ETV Bharat / state

"ಗಾಂಧಿ ಆತ್ಮಕಥೆ" ಜತೆ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿರುವ ಸಿಎಂ ಬಿಎಸ್​ವೈ - CM Yeddyurappa taking treatment for corona in Manipal hospital

ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಬಹುತೇಕ ಸಮಯವನ್ನು ಪುಸ್ತಕ ಓದುವುದರಲ್ಲೇ ಕಳೆಯುತ್ತಿದ್ದಾರೆ.

CM Yeddyurappa reading books in Hospital
ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿರುವ ಸಿಎಂ ಬಿಎಸ್​ವೈ
author img

By

Published : Apr 18, 2021, 11:04 AM IST

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ಸಾಹದಿಂದಲೇ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ದಿನ ಪತ್ರಿಕೆಗಳು ಹಾುಗೂ ಪುಸ್ತಕ ಓದುವ ಜೊತೆಗೆ ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.

CM Yeddyurappa reading books in Hospital
ಆಸ್ಪತ್ರೆಯಲ್ಲಿ ಪುಸ್ತಕ ಓದುತ್ತಿರುವ ಸಿಎಂ

ಇಂದು ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಗಿದ ನಂತರ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ನಂತರ ತಮ್ಮೊಂದಿಗೆ ಆಸ್ಪತ್ರೆಗೆ ಕೊಂಡೊಯ್ದಿರುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಬರೆದಿರುವ "ಗಾಂಧಿ ಆತ್ಮಕಥೆ" ಮತ್ತು "ನನ್ನ ಸತ್ಯ ಶೋಧನೆಯ ಕಥೆ" ಪುಸ್ತಕವನ್ನು ಓದುತ್ತಿದ್ದಾರೆ. ಅದರ ಜೊತೆಗೆ ರವಿ ಬೆಳಗೆರೆ ಬರೆದಿರುವ "ಹಿಮಾಲಯನ್ ಬ್ಲಂಡರ್​​" ಹಾಗೂ "ಶ್ರೀಕೃಷ್ಣ ಕಥಾಮಂಜರಿ" ಪುಸ್ತಕಗಳಲ್ಲಿ "ಗಾಂಧಿ ಆತ್ಮಕಥೆ" ಕೈಗೆತ್ತಿಕೊಂಡಿದ್ದಾರೆ. ಬಹುತೇಕ ಸಮಯವನ್ನು ಅವರು ಪುಸ್ತಕ ಓದುವುದರಲ್ಲೇ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 6 ಮಂದಿ ರೋಗಿಗಳು ಸಾವು

ಆಸ್ಪತ್ರೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ. ನಾಳೆ ಬೆಂಗಳೂರು ಶಾಸಕರು, ಸಂಸದರ ಸಭೆ ನಡೆಸುವಂತೆ ಕಂದಾಯ ಸಚಿವ ಅಶೋಕ್​ಗೆ ಸೂಚನೆ ನೀಡಿರುವ ಸಿಎಂ ಬಿಎಸ್​ವೈ, ಅಧಿಕಾರಿಗಳಿಂದ ಕಾಲ ಕಾಲಕ್ಕೆ ಕೊರೊನಾ ಪರಿಸ್ಥಿತಿ ಕುರಿತು ಮಾಹಿತಿ ಪಡೆದು, ಸಲಹೆ-ಸೂಚನೆ ನೀಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.