ETV Bharat / state

ವಿಪಕ್ಷಗಳ ದಾಳಿಗೆ ಗುರಾಣಿ ಹಿಡಿಯಲು ತಾಲೀಮು ನಾಳಿನ ಸಚಿವ ಸಂಪುಟ ಸಭೆ!!

author img

By

Published : Sep 14, 2020, 9:27 PM IST

ಡ್ರಗ್ಸ್ ದಂಧೆ, ಕೊರೊನಾ, ಎಪಿಎಂಸಿ, ಭೂ ಸುಧಾರಣೆ ಹಾಗೂ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ವಿರೋಧವೂ ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ..

Vidhanasowdha
Vidhanasowdha

ಬೆಂಗಳೂರು : ಸೆ.21ರಿಂದ ಆರಂಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದ ಹಿನ್ನೆಲೆ ನಾಳೆ ಬೆಳಗ್ಗೆ ಕರೆದಿರುವ ಸಚಿವ ಸಂಪುಟ ಸಭೆ ತುಂಬಾ ಮಹತ್ವ ಪಡೆದಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆ.

ಸಾಮಾನ್ಯವಾಗಿ ವಾರಕ್ಕೊಮ್ಮೆ ಸಚಿವ ಸಂಪುಟ ಸಭೆ ನಡೆಯುವುದು ರೂಢಿ. ಆದರೂ ಕಳೆದ ವಾರ ಸಂಪುಟ ಸಭೆ ನಡೆಯಲಿಲ್ಲ. ಈ ವಾರ ಸೆ.17ರಂದು ಮಹಾಲಯ ಅಮವಾಸ್ಯೆಯ ಸರ್ಕಾರಿ ರಜೆ ಇರುವುದರಿಂದ ಗುರುವಾರದ ಬದಲಾಗಿ ನಾಳೆ ಸಂಪುಟ ಸಭೆ ನಡೆಸಲಾಗುತ್ತಿದೆ.

ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದರ ಜೊತೆಗೆ ಪ್ರಮುಖ ಚರ್ಚೆಯಾಗುತ್ತಿರುವ ಡ್ರಗ್ಸ್ ದಂಧೆ, ಕೊರೊನಾ, ಎಪಿಎಂಸಿ, ಭೂ ಸುಧಾರಣೆ ಹಾಗೂ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ವಿರೋಧಿಸುತ್ತಿರುವುದು ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.