರಿ

ಬೆಂಗಳೂರು : ನಾಳೆಯಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಆಡಳಿತ ಪಕ್ಷದ ಪಕ್ಷದ ಎಲ್ಲ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ.

ಅಧಿವೇಶನದ ಸಂದರ್ಭದಲ್ಲಿ ವಿಪ್ ನ್ನು ಗೌರವಿಸಿ ಎಲ್ಲ ಶಾಸಕರು ಸದನದಲ್ಲಿ ಉಪಸ್ಥಿತರಿರಬೇಕು. ಸದನಕ್ಕೆ ಹಾಜರಾಗದಿದ್ದಲ್ಲಿ ಅಥವಾ ಸರಕಾರದ ಪರ ಮತ ಚಲಾಯಿಸದೇ ಇದ್ದಲ್ಲಿ ಭಾರತ ಸಂವಿಧಾನದ ಅನುಚ್ಛೇದ - ೧೦ ( anti defection law ) ರ ಪ್ರಕಾರ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕಾನೂನಿನ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಆಡಳಿತ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಲಾಗಿದೆ.

Body: ಅಧಿವೇಶನದ ಕಲಾಪ ನಡೆಯುವಾಗ ಯಾವುದೇ ಸಂದರ್ಭದಲ್ಲಿ ಮಂಡನೆಯಾಗುವ ಹಣಕಾಸು ಮಸೂದೆಗಳು, ಶಾಸನಗಳು ಹಾಗು ಇತರೆ ಕಲಾಪಗಳಲ್ಲಿ ಭಾಗವಹಿಸಿ " ಸರಕಾರದ ಪರ ಕಡ್ಡಾಯವಾಗಿ ಮತ " ಚಲಾವಣೆ ಮಾಡಬೇಕೆಂದು ವಿಪ್ ನಲ್ಲಿ ತಿಳಿಸಲಾಗಿದೆ.

ಶಾಸಕ ಸ್ಥಾನಕ್ಕೆ ಅತೃಪ್ತರು ರಾಜೀನಾಮೆ ನೀಡಿದ್ದರಿಙದ ಅವರನ್ನು ಕಡ್ಡಾಯವಾಗಿ ಸದನಕ್ಕೆ ಕರೆಯಿಸಿ ಆಡಳಿತ ಪಕ್ಷದ ಪರ ಮತ ಚಲಾವಣೆ ಮಾಡಲು ಅನುಕೂಲವಾಗುವಂತೆ ವಿಪ್ ಜಾರಿಮಾಡಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಶಾಸಕರಿಗೆ ವಿಧಾನಸಭೆ ಯ ಸರಕಾರಿ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ವಿಪ್ ನ್ನು ನೀಡಿದ್ದಾರೆ.

ಸದನಕ್ಕೆ ಗೈರು ಹಾಜರಾಗಲಿದ್ದಾರೆ ಎಂದು ಭಾವಿಸಲಾಗಿರುವ ಅತೃಪ್ತ ಶಾಸಕರ ಮನೆ ಮತ್ತು ನಿವಾಸಗಳಿಗೆ ವಿಪ್ ನ್ನು ತರಾತುರಿಯಲ್ಲಿ ತಲುಪಿಸಲಾಗುತ್ತಿದೆ.

ವಿಪ್ ಜಾರಿ ಮಾಡಿದ ನಂತರವೂ ಶಾಸಕರು ಉಲ್ಲಙಘನೆ ಮಾಡಿದರೆ ಶಾಸಕ ಸ್ಥಾನದಿಂದ ಅನರ್ಹತೆ ಮಾಡುವ ಉದ್ದೇಶ ವಿಪ್ ಜಾರಿ ಹಿಂದೆ ಇದೆ ಎಂದು ಹೇಳಲಾಗಿದೆ.

Conclusion:
Last Updated : Jul 11, 2019, 8:41 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.