ETV Bharat / state

ಕಬ್ಬು ಕಟಾವು, ಸಾಗಣೆ ವೆಚ್ಚ ಕಡಿತ ಕುರಿತು ಸಮಿತಿ ರಚನೆ: ಮುನೇನಕೊಪ್ಪ

ಕಬ್ಬು ಕಟಾವು, ಸಾಗಣೆ ವೆಚ್ಚ ಕಡಿತ ಕುರಿತು ಸಮಿತಿ ರಚನೆ ಮಾಡಲಾಗುವುದು ಎಂದು ಶಂಕರ್​ ಪಾಟೀಲ್ ಮುನೇನಕೊಪ್ಪ ಹೇಳಿದರು.

Textile and Sugar Minister Shankar Patil Munenakoppa
ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ್ ​ಪಾಟೀಲ್ ಮುನೇನಕಪ್ಪ
author img

By

Published : Dec 12, 2022, 4:01 PM IST

ಬೆಂಗಳೂರು: ಕಬ್ಬಿನ ಉಪ ಉತ್ಪನ್ನಗಳ ಲಾಭ ಕಬ್ಬು ಬೆಳೆಗಾರರಿಗೆ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ‌ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ್ ​ಪಾಟೀಲ್ ಮುನೇನಕೊಪ್ಪ ತಿಳಿಸಿದರು. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಮಾದರಿಯಲ್ಲಿ ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚ ಕಡಿತದ ಕುರಿತು ತಿಂಗಳಿನಲ್ಲೇ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

6.22 ಲಕ್ಷ ಮೆ.ಟ್ರನ್ ಕಬ್ಬನ್ನು ಕಳೆದ ಬಾರಿ ಅರೆದಿದ್ದೆವು. ಈ ಬಾರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಅರೆದರೆ ರೈತರಿಗೆ ನೀಡುವ ಲಾಭವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಉಪ ಉತ್ಪನ್ನದ ಲಾಭ 75 ರೂ ನೀಡುವಂತೆ ರೈತರು ಕೇಳಿದ್ದಾರೆ. ಆದರೆ, ನಾವು ಈಗ 50 ರೂ. ಮೊದಲ ಹಂತದಲ್ಲಿ ನೀಡುತ್ತಿದ್ದೇವೆ. ಕಬ್ಬು ಅರೆಯುವ ಕೆಲಸ ಮುಗಿದ ನಂತರ ಇನ್ನು 25 ರೂ.ಗೂ ಹೆಚ್ಚಿನ ಹಣ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ತಲಾ 50 ರೂ. ಮೊದಲ ಕಂತಿನ ಹಣವನ್ನು ರೈತರಿಗೆ ನೀಡಲಿದ್ದು, ಒಟ್ಟು 202 ಕೋಟಿ ಹಣ ರೈತರ ಖಾತೆಗೆ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಈ ರೀತಿ ಲಾಭದ ಹಣ ರೈತರಿಗೆ ನೀಡುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರದ ನಂತರ ಮೂರನೇ ರಾಜ್ಯ ಕರ್ನಾಟಕವಾಗಿದೆ‌ ಎಂದರು.
ಕಬ್ಬು ಬೆಳೆಗಾರರಿಗೆ ನೀಡಬೇಕಿದ್ದ 19,624 ಕೋಟಿ ಹಣವನ್ನು ಪಾವತಿ ಮಾಡಲಾಗಿದೆ. ಕಬ್ಬು ಬೆಳೆಗಾರರಿಗೆ ಯಾವುದೇ ಬಾಕಿ ಉಳಿಸಿಕೊಳ್ಳದ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.

ಮೈಶುಗರ್​ ಕಾರ್ಖಾನೆ ಪುನಶ್ಚೇತನ: ಮೈ ಶುಗರ್ ಸೇರಿದಂತೆ ಇತರ ಕಾರ್ಖಾನೆಗಳ ಪುನಶ್ಚೇತನ ಮಾಡಿದ್ದು, ಇಳುವರಿ, ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಾವು ಎಲ್ಲವನ್ನೂ ಪರಿಗಣಿಸಿ ಒಂದೊಂದಾಗಿ ಪರಿಹರಿಸಿ ಹೊಸ ಪದ್ದತಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.

ಅದಕ್ಕಾಗಿಯೇ ಎಥನಾಲ್​​ ಹೊಸ ನೀತಿ ಜಾರಿಗೆ ತಂದು, ದೊಡ್ಡ ಮಟ್ಟದಲ್ಲಿ ಉತ್ಪಾದನೆಗೆ ನಿರ್ಧರಿಸಲಾಗಿದೆ. ಈ ವರೆಗೆ 44 ಸಕ್ಕರೆ ಕಾರ್ಖಾನೆಗಳಿಂದ ಎಥನಾಲ್ ಉತ್ಪಾದನೆಗೆ ಅರ್ಜಿ ಬಂದಿವೆ ಎಂದು ಹೇಳಿದರು. ತೂಕ, ಇಳುವರಿ ವಿಚಾರದಲ್ಲಿ ಒಂದು ತಿಂಗಳಿನಲ್ಲಿ ಸಮಿತಿ ರಚಿಸಿ ನಂತರ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮುನೇನಕೊಪ್ಪ ಮಾಹಿತಿ ನೀಡಿದರು.

ಎಫ್ಆರ್​ಪಿ ಯನ್ನು 150 ರೂ. ಹೆಚ್ಚಿಸಲಾಗಿದ್ದು, ವೈಜ್ಞಾನಿಕವಾಗಿ ಎಫ್ಆರ್​ಪಿ 3050 ರೂ. ನಿಗದಿಪಡಿಸಲಾಗಿದೆ. ಸರ್ಕಾರ ನಿಮ್ಮ ಪರವಿದೆ, ನಿಮ್ಮ ಬೇಡಿಕೆ ಈಡೇರಿಸುವ ಹಂತದಲ್ಲಿ ನಾವಿದ್ದೇವೆ ಎಂದರು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇವೆ, ಇನ್ನೇನು ಬೇಕು ಎನ್ನುವ ಸಲಹೆ ಸರ್ಕಾರಕ್ಕೆ ನೀಡಿ ಅದನ್ನು ಪರಿಗಣಿಸಿ ಈಡೇರಿಸುವ ಕೆಲದ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಕಬ್ಬು ಬೆಳೆಗಾರರ ಹೋರಾಟ ತೀವ್ರ: ಎಫ್‌ಆರ್‌ಪಿಗಿಂತ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರೂ. ನೀಡಲು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.