ETV Bharat / state

ಹೋಟೆಲ್​ ಬಿಲ್​ ಕಟ್ಟದ ಆರೋಪ: ಪೂಜಾಗಾಂಧಿ ವಿರುದ್ಧ ದೂರು - ಪೂಜಾಗಾಂಧಿ

ಹೋಟೆಲ್ ಬಿಲ್ ಕಟ್ಟದ ಆರೋಪದ ಮೇಲೆ ನಟಿ ಪೂಜಾಗಾಂಧಿ ಅವರ ಮೇಲೆ ಕೇಸ್ ದಾಖಲಾಗಿದೆ. ಮೂರು ದಿನಗಳಿಂದ ಪೂಜಾಗಾಂಧಿ ಅಶೋಕ ಹೋಟೆಲ್​​​ನಲ್ಲಿ ಉಳಿದಿದ್ದು 4.5 ಲಕ್ಷ ರೂಪಾಯಿ ಬಿಲ್ ಪಾವತಿಸದೆ ಹೋಟೆಲ್ ರೂಮ್ ಖಾಲಿ ಮಾಡಿದ್ದರು ಎಂದು ಹೋಟೆಲ್​​​ನವರು ಆರೋಪಿಸಿದ್ದಾರೆ.

ಪೂಜಾಗಾಂಧಿ
author img

By

Published : Mar 19, 2019, 10:26 AM IST

ಇತ್ತೀಚೆಗೆ ಸ್ಯಾಂಡಲ್​​​​ವುಡ್​​ನಲ್ಲಿ ನಟ/ನಟಿಯರ ವಿವಿಧ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತಲೇ ಇವೆ. ವರದಕ್ಷಿಣೆ ಪ್ರಕರಣ, ಪ್ರೇಮ ಪ್ರಕರಣದಂತಹ ಘಟನೆಗಳು ನಡೆಯುತ್ತಲೇ ಇವೆ. ಇದೀಗ ನಟಿ ಪೂಜಾಗಾಂಧಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಾರ್ಚ್​ 11 ರಂದು ಪೂಜಾ ಅಶೋಕ ಹೋಟೆಲ್​​ನಲ್ಲಿ ರೂಮ್ ಪಡೆದಿದ್ದು, ಮೂರು ದಿನ ಅಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಮೂರು ದಿನಕ್ಕೆ 4.5 ಲಕ್ಷ ರೂಪಾಯಿ ಬಿಲ್ ಆಗಿದ್ದು, ಅದನ್ನು ಪಾವತಿಸದೆ ಪೂಜಾ ಗಾಂಧಿ ಎಸ್ಕೇಪ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಹೋಟೆಲ್​​ನವರು ಪೂಜಾರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ.

pooja 1
ಪೂಜಾಗಾಂಧಿ

ಈ ಹಿನ್ನೆಲೆ ಪೂಜಾ ವಿರುದ್ಧ ಹೋಟೆಲ್​​​ನವರು ಹೌಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪೂಜಾರನ್ನು ಸ್ಟೇಷನ್​​ಗೆ ಕರೆಸಿದ್ದಾರೆ. ಈ ವೇಳೆ ಪೊಲೀಸರ ಸಮ್ಮುಖದಲ್ಲೇ 2 ಲಕ್ಷ ರೂಪಾಯಿ ಕೊಟ್ಟು ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಸಿನಿಮಾ ನಟಿ ಬಳಿ ಹೋಟೆಲ್ ಬಿಲ್ ಕಟ್ಟಲೂ ಹಣವಿರಲಿಲ್ಲವೇ ಎಂದು ಸಾರ್ವಜನಿಕರಿಗೆ ಪ್ರಶ್ನೆ ಕಾಡುತ್ತಿದೆ.

Intro:Body:

Pooja gandhi

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.