ETV Bharat / state

ಉಪಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತೆಯರಿಗೆ ಕೆಪಿಸಿಸಿಯಿಂದ ಅಭಿನಂದನೆ

author img

By

Published : Nov 9, 2020, 6:21 PM IST

Updated : Nov 9, 2020, 7:54 PM IST

ಕಾಂಗ್ರೆಸ್​ ಹಮ್ಮಿಕೊಂಡಿದ್ದ 'ಅಭಿನಂದನಾ ಕಾರ್ಯಕ್ರಮ'ದಲ್ಲಿ ಉಪಚುನಾವಣೆ ವೇಳೆ ಶ್ರಮಿಸಿದ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.

ಕಾರ್ಯಕರ್ತೆಯರಿಗೆ ಕೆಪಿಸಿಸಿಯಿಂದ ಅಭಿನಂದನೆ
ಕಾರ್ಯಕರ್ತೆಯರಿಗೆ ಕೆಪಿಸಿಸಿಯಿಂದ ಅಭಿನಂದನೆ

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಶ್ರಮಿಸಿದ ಕಾರ್ಯಕರ್ತೆಯರಿಗೆ ಕೆಪಿಸಿಸಿ ಕಚೇರಿಯಲ್ಲಿ ಅಭಿನಂದಿಸಲಾಯಿತು.

ಸೋಮವಾರ ಹಮ್ಮಿಕೊಂಡಿದ್ದ 'ಅಭಿನಂದನಾ ಕಾರ್ಯಕ್ರಮ'ದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್, ಮಂಗಳಮುಖಿಯರ ಸಂಘದ ಅಧ್ಯಕ್ಷೆ ಅಕೈ ಪದ್ಮಶಾಲಿ ಅವರು ಭಾಗವಹಿಸಿದ್ದರು.

ಈ ವೇಳೆ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಪಟಾಕಿ ಬ್ಯಾನ್ ವಿಚಾರ ಮಾತನಾಡಿ, ಎಲ್ಲಾ ವ್ಯಾಪಾರಿಗಳನ್ನ ಸರ್ಕಾರ ಸಾಯಿಸ್ತಿದೆ. ಪಟಾಕಿ‌ ಯಾರೆ ತಯಾರು‌ ಮಾಡಿರಲಿ. ತಮಿಳುನಾಡು ಆಗಿರಲಿ, ಕರ್ನಾಟಕ ಆಗಿರಲಿ. ಅದೊಂದು ಉದ್ಯಮದಲ್ಲೇ ತಯಾರಾಗೋದು. ಮಾಲಿನ್ಯ ನಿಯಂತ್ರಿಸಲಿ. ಆದರೆ ಏಕಾಏಕಿ ಬ್ಯಾನ್ ಮಾಡೋದು ಸರಿಯಲ್ಲ. ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕ್ತಾರೆ. ಬೇಕಾದರೆ ಸರ್ಕಾರವೇ ಎಲ್ಲಾ ಪಟಾಕಿ ಖರೀದಿಸಲಿ ಎಂದರು.

ಕಾರ್ಯಕರ್ತೆಯರಿಗೆ ಕೆಪಿಸಿಸಿಯಿಂದ ಅಭಿನಂದನೆ

ಆರ್.ಆರ್.ನಗರ, ಶಿರಾ ಸಮೀಕ್ಷೆ ವರದಿ ವಿಚಾರ ಮಾತನಾಡಿ, ಸರ್ಕಾರ ಎಷ್ಟೇ ದೌರ್ಜನ್ಯ ಮಾಡಿದ್ರೂ ಏನೂ‌ ಆಗಿಲ್ಲ. ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯವೂ ಕುಗ್ಗಿಲ್ಲ. ಸೋಲು, ಗೆಲುವು ಇದ್ದಿದ್ದೇ. ನನಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲಾ ಪಾರ್ಟಿಗಳು ನಮಗೆ ಸಪೋರ್ಟ್ ಮಾಡಿದ್ದಾರೆ. ಸಮೀಕ್ಷೆಗಳು ಏನೇ ಇರಲಿ. ಎರಡೂ ಕಡೆ ಜನ ನಮ್ಮನ್ನ ಕೈಬಿಡುವುದಿಲ್ಲ. ಆ ಆತ್ಮ ವಿಶ್ವಾಸ ನಮಗಿದೆ. ಸರ್ಕಾರ ಸರಿಯಾಗಿ ನಡೆಸಿಲ್ಲ ಅನ್ನೋದಕ್ಕೆ ಜನರೇ ಸಾಕ್ಷಿ. ಇದು ಕುಸುಮಾ ಎಲೆಕ್ಷನ್ ಅಲ್ಲ. ಮಹಿಳೆಯರ ಎಲೆಕ್ಷನ್, ಎಲ್ಲರೂ ಕೆಲಸ ಮಾಡಿದ್ದೀರ ಎಂದರು.

ಮಾಜಿ ಸಚಿವರ ಪುತ್ರನ ವಿಚಾರ ಪ್ರಸ್ತಾಪ:

ಮಾಜಿ ಸಚಿವ ರಾಮಪ್ಪ ಲಮಾಣಿ ಮಗ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ವಿಚಾರ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಡ್ರಗ್ಸ್ ಯುವ ಸಮುದಾಯಕ್ಕೆ ಮಾರಕ. ಡ್ರಗ್ಸ್ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ರೂ ಕ್ರಮ ಆಗಲಿ. ಶಾಸಕರ ಪುತ್ರ ಬಂಧನ ವಿಚಾರದ ಬಗ್ಗೆ ಸದ್ಯ ಮಾಹಿತಿಯಿಲ್ಲ. ಯಾರಿಂದ ತಪ್ಪು ಆಗಿದ್ರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಪ್ರಭಾವಿಗಳು ಇದ್ರೂ ಕಾನೂನು ಇದೆ. ಆದ್ರೆ ತನಿಖೆಯಲ್ಲಿ ಯಾರು ಪ್ರಭಾವ ಬೀರಬಾರದು ಎಂದರು.

ಉಡಿ ತುಂಬಿ ಅಭಿನಂದನೆ:

ಆರ್.ಆರ್. ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ಫಲಿತಾಂಶಕ್ಕೂ ಮುನ್ನ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಡಿ ತುಂಬಿ ಶುಭ ಹಾರೈಸಿದರು. ಉಡಿ ತುಂಬುವ ಕಾರ್ಯಕ್ರಮದಲ್ಲಿ ಕುಸುಮಾಗೆ ಅರಿಶಿನ ಕುಂಕುಮವಿಟ್ಟು, ಬಳೆ ತೊಡಿಸಿ, ಹೂ ಮುಡಿಸಿ ಉಡಿ ತುಂಬಿದರು.

Last Updated : Nov 9, 2020, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.