ETV Bharat / state

ಮೈತ್ರಿ ನಾಯಕರಿಗೆ ಕೈ ಕೊಟ್ಟ 'ಟಾರ್ಗೆಟ್ 9'... ಕೈಗೂಡಲಿಲ್ಲ ಅಂತಿಮ ಕಸರತ್ತು!?

ಸರ್ಕಾರವನ್ನು ಬಚಾವ್​ ಮಾಡಲು 'ಟಾರ್ಗೆಟ್ 9' ಸೂತ್ರ ಹೆಣೆದಿದ್ದ ಕೈ-ತೆನೆ ನಾಯಕರಿಗೆ ನಗರದಲ್ಲಿ ಇರುವ ಅತೃಪ್ತ ಶಾಸಕರಿಂದಲೇ ಬೆಂಬಲ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರಿಂದ ಹೊಸ ಗೇಮ್ ಪ್ಲಾನ್​ಗೆ ಸರಿಯಾದ ಸಹಕಾರ ಸಿಕ್ಕಿಲ್ಲ. ಕಡೆಯದಾಗಿ ಸರ್ಕಾರ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಮೈತ್ರಿ ನಾಯಕರು
author img

By

Published : Jul 15, 2019, 5:39 PM IST

ಬೆಂಗಳೂರು: ರಾಜ್ಯದಲ್ಲಿ ಶಾಸಕರ ರಾಜೀನಾಮೆಯಿಂದ ಅಲ್ಪ ಮತಕ್ಕೆ ಕುಸಿದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ನಿಧಾನವಾಗಿ ಎಚ್ಚೆತ್ತುಕೊಂಡು ನಡೆಸಿದ 9ರ ಆಟ ಕೊನೆಗೂ ಕೈಗೂಡಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಸರ್ಕಾರವನ್ನು ಬಚಾವ್​ ಮಾಡಲು 'ಟಾರ್ಗೆಟ್ 9' ಸೂತ್ರ ಹೆಣೆದಿದ್ದ ಕೈ-ತೆನೆ ನಾಯಕರಿಗೆ ನಗರದಲ್ಲಿ ಇರುವ ಅತೃಪ್ತ ಶಾಸಕರಿಂದಲೇ ಬೆಂಬಲ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರಿಂದ ಹೊಸ ಗೇಮ್ ಪ್ಲಾನ್​ಗೆ ಸರಿಯಾದ ಸಹಕಾರ ಸಿಕ್ಕಿಲ್ಲ. ಕಡೆಯದಾಗಿ ಸರ್ಕಾರ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಎಂಟಿಬಿಗೆ ಗಾಳ:

ಕಳೆದ ಶನಿವಾರ ಬೆಳಗಿನ ಜಾವ 4 ಗಂಟೆಗೆ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮನೆಗೆ ತೆರಳಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಧ್ಯಾಹ್ನ 11 ಗಂಟೆಯವರೆಗೆ ಮಾತುಕತೆ ನಡೆಸಿ, ಮನವೊಲಿಸಿ ಮಾಜಿ ಸಿಎಂ ಸಿದ್ದರಾಮಯ್ಯರ ಮನೆಗೆ ಕರೆತರುವ ಯತ್ನ ಮಾಡಿದ್ದರು. ಇದಕ್ಕೆ ಡಿಸಿಎಂ ಡಾ. ಜಿ.ಪರಮೇಶ್ವರ್, ಸಚಿವ ಕೃಷ್ಣಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹಕಾರ ನೀಡಿದ್ದರು. ಸಿದ್ದರಾಮಯ್ಯ ನಿವಾಸದಲ್ಲಿ ಮತ್ತೆ 5-6 ಗಂಟೆ ಮನವೊಲಿಕೆ ಕಸರತ್ತು ನಡೆಯಿತು.

ಇದಾದ ಬಳಿಕ ಲೀಲಾ ಪ್ಯಾಲೇಸ್ ಹೋಟೆಲ್​​ನ​​ಲ್ಲಿ ಶಾಸಕ ಡಾ. ಕೆ.ಸುಧಾಕರ್ ಇದ್ದಾರೆ ಎಂಬ ಮಾಹಿತಿ ಪಡೆದು, ಅವರನ್ನು ಕರೆತರಲು ತೆರಳಿದ ನಾಯಕರಿಗೆ ನಿರಾಸೆಯಾಯಿತು. ಇವರು ಬರುವ ವಿಚಾರ ತಿಳಿದ ಸುಧಾಕರ್ ವಿಶೇಷ ವಿಮಾನ ಮೂಲಕ ದಿಲ್ಲಿಗೆ ತೆರಳಿದ್ದರು. ವಾಪಸ್ ಬಂದ ಎಂಟಿಬಿ ಮನವೊಲಿಕೆಗೆ ಖುದ್ದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದರು. ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಎಲ್ಲವೂ ಯಶಸ್ವಿಯಾಗಿ ರಾತ್ರಿ 10ಕ್ಕೆ ಸುದ್ದಿಗೋಷ್ಠಿ ನಡೆಸಿ ಎಂಟಿಬಿ ರಾಜೀನಾಮೆ ವಾಪಸ್ ಪಡೆಯುವ ಮಾತನ್ನಾಡಿದರು. ಅವರ ಮೇಲಿನ ನಂಬಿಕೆಗೆ ಅವರ ಜತೆಗೆ ಯಾರನ್ನೂ ಬಿಡದೇ ಕಳುಹಿಸಿಕೊಟ್ಟ ಕೈ-ತೆನೆ ನಾಯಕರು ನೆಮ್ಮದಿಯಾಗಿ ನಿದ್ರಿಸಿದರು. ಆದರೆ ಬೆಳಗ್ಗೆ ಆಘಾತ ಕಾದಿತ್ತು. ಎಂಟಿಬಿ ಮುಂಬೈಗೆ ಪೇರಿ ಕಿತ್ತಿದ್ದರು.

ಇದೊಂದು ದಯನೀಯ ವೈಫಲ್ಯದಿಂದ ಆಘಾತಕ್ಕೆ ಒಳಗಾದ ಮೈತ್ರಿ ನಾಯಕರು ಛಲ ಬಿಡದೇ ಕನಿಷ್ಠ ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಯತ್ನ ನಿನ್ನೆ ನಡೆಸಿದರು. ಮೊದಲು ತೆರಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಾಕಷ್ಟು ಪ್ರಯತ್ನ ಮಾಡಿ, ವಾಪಸ್ ಬಂದು ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದರು. ಆದರೆ ಸಂಜೆ ಹೊತ್ತಿಗೆ ಸಚಿವ ಕೆ.ಜೆ.ಜಾರ್ಜ್ ಮತ್ತೊಮ್ಮೆ ಪ್ರಯತ್ನ ಆರಂಭಿಸಿದರು. ಅದನ್ನು ತಿಳಿದು ಆನೇಕಲ್ ಬಳಿ ಇರುವ ರಾಮಲಿಂಗಾರೆಡ್ಡಿಯವರ ಫಾರಂ ಹೌಸ್​ನತ್ತ ಮತ್ತೆ ಸಿಎಂ ಹಾಗೂ ರಾಜ್ಯ, ರಾಷ್ಟ್ರೀಯ ಕಾಂಗ್ರೆಸ್ ನಾಯಕರೆಲ್ಲಾ ತೆರಳಿದರು. ಆದರೆ ಅಲ್ಲಿಯೂ ರಾತ್ರಿ 10ರವರೆಗೆ ನಡೆಸಿದ ಮನವೊಲಿಕೆ ಯತ್ನ ಫಲ ಕೊಟ್ಟಿಲ್ಲ.

ಹೇಗಾದರೂ ಒಬ್ಬ ಶಾಸಕನನ್ನು ಸೆಳೆದರೆ, ನಿಧಾನವಾಗಿ ಉಳಿದವರನ್ನೂ ಸೆಳೆದುಕೊಳ್ಳಬಹುದು ಎಂಬ ಕಾಂಗ್ರೆಸ್-ಜೆಡಿಎಸ್ ನಾಯಕರ ಯತ್ನಕ್ಕೆ ದೊಡ್ಡ ಏಟು ಬಿದ್ದಿದೆ. ಮುಂಬೈನಲ್ಲಿರುವವರಿಗೆ ಮನವರಿಕೆ ಮಾಡಿಸಲು, ಇಲ್ಲಿನ ನಾಯಕರನ್ನು ವಾಪಸ್ ಕರೆಸುವ ಯತ್ನ ಕೈ ಕೊಟ್ಟಿದೆ. ಈ ಮೂಲಕ ಟಾರ್ಗೆಟ್ 9 ವಿಫಲವಾಗಿದೆ ಎನ್ನಲಾಗುತ್ತಿದೆ.

ಹೇಗೆ ಟಾರ್ಗೆಟ್ 9:

ಜೆಡಿಎಸ್, ಕಾಂಗ್ರೆಸ್ ಸೇರಿ ಒಟ್ಟು16 ಶಾಸಕರ ರಾಜೀನಾಮೆ, ಇವರಿಗೆ ಪಕ್ಷೇತರರಿಬ್ಬರ ಬೆಂಬಲ. 16 ಶಾಸಕರಲ್ಲಿ 13 ಶಾಸಕರು ಕಾಂಗ್ರೆಸ್​​ನವರು, ಉಳಿದ ಮೂರು ಜೆಡಿಎಸ್​​ನವರು. 13ರಲ್ಲಿ ಹೇಗಾದರೂ ಮಾಡಿ 9 ಜನರ ಮನವೊಲಿಸಿದರೆ ಸರಳ ಬಹುಮತ ಸಾಧಿಸಬಹುದು ಎನ್ನುವುದು ನಾಯಕರ ಲೆಕ್ಕಾಚಾರವಾಗಿತ್ತು.

ಹಾಗಾದರೆ ವಾಪಸ್ ಬರುವಂತಹ 9 ಶಾಸಕರು ಯಾರು ಎಂದು ಗಮನಿಸಿದಾಗ ಅವರ ಹೆಸರನ್ನು ಎಂಟಿಬಿ ನಾಗರಾಜ್, ಡಾ. ಸುಧಾಕರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ರಾಮಲಿಂಗಾರೆಡ್ಡಿ, ಮುನಿರತ್ನ, ರೋಷನ್ ಬೇಗ್, ಆನಂದ್ ಸಿಂಗ್, ಪಕ್ಷೇತರ ಶಾಸಕ ನಾಗೇಶ್ ಎಂದು ಪಟ್ಟಿ ಮಾಡಿಕೊಳ್ಳಲಾಗಿತ್ತು.

ಈ 9 ಶಾಸಕರಿಗಷ್ಟೇ ಕಾಂಗ್ರೆಸ್​​ನಿಂದ ಮನವೊಲಿಕೆ ಯತ್ನ ನಡೆದಿತ್ತು. ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ದಿನವೇ ಮುನಿರತ್ನ ಮನವೊಲಿಸುವ ಯತ್ನವನ್ನು ಡಿಕೆಶಿ ಮಾಡಿದ್ದರು. ಆದರೆ ಫಲ ಸಿಕ್ಕಿರಲಿಲ್ಲ. ಇದರಿಂದ ಉಳಿದ ನಾಯಕರ ಮನವೊಲಿಕೆಗೆ ಮುಂಬೈಗೆ ತೆರಳಿ ಪ್ರಯತ್ನಿಸಿದ್ದರು. ಅದೂ ಕೈಗೂಡಿರಲಿಲ್ಲ. ಇದಾದ ಬಳಿಕವೇ ಎಂಟಿಬಿ ನಾಗರಾಜ್, ರಾಮಲಿಂಗಾರೆಡ್ಡಿ ಮನವೊಲಿಸುವ ಯತ್ನ ನಡೆಯಿತು. ಅದೂ ಫಲ ಕೊಟ್ಟಿಲ್ಲ. ಎಲ್ಲಾ ಕೈಗೂಡುವ ಲಕ್ಷಣ ಕಂಡರೆ ರಿವರ್ಸ್ ಆಪರೇಷನ್ ಮಾಡಿ ಐವರು ಬಿಜೆಪಿ ಶಾಸಕರನ್ನೂ ಸೆಳೆಯುವ ಆಸೆಯನ್ನು ಮೈತ್ರಿ ನಾಯಕರು ಹೊಂದಿದ್ದರು. ಆದರೆ ಆಸೆ ಕೈಗೂಡದೇ ಟಾರ್ಗೆಟ್ 9 ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.