ETV Bharat / state

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದು.. ಕಳೆದುಕೊಂಡಿದ್ದಿಷ್ಚು..

author img

By

Published : May 3, 2021, 12:27 PM IST

ಕಾಂಗ್ರೆಸ್ ಪಕ್ಷದ ಪಾಲಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ ಎದುರಾಗಿದೆ. ಪ್ರಬಲ ರಾಷ್ಟ್ರೀಯ ನಾಯಕರ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಪ್ರಬಲ ಪ್ರತಿಪಕ್ಷವಾಗಿ ಬಿಜೆಪಿಗೆ ಕಾಂಗ್ರೆಸ್ ಸವಾಲು ಹಾಕದಿದ್ದರೆ, ಮತ್ತೊಮ್ಮೆ ರಾಷ್ಟ್ರದಲ್ಲಿ ತೃತೀಯ ರಂಗ ರಚನೆಯಾಗುವಲ್ಲಿ ಯಾವುದೇ ಸಂಶಯವಿಲ್ಲ..

Congress
ಕಾಂಗ್ರೆಸ್

ಬೆಂಗಳೂರು : ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ಹೇಳಿಕೊಂಡಿದ್ದರೆ, ತಾವು ಕಳೆದುಕೊಂಡದ್ದಕ್ಕಿಂತ ಗಳಿಸಿದ್ದೇ ಜಾಸ್ತಿ ಎಂದು ಕಾಂಗ್ರೆಸ್ ಹೇಳಿದೆ.

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸೋಂ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶವೇ ಬಂದಿದೆ. ಕೇರಳ, ಪಶ್ಚಿಮ ಬಂಗಾಳ, ಅಸ್ಸೋಂನಲ್ಲಿ ಹಿಂದಿದ್ದ ಸರ್ಕಾರವೇ ಅಧಿಕಾರಕ್ಕೆ ಬಂದರೆ, ಆಡಳಿತ ವಿರೋಧಿ ಅಲೆಗೆ ತಮಿಳುನಾಡು, ಪುದುಚೆರಿಯಲ್ಲಿ ಸರ್ಕಾರ ಬದಲಾಗಿದೆ.

ಎಲ್ಲಿಯೂ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿಲ್ಲ. ಆದರೆ, ತಮಿಳುನಾಡಿನಲ್ಲಿ ಡಿಎಂಕೆ ಜತೆ ಒಪ್ಪಂದ ಮಾಡಿಕೊಂಡು ಕೊಂಚ ಬಲ ಹೆಚ್ಚಿಸಿಕೊಂಡಿದೆ. ಕೇರಳದಲ್ಲಿ 20 ಸ್ಥಾನ ಸಂಪಾದಿಸಿದೆ. ಇದನ್ನು ಬಿಟ್ಟರೆ ಉತ್ತರದ ರಾಜ್ಯಗಳಲ್ಲಿ ಕಾಂಗ್ರೆಸ್ ಸಾಧನೆ ಗಣನೀಯವಾಗಿ ಕಡಿಮೆ ಆಗಿದೆ.

ದಿನದಿಂದ ದಿನಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ತನ್ನ ಜನಪ್ರಿಯತೆ ಉಳಿಸಿಕೊಳ್ಳುತ್ತಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ಹಲವು ರಾಜ್ಯಗಳಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲಿ ನಡೆದ ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಏಳು-ಬೀಳುಗಳ ಮೇಲೆ ಒಂದು ನೋಟ ಇಲ್ಲಿದೆ.

ಕೇರಳ : ದೇವರನಾಡು ಎಂದೇ ಜನಪ್ರಿಯವಾಗಿರುವ ಕೇರಳದಲ್ಲಿ ಆಡಳಿತ ಪಕ್ಷ ಎಲ್​ಡಿಎಫ್​ಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್ 21 ಸ್ಥಾನ ಗೆದ್ದಿದೆ. ಅಂದಹಾಗೆ ಇದನ್ನು ಸಾಧನೆ ಎಂದು ಹೇಳಲಾಗದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 22 ಸ್ಥಾನ ಗೆದ್ದಿತ್ತು. ಒಂದು ಸ್ಥಾನದ ಕೊರತೆಯೇ ಆಗಿದೆ. ಇಲ್ಲಿ ಬಿಜೆಪಿ ಖಾತೆ ತೆರೆದೇ ಇಲ್ಲ ಎನ್ನುವ ಸಮಾಧಾನದಲ್ಲಿ ಕಾಂಗ್ರೆಸ್ ತನಗಾದ ಅಲ್ಪ ಹಿನ್ನಡೆ ಮರೆತಿದೆ. ಆದರೆ, ಇದೂ ಪಕ್ಷದ ಪ್ರಗತಿ ದೃಷ್ಟಿಯಿಂದ ಮಾರಕ.

ತಮಿಳುನಾಡು : ಪಕ್ಕದ ತಮಿಳುನಾಡು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿಎಂಕೆ ಜತೆ ಲೋಕಸಭೆ ಮಾದರಿ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್​ಗೆ ದೊಡ್ಡ ಲಾಭವೇ ಸಿಕ್ಕಿದೆ. ಒಂದೆಡೆ ಬಿಜೆಪಿಗೆ ಹೋಲಿಸಿದರೆ ಇವರ ಸಾಧನೆ ದೊಡ್ಡದು. ಬಿಜೆಪಿ ನಾಲ್ಕು ಸ್ಥಾನ ಗೆದ್ದಿದ್ದು, ಕಳೆದ ಸಾರಿ ಕೇವಲ ಒಂದು ಸ್ಥಾನ ಪಡೆದಿತ್ತು.

ಆದರೆ, ಕಾಂಗ್ರೆಸ್ ಡಿಎಂಕೆ ಸಹಕಾರದೊಂದಿಗೆ, 18 ಸ್ಥಾನ ಗೆದ್ದಿದೆ. ಬರೋಬ್ಬರಿ 11 ಸ್ಥಾನ ಹೆಚ್ಚಾಗಿ ಗಳಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ ಕೇವಲ 7 ಸ್ಥಾನ ಮಾತ್ರ ಗಳಿಸಿತ್ತು. ದಿನೇಶ್ ಗುಂಡೂರಾವ್ ಪಾಲಿಗೆ ಇಲ್ಲಿನ ಉಸ್ತುವಾರಿ ಸವಾಲಿನದ್ದಾಗಿತ್ತು. ಯಶಸ್ಸು ಕಂಡಿದ್ದಾರೆ.

ಪಶ್ಚಿಮ ಬಂಗಾಳ : ಸಿಪಿಐಎಂ ಜತೆ ಸೀಟು ಹಂಚಿಕೆ ಮಾಡಿಕೊಂಡು ಕೇರಳದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮೈತ್ರಿ, ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ನೆಲಕಚ್ಚಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಸೇರಿ ಗಳಿಸಿದ್ದ ಎಲ್ಲಾ 43 ಸ್ಥಾನಗಳನ್ನು ಕಳೆದುಕೊಂಡಿವೆ.

ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 20 ಸ್ಥಾನದಲ್ಲಿ ಗೆದ್ದಿದ್ದು, ಈ ಸಾರಿ ಶೂನ್ಯ ಸುತ್ತಿದೆ. ಆದರೆ, ಎಡಪಕ್ಷ ಈ ರಾಜ್ಯದಲ್ಲಿ ಸಂಪೂರ್ಣ ನಾಮಾವಶೇಷವಾಗಿದೆ. ಇಲ್ಲಿ ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ ಬಹಳ ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಖಾತೆ ತೆರೆಯದಿರುವುದು ತೀರ ಮುಜುಗರದ ಸಂಗತಿಯಾಗಿದೆ.

ಅಸ್ಸೋಂ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಸಾಧನೆ ನಗಣ್ಯವಲ್ಲ. ಸ್ಥಾನಗಳ ಹೆಚ್ಚಳ ಮಾಡಿಕೊಳ್ಳುವ ಮೂಲಕ ಬಿಜೆಪಿಗೆ ಈಶಾನ್ಯ ರಾಜ್ಯಗಳಲ್ಲಿ ಸಹ ನಮ್ಮ ಪ್ರಾಬಲ್ಯ ಹೆಚ್ಚುತ್ತಿದೆ ಎಂಬ ಸೂಚನೆ ನೀಡಿದೆ. 29 ಸ್ಥಾನ ಗೆಲ್ಲುವ ಮೂಲಕ ಕಳೆದ ಸಾರಿಗಿಂತ 7 ಸ್ಥಾನ ಹೆಚ್ಚು ಗಳಿಸಿದೆ.

ಪುದುಚೆರಿ : ಕಾಂಗ್ರೆಸ್ ಪರಿಸ್ಥಿತಿ ಪುದುಚೆರಿಯಲ್ಲಿ ಹೀನಾಯವಾಗಿದೆ. ಹಿಂದೆ ಅಧಿಕಾರದಲ್ಲಿದ್ದ ಪಕ್ಷ ಅಧಿಕಾರ ಕಳೆದುಕೊಳ್ಳುವ ಜತೆಗೆ ಕೇವಲ ಎರಡು ಸ್ಥಾನ ಗೆದ್ದುಕೊಂಡು 7 ಸ್ಥಾನ ಕಳೆದುಕೊಂಡಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಮಾತ್ರವಲ್ಲ, ಕೇಂದ್ರಾಡಳಿತ ಪ್ರದೇಶದ ಹಿಡಿತ ಸಹ ಕಳೆದುಕೊಂಡಿದೆ.

ಕಾಂಗ್ರೆಸ್ ಪಕ್ಷದ ಪಾಲಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲ ಎದುರಾಗಿದೆ. ಪ್ರಬಲ ರಾಷ್ಟ್ರೀಯ ನಾಯಕರ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಪ್ರಬಲ ಪ್ರತಿಪಕ್ಷವಾಗಿ ಬಿಜೆಪಿಗೆ ಕಾಂಗ್ರೆಸ್ ಸವಾಲು ಹಾಕದಿದ್ದರೆ, ಮತ್ತೊಮ್ಮೆ ರಾಷ್ಟ್ರದಲ್ಲಿ ತೃತೀಯ ರಂಗ ರಚನೆಯಾಗುವಲ್ಲಿ ಯಾವುದೇ ಸಂಶಯವಿಲ್ಲ. ಆಗ ಕಾಂಗ್ರೆಸ್​ಗೆ ಸದ್ಯ ತೃತೀಯ ರಂಗಕ್ಕಿರುವ ಸ್ಥಿತಿ ಎದುರಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.