ETV Bharat / state

ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ನಾಕಾಬಂಧಿ: ಸಿಎಂ ಬಿಎಸ್​ವೈ

ರಾಷ್ಟ್ರ ವಿಪತ್ತು ಎದರಿಸುತ್ತಿದ್ದು, ಇಂತಹ ಸಂದಿಗ್ಧ ಸಮಯದಲ್ಲಿ ಮಾಧ್ಯಮಗಳು ಸಂಯಮದಿಂದ ವರ್ತಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

author img

By

Published : Mar 24, 2020, 8:11 PM IST

CM B.S. yaduyurappa
ನಾಳೆಯಿಂದ ಸಂಪೂರ್ಣ ನಾಕಬಂದಿ: ಸಿಎಂ ಬಿಎಸ್​ವೈ

ಬೆಂಗಳೂರು: ನಾಳೆಯಿಂದ ಯಾವುದೇ ವಾಹನವನ್ನು ಹೊರಗಡೆ ಹೋಗಲು ಬಿಡುವುದಿಲ್ಲ. ಸಂಪೂರ್ಣ ನಾಕಾಬಂಧಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಾಧ್ಯಮಗಳು ಇಂತಹ ಸಂದಿಗ್ಧ ಸಮಯದಲ್ಲಿ ಸಂಯಮದಿಂದ ವರ್ತಿಸಿದರೆ ಒಳ್ಳೆಯದು. ಬಹಳ ಮಾಧ್ಯಮ ಮಿತ್ರರು ಸತ್ಯವನ್ನೇ ಬಿತ್ತರಿಸಿರುತ್ತಾರೆ. ಆದರೆ ಕೆಲವು ಮಾಧ್ಯಮ ಮಿತ್ರರು ಜನರಿಗೆ ಸುಳ್ಳು ಸುದ್ದಿಗಳ ಮುಖಾಂತರ ತಪ್ಪು ಸಂದೇಶ ಬಿತ್ತರಿಸುತ್ತಿದ್ದಾರೆ. ಇಂದು ಒಂದು ಮಾಧ್ಯಮದಲ್ಲಿ ಜನರನ್ನು ಬೆಂಗಳೂರಿನಿಂದ ಹೊರಗಡೆ ಹೋಗಲು ಸರ್ಕಾರ ಪ್ರೇರೇಪಿಸುತ್ತಿದೆ ಎಂದು ಪ್ರಸಾರವಾಯಿತು. ಸತ್ಯವೆಂದರೆ ರಾಜ್ಯದಲ್ಲಿ ಜನಜೀವನ ನಿಯಂತ್ರಿಸುವುದರೊಂದಿಗೆ ಬೇರೆ ಜಿಲ್ಲೆಗಳಿಂದ ಬಂದ ಕೆಲವು ಜನರು ತಮ್ಮ ವಾಹನಗಳಲ್ಲಿ ವಾಪಸ್​​​ ಹೋಗಲು ತಯಾರಾಗಿ ತಮ್ಮ ಊರಿನ ದಾರಿಯನ್ನು ಹಿಡಿದರು. ಕೆಲವು ಕಡೆ ಸಂಚಾರ ದಟ್ಟಣೆ ಉಂಟಾದಾಗ, ಪೊಲೀಸರಿಗೆ ಜನರು ತಮ್ಮ ವಾಹನಗಳಲ್ಲಿ ಊರಿಗೆ ವಾಪಸ್​​ ಹೋಗಲು ಬಿಡಿ ಎಂದು ಆದೇಶಿಸಲಾಯಿತು. ಯುಗಾದಿ ಹಬ್ಬಕ್ಕೆ ತಮ್ಮ ಊರಿಗೆ ಹೋಗಲು ಅನುವು ಮಾಡಿಕೊಡಲಾಯಿತು. ಇದನ್ನು ತಪ್ಪಾಗಿ ಗ್ರಹಿಸಿ ಜನರನ್ನು ಬೇರೆ ಊರುಗಳಿಗೆ ಹೋಗಲು ಸರ್ಕಾರ ಪ್ರೇರೇಪಿಸುತ್ತಿದೆ ಎಂದು ಬಿತ್ತರಿಸಲಾಯಿತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಇನ್ನು ರಾಷ್ಟ್ರ ವಿಪತ್ತು ಎದರಿಸುತ್ತಿದ್ದು, ಜನರು ಹಾಗೂ ಮಾಧ್ಯಮಗಳು ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.