ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೆಂಪಲ್ ರನ್ ಮುಂದುವರೆಸಿದ್ದು ಅಮವಾಸ್ಯೆ ಪ್ರಯುಕ್ತ ತಿಮ್ಮಪ್ಪನ ದರ್ಶನಕ್ಕಾಗಿ ಇಂದು ತಿರುಪತಿಗೆ ತೆರಳಿದ್ದಾರೆ.
ಇಡೀ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಸರಣಿ ಸಭೆ ನಡೆಸಿದ ಸಿಎಂ ಸಂಜೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ತಿರುಪತಿಗೆ ತೆರಳಿದರು. ಇಂದು ರಾತ್ರಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಿರುವ ಸಿಎಂ, ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ತೆಲಂಗಾಣಕ್ಕೆ ತೆರಳಿ ಚಿನ್ನ ಜೀಯರ್ ಸ್ವಾಮಿ ದರ್ಶನ ಮಾಡಿ ಬಂದಿದ್ದ ಸಿಎಂ, ನಂತರ ರಾಜ್ಯದಲ್ಲಿ ಸಾಲು ಸಾಲು ದೇಗುಲ ದರ್ಶನ ಮಾಡಿದ್ದರು, ಇದೀಗ ತಿರುಪತಿಗೆ ತೆರಳಿದ್ದಾರೆ.