ETV Bharat / state

ಕೈಗಾರಿಕಾ - ಐಟಿ ಬಿಟಿ ವಲಯಕ್ಕೆ ₹ 52,529 ಕೋಟಿ ಅನುದಾನ; ಸರ್ಕಾರಿ - ಖಾಸಗಿ ಸಹಭಾಗಿತ್ವಕ್ಕೆ ಒತ್ತು - ಬಿಎಸ್ ಯಡಿಯೂರಪ್ಪ ಬಜೆಟ್

ಈ ಬಾರಿಯ ರಾಜ್ಯ ಬಜೆಟ್​ನಲ್ಲಿ ಕೈಗಾರಿಕಾ - ಐಟಿ ಬಿಟಿ ವಲಯಕ್ಕೆ ₹52,529 ಕೋಟಿ ಅನುದಾನ ನೀಡಲಾಗಿದೆ.

budget
ಕೈಗಾರಿಕಾ -ಐಟಿ ಬಿಟಿ ವಲಯಕ್ಕೆ ₹52,529 ಕೋಟಿ ಅನುದಾನ
author img

By

Published : Mar 8, 2021, 2:01 PM IST

Updated : Mar 8, 2021, 6:17 PM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿರುವ ಬಜೆಟ್ ನಲ್ಲಿ ಕೈಗಾರಿಕಾ - ಐಟಿ ಬಿಟಿ ವಲಯಕ್ಕೆ ₹52,529 ಕೋಟಿ ಅನುದಾನ ನೀಡಲಾಗಿದ್ದು, ಸರ್ಕಾರಿ-ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಜೊತೆಗೆ ವಿದ್ಯುತ್ ಚಾಲಿತ ವಾಹನ ನೀತಿ , ಖನಿಜ ನೀತಿ ಹಾಗೂ ಡೇಟಾ ನೀತಿ ಜಾರಿಗೆ ಸರ್ಕಾರ ನಿರ್ಧರಿಸಿದೆ.

ಕೈಗಾರಿಕಾ -ಐಟಿ ಬಿಟಿ ವಲಯಕ್ಕೆ ಆಯವ್ಯಯದಲ್ಲಿ ಘೋಷಣೆ:

1. ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ - ವಿಮಾನ ನಿಲ್ದಾಣ ಪ್ರಾಧಿಕಾರ ಮದ್ಯೆ ಜಾಯಿಂಟ್ ವೆಂಚರ್ ಸಂಸ್ಥೆ ಸ್ಥಾಪನೆಗೆ ಕ್ರಮ
2. ಪಿ ಪಿ ಪಿ ಮಾದರಿಯಲ್ಲಿ ಮಂಗಳೂರು - ಪಣಜಿ ಜಲ ಮಾರ್ಗ ಅಭಿವೃದ್ಧಿ
3. ಏರೋ ಸ್ಪೇಸ್ ಮತ್ತು ರಕ್ಷಣಾ ನೀತಿ ಜಾರಿಗೆ ನಿರ್ಧಾರ, ಆತ್ಮನಿರ್ಭರ ಭಾರತ ಯೋಜನೆ ಅಡಿ ಸ್ವದೇಶಿ ವೈಮಾನಿಕ ಉತ್ಪನ್ನಕ್ಕೆ ಉತ್ತೇಜನೆ
4. ಈ ವರ್ಷ ಇನ್ವೆಸ್ಟ್ ಕರ್ನಾಟಕ 2020 ಆಯೋಜನೆಗೆ ನಿರ್ಧಾರ.
5. ಯಾದಗಿರಿ ಜಿಲ್ಲೆಯ ಕಡೆಚುರು ಕೈಗಾರಿಕಾ ಪ್ರದೇಶದಲ್ಲಿ 1500 ಎಕೆರೆ ಭೂಮಿಯಲ್ಲಿ ಬಲ್ಕ್ ಡ್ರಗ್ ಪಾರ್ಕ್ ಅಭಿವೃದ್ಧಿಗೆ ₹1478 ಕೋಟಿ. (ಕೇಂದ್ರದ ನೆರವಿನೊಂದಿಗೆ)
6. ಕರ್ನಾಟಕ ವಿದ್ಯುತ್ ಚಾಲಿತ ವಾಹನ ನೀತಿ ಪರಿಷ್ಕೃತ ಜಾರಿಗೊಳಿಸಲು ನಿರ್ಧಾರ
7. ಮುಖ್ಯಮಂತ್ರಿ ಸಂಯೋಜಿತ ಕೈಗಾರಿಕಾ ಟೌನ್ ಶಿಪ್ ಸ್ಥಾಪನೆಗೆ ನಿರ್ಧಾರ. ಬೆಂಗಳೂರು - ಮುಂಬೈ, ಬೆಂಗಳೂರು-ಚೆನ್ನೈ ಕೈಗಾರಿಕಾ ವಲಯದಲ್ಲಿ ಟೌನ್ ಶಿಪ್ ಸ್ಥಾಪನೆಗೆ ನಿರ್ಧಾರ. ₹10,000 ಕೋಟಿ ಬಂಡವಾಳ ಆಕರ್ಷಣೆಗೆ ಗುರಿ ಹಾಗೂ 5,00,000 ಉದ್ಯೋಗಾವಕಾಶ
8. ₹100 ಕೋಟಿ ವೆಚ್ಚದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಟೌನ್ ಶಿಪ್ ನಿರ್ಮಾಣ
9. ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ದರ ನಿಗದಿಗೆ ನಿರ್ಧಾರ
10. ನೇಕಾರ ಸನ್ಮಾನ ಯೋಜನೆಯಡಿ ಈ ವರ್ಷವೂ ₹2000 ನೇರ ಸಹಾಯ ಧನ ವರ್ಗಾವಣೆ
11. ಬಾದಾಮಿ ಜಿಲ್ಲೆ ಗುಳೇಡಗುಡ್ಡದಲ್ಲಿ ಜವಳಿ ಪಾರ್ಕ್ ನಿರ್ಮಾಣ
12. ಉತ್ತರ ಕರ್ನಾಟಕದಲ್ಲಿ ಸ್ಮಾರ್ಟ್ ಕೈಮಗ್ಗ ವಿನ್ಯಾಸ ಸ್ಟುಡಿಯೋ ಸ್ಥಾಪನೆಗೆ ನಿರ್ಧಾರ
13. ರಾಜ್ಯ ಖನಿಜ ನೀತಿ 2021-26 ರೂಪಿಸಲು ನಿರ್ಧಾರ
14. ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಮೈನಿಂಗ್ ಅದಾಲತ್ ಸ್ಥಾಪನೆ
15. ಕಲಬುರ್ಗಿ ಫಿರೋಜಾಬಾದ್ 1551 ಎಕರೆ ಜಮೀನಿನಲ್ಲಿ 500 ಮೆ.ವ್ಯಾ ಸೋಲಾರ್ ಪಾರ್ಕ್
16. 1000 ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ
17. ಸ್ವಚ್ಛ ವಿದ್ಯುತ್ ಶಕ್ತಿ ಸರಬರಾಜಿಗೆ 1000 ಮೆ.ವ್ಯಾ ಯೋಜನೆಯ ಪಂಪ್ಡ್​ ಹೈಡ್ರೋ ಸ್ಟೋರೆಜ್​ ಪ್ಲಾಂಟ್​ಗೆ ₹ 4000 ಕೋಟಿ ಖಾಸಗಿ ಹೂಡಿಕೆ
18. ಸ್ಟಾರ್ಟ್ ಅಪ್ ನೀತಿ
19. ಆಕ್ವಾ ಮರಿನಾಗಾಗಿ ಸುಧಾರಿತ ಬಯೋಟೆಕ್ ಇನೋವೇಷನ್ ಕೇಂದ್ರಕ್ಕೆ ₹6 ಕೋಟಿ ಮೀಸಲು
20. ಡೇಟಾ ಸೆಂಟರ್ ನೀತಿ ಜಾರಿಗೆ ನಿರ್ಧಾರ
ಒಟ್ಟು ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ₹52,529 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ನೀಡಲಾಗಿದೆ .

Last Updated : Mar 8, 2021, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.