ETV Bharat / state

ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು ಪ್ರಕರಣ: ಮಾನವ ಹಕ್ಕು‌ ಆಯೋಗದ ಮೊರೆ ಹೋದ ಕುಟುಂಬಸ್ಥರು

ಪೊಲೀಸ್ ವಶದಲ್ಲಿರುವಾಗ ಆರೋಪಿ ಸಾವು ಪ್ರಕರಣ - ರಾಜ್ಯ ಮಾನವ ಹಕ್ಕು ಆಯೋಗದ ಮೊರೆ ಹೋದ ಕುಟುಂಬಸ್ಥರು - ಕುಟುಂಬಸ್ಥರ ಪರ ಸ್ಲಂ ಮಹಿಳಾ ಸಂಘಟನೆಯಿಂದ ಆಯೋಗಕ್ಕೆ ದೂರು ಸಲ್ಲಿಕೆ

author img

By

Published : Jan 6, 2023, 8:05 PM IST

complaint-to-human-rights-commission-in-accused-death-case
ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು ಪ್ರಕರಣ: ಮಾನವ ಹಕ್ಕು‌ ಆಯೋಗದ ಮೊರೆ ಹೋದ ಕುಟುಂಬಸ್ಥರು

ಬೆಂಗಳೂರು: ಪೊಲೀಸ್ ವಶದಲ್ಲಿರುವಾಗ ಆರೋಪಿ ಮೃತಪಟ್ಟಿರುವ ಪ್ರಕರಣ ಸಂಬಂಧ ಪೊಲೀಸರೇ ಹಲ್ಲೆ ಮಾಡಿ ಸಾಯಿಸಿದ್ದಾರೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ರಾಜ್ಯ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾರೆ. 23 ವರ್ಷದ ವಿನೋದ್​ನನ್ನು ಪೊಲೀಸರೇ ಹಲ್ಲೆ ಮಾಡಿ ಸಾಯಿಸಿರುವ ಅನುಮಾನವಿದೆ. ಮೃತನ ಸಾವಿಗೆ ಕಾರಣ ಕೋರಿ ಕುಟುಂಬಸ್ಥರ ಪರವಾಗಿ ಸ್ಲಂ ಮಹಿಳಾ ಸಂಘಟನೆಯಿಂದ ಆಯೋಗದ ಅಧ್ಯಕ್ಷರಿಗೆ ದೂರು ನೀಡಲಾಗಿದೆ.

ದೂರಿನಲ್ಲಿ ಏನಿದೆ?: ಕೆ.ಆರ್.ಮಾರ್ಕೆಟ್ ವಾರ್ಡಿನ ಜಾಲಿಮೊಹಲ್ಲ ಎಂಬಲ್ಲಿ ವಾಸವಾಗಿದ್ದ ವಿನೋದ್ ಕೂಲಿ ಕೆಲಸ ಮಾಡುತ್ತಿದ್ದ. ಜನವರಿ 4ರಂದು ಕಾಟನ್‌ಪೇಟೆ ಪೊಲೀಸ್​ ಠಾಣೆಯ ಮೂವರು ಸಿಬ್ಬಂದಿ ಮಧ್ಯಾಹ್ನ ಸುಮಾರು 12.30ಕ್ಕೆ ಬಂದು ವಿನೋದ್​ನನ್ನು ವಾರೆಂಟ್ ಕೇಸ್​​ ಇದೆ, ನೀನು ಬರಬೇಕು ಎಂದು ಕರೆದುಕೊಂಡಿದ್ದಾರೆ. ಹೀಗೆ ಪೊಲೀಸರು ಕರೆದುಕೊಂಡು ಹೋಗುತ್ತಿರುವ ಬಗ್ಗೆ ಜಾಲಿಮೊಹಲ್ಲ ಏರಿಯಾದ ಜನರು ನೋಡಿದ್ದಾರೆ‌ ಎಂದು ತಿಳಿಸಲಾಗಿದೆ.

complaint to Human Rights Commission
ಮಾನವ ಹಕ್ಕು‌ ಆಯೋಗಕ್ಕೆ ದೂರು

ಅಲ್ಲದೇ, ಜನವರಿ 5ರಂದು ಬೆಳಗ್ಗೆ 5 ಗಂಟೆಗೆ ಮತ್ತೆ ಮೂವರು ಪೊಲೀಸರು ಏರಿಯಾಕ್ಕೆ ಬಂದು ವಿನೋದ್‌ ಅವರ ತಾಯಿ ಎಲ್ಲಿದ್ದಾರೆ ಎಂದು ವಿಚಾರಿಸಿದ್ದರು. ಆಗ ಪೊಲೀಸರು ನಿಮ್ಮ ಮಗನಿಗೆ ಪೊಲೀಸ್ ಠಾಣೆಯಲ್ಲಿ ಆರೋಗ್ಯ ಹದಗೆಟ್ಟಿದೆ, ಬಂದು ನೋಡಿ ಎಂದು ತಾಯಿಯನ್ನು ಕರೆದುಕೊಂಡು ಹೋಗಿದ್ದರು. ಆದಾದ ಮೇಲೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬರು ಜಾಲಿಮೊಹಲ್ಲ ಏರಿಯಾಗೆ ಬಂದು, ಕಲಾ ಎಂಬುವರ ಮಗ ಸತ್ತಿದ್ದಾನೆ. ಅವನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇದೆ. ಅವನ ತಲೆಯಲ್ಲಿ ರಕ್ತ ಬರುತ್ತಿದೆ ಎಂದು ಹೇಳಿ ಹೋಗಿದ್ದರು ಎಂದು ಆಯೋಗಕ್ಕೆ ನೀಡಿದ ದೂರಿನಲ್ಲಿ ಹೇಳಲಾಗಿದೆ.

ಬಳಿಕ ವಿನೋದ್ ಅವರ ಅಣ್ಣ ಸುಬ್ರಮಣಿ ಆಸ್ಪತ್ರೆಗೆ ವಿಚಾರಿಸಲು ಹೋದಾಗ ಅಲ್ಲಿ ಅವರನ್ನು ಯಾರೂ ಬಿಡಲಿಲ್ಲ. ತಾಯಿಯು ಪೊಲೀಸ್ ಠಾಣೆ ಹತ್ತಿರ ಇದ್ದಾರಾ, ಇಲ್ಲವಾ ಎಂಬುದು ಗೊತ್ತಿಲ್ಲ. ಅವರ ಬಳಿ ಮಾತನಾಡಲು ಸಮುದಾಯದ ಜನರು ಕೇಳಿದರೆ ಪೊಲೀಸರು ಬಿಟ್ಟಿಲ್ಲ. ಹೀಗಾಗಿ ವಿನೋದ್ ಸಾವಿನ ಹಿಂದೆ ಹಲವು ಗುಮಾನಿಗಳಿದ್ದು, ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ.

ಮೃತನ ಹಿನ್ನೆಲೆ: ವಿನೋದ್ 17 ವರ್ಷದವನಾಗಿದ್ದಲೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ರೂಪಿಸಿದ ಆರೋಪ ಪ್ರಕರಣದಡಿ ನಾಲ್ಕನೇ ಆರೋಪಿಯಾಗಿದ್ದ. ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು‌. ಬಳಿಕ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದ. ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದರೂ ಹಾಜರಾಗದೇ ತಲೆಮರೆಸಿಕೊಂಡಿದ್ದ. ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದರೂ ವಿನೋದ್ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಬಂಧಿಸಬೇಕೆಂದು ಹೇಳಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು ಎಂದು ತಿಳಿದು ಬಂದಿದೆ.

ಕೋರ್ಟ್ ಆದೇಶದಂತೆ ಬುಧವಾರ ಪೊಲೀಸರು ವಿನೋದ್​​ನನ್ನು ವಶಕ್ಕೆ‌ ಪಡೆದುಕೊಂಡಿದ್ದರು. ಆದರೆ ಮಧ್ಯರಾತ್ರಿ 3.45ರ ವೇಳೆ‌ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿನೋದ್​ನನ್ನು ನೋಡಿದ ಠಾಣೆ ಸಿಬ್ಬಂದಿ ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ಕರೆದೊಯ್ದಿದ್ದರು. ಬಳಿಕ ತಪಾಸಣೆ ನಡೆಸಿದ ವೈದ್ಯರು ಆದಾಗಲೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದರು.

ಡಿಸಿಪಿ ಹೇಳಿಕೆ: ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, 'ಆರೋಪಿ ವಿರುದ್ಧ 2017ರಲ್ಲಿ ಕಾಟನ್ ಪೇಟೆ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿದೆ. ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್​​ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದರು. ರಾತ್ರಿ ಠಾಣೆಯಲ್ಲಿ ಮಲಗಿದ್ದ ಆತನನ್ನು ನಸುಕಿನ ಜಾವ ನಮ್ಮ ಸಿಬ್ಬಂದಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಎಚ್ಚರಗೊಳ್ಳಲಿಲ್ಲ. ಹೀಗಾಗಿ ಕೂಡಲೇ ಆತನನ್ನು ಆಸ್ಪತ್ರೆಗೆ‌ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಮಾರ್ಗ‌ಮಧ್ಯದಲ್ಲೇ ವಿನೋದ್​ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ CRPC 176 (ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ' ಎಂದು‌ ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸ್ ವಶದಲ್ಲಿರುವಾಗಲೇ ಠಾಣೆಯಲ್ಲಿ ಆರೋಪಿ ಸಾವು: ಮೃತನ ಕುಟುಂಬಸ್ಥರ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.