ಬೆಂಗಳೂರು : ಕೊರೊನಾ ವೈರಸ್ ಹೆಚ್ಚಳಗೊಂಡ ಪರಿಣಾಮ 15 ದಿನಗಳ ಕಾಲ ಡಿಗ್ರಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುತ್ತೋಲೆ ಹರಿಬಿಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿ: 48 ಮಂದಿಯ ಅವಿಭಕ್ತ ಕುಟುಂಬದಲ್ಲಿ 19 ಮಂದಿಗೆ ಕೊರೊನಾ ಸೋಂಕು
ಶಿಕ್ಷಣ ಇಲಾಖೆಯಿಂದ ರಜೆ ನೀಡುವ ಕುರಿತು ಯಾವುದೇ ಆದೇಶ ಪ್ರಕಟಿಸಿಲ್ಲ. ಇದು ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟವರ ಮೇಲೆ ಕ್ರಮಕ್ಕೆ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಸೈಬರ್ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.