ETV Bharat / state

ಇಂದು ಮಧ್ಯಾಹ್ನ 12ಕ್ಕೆ ಸಿದ್ದರಾಮಯ್ಯ ಬಜೆಟ್‌: ದಾಖಲೆಯ 14ನೇ ಬಾರಿಗೆ ಮಂಡನೆ; ನಿರೀಕ್ಷೆಗಳೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚ ಗ್ಯಾರಂಟಿ ಕೇಂದ್ರೀಕೃತ ಬಹುನಿರೀಕ್ಷೆಯ ತಮ್ಮ 14ನೇ ಬಜೆಟ್ ಅನ್ನು ಇಂದು ಮಂಡನೆ ಮಾಡಲಿದ್ದಾರೆ.

Karnataka Budget
Karnataka Budget
author img

By

Published : Jul 6, 2023, 11:08 PM IST

Updated : Jul 7, 2023, 8:21 AM IST

ಬೆಂಗಳೂರು: ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಹೊಣೆಗಾರಿಕೆಯೊಂದಿಗೆ ಸಿಎಂ ಸಿದ್ದರಾಮಯ್ಯ ಇಂದು ಮಧ್ಯಾಹ್ನ 12 ಗಂಟೆಗೆ ತಮ್ಮ ದಾಖಲೆಯ 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಸುಮಾರು 3.30 ಲಕ್ಷ ಕೋಟಿ ಆಸುಪಾಸಿನ ಬಜೆಟ್ ಮಂಡನೆ ಮಾಡಲಿದ್ದು, ಬಹುತೇಕ ಗ್ಯಾರಂಟಿ ಕೇಂದ್ರೀಕೃತ ಬಜೆಟ್ ಆಗಿರಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಾಂಗ್ರೆಸ್ ಸರ್ಕಾರದ 2023-24ರ ಸಾಲಿನ ನೂತನ ಬಜೆಟ್ ಮಂಡನೆ ಮಾಡಲಿದ್ದಾರೆ. 9 ತಿಂಗಳ ಬಜೆಟ್ ಮಂಡನೆ ಮಾಡುವ ಮೂಲಕ ತಮ್ಮ 14ನೇ ಆಯವ್ಯಯ ಮಂಡಿಸಲಿದ್ದಾರೆ. ಸುಮಾರು 3.30 ಲಕ್ಷ ಕೋಟಿ ರೂ ಆಸುಪಾಸಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಕಳೆದ 25 ದಿ‌‌ನಗಳಿಂದ ಸಿದ್ದರಾಮಯ್ಯ ಇಲಾಖಾವಾರು ಬಜೆಟ್ ಪೂರ್ವಭಾವಿ ಸರಣಿ ಸಭೆಗಳನ್ನು ನಡೆಸಿದ್ದಾರೆ.

ಸಿದ್ದರಾಮಯ್ಯರ ಬಜೆಟ್ ಹೆಚ್ಚಿನ ತೆರಿಗೆ ಹೊರೆ ಇಲ್ಲದೆ, ಬೊಮ್ಮಾಯಿ ಸರ್ಕಾರ ಮಂಡಿಸಿದ ಬಜೆಟ್​ನ ಮರು ಹಂಚಿಕೆಗೆ ಬಹುತೇಕ ಸೀಮಿತವಾಗಿರಲಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸುವ ಹೊಣೆಗಾರಿಕೆಯೊಂದಿಗೆ ಸಿಎಂ ಬಜೆಟ್ ಮಂಡನೆ ಮಾಡಲಿದ್ದಾರೆ. ಆಯವ್ಯಯದ ಲೆಕ್ಕ ಹೇಗಿರಲಿದೆ ಎಂಬ ವರದಿ ಇಲ್ಲಿದೆ.

'ಗ್ಯಾರಂಟಿ' ಬಜೆಟ್: ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಗ್ಯಾರಂಟಿ ಬಜೆಟ್ ಆಗಿರಲಿದೆ. ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಹೊಣೆಗಾರಿಕೆ, ಅನಿವಾರ್ಯತೆಯಲ್ಲಿ ಆಯವ್ಯಯ ಮಂಡಿಸಲಿದ್ದಾರೆ.‌ ಪಂಚ ಗ್ಯಾರಂಟಿಗಳಿಗೆ ಎಲ್ಲಿಂದ ಹಣ ಹೊಂದಿಸಲಾಗುತ್ತೆ ಎಂಬ ಕುತೂಹಲ, ಹತ್ತು ಹಲವು ಪ್ರಶ್ನೆಗಳಿಗೆ ಬಜೆಟ್‌ನಲ್ಲಿ ಉತ್ತರ ಸಿಗಲಿದೆ.

2023-24ನೇ ಸಾಲಿನ 9 ತಿಂಗಳಿಗೆ ಬಜೆಟ್ ಮಂಡನೆಯಾಗಲಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 60,000 ಕೋಟಿ ರೂ‌. ಹಣದ ಅವಶ್ಯಕತೆ ಇದೆ. ಆದರೆ, ಈ ಆರ್ಥಿಕ ವರ್ಷದಲ್ಲಿ ಪಂಚ ಗ್ಯಾರಂಟಿಗಳಿಗೆ ಅಂದಾಜು 30,000 ಕೋಟಿ ರೂ. ಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ಬಜೆಟ್​ನಲ್ಲಿ ಅನುದಾನ ಮೀಸಲಿಡಲಿದ್ದಾರೆ.

ಉಳಿತಾಯ ಬಜೆಟ್ ಮಂಡನೆ?: ಸಿದ್ದರಾಮಯ್ಯ ಉಳಿತಾಯದ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ನಿರ್ಗಮಿತ ಬಿಜೆಪಿ ಸರ್ಕಾರ ಫೆಬ್ರವರಿಯಲ್ಲಿ 3,09,182 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಆ ಮೂಲಕ 402 ಕೋಟಿ ರೂ. ಅಲ್ಪ ಉಳಿತಾಯದ ಬಜೆಟ್ ಮಂಡನೆ ಮಾಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ 3.30 ಲಕ್ಷ ಕೋಟಿ ಗಾತ್ರದ ಹೊಸ ಬಜೆಟ್ ಮಂಡಿಸುವ ಲೆಕ್ಕಾಚಾರ ಮಾಡಿದ್ದಾರೆ.

ಅಂದರೆ ಬೊಮ್ಮಾಯಿ ಮಂಡಿಸಿದ ಬಜೆಟ್​ಗಿಂತ ಅಂದಾಜು 25,000 ಕೋಟಿ ರೂ. ಹೆಚ್ಚುವರಿ ಗಾತ್ರದ ಬಜೆಟ್ ಮಂಡಿಸಲು ಲೆಕ್ಕಾಚಾರ ನಡೆಸುತ್ತಿದ್ದಾರೆ. ಈ ಬಾರಿ ಸಿಎಂ‌ ಸಿದ್ದರಾಮಯ್ಯ ಹೆಚ್ಚಿನ ಆದಾಯ ಸಂಗ್ರಹದ ಗುರಿ ನಿಗದಿ ಮಾಡಿದ್ದು, ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳಿಗೆ ಸುಮಾರು 15% ಅಧಿಕ ಸಂಗ್ರಹದ ಗುರಿ ನೀಡಿದ್ದಾರೆ. ವೆಚ್ಚ ಕಡಿತ, ಅನಗತ್ಯ ಸೋರಿಕೆ, ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಸುಮಾರು 50,000 ಕೋಟಿ ರೂ. ಆದಾಯ ಸಂಗ್ರಹ ಮಾಡುವ ನಿರೀಕ್ಷೆ ಇದೆ. ಆ ಮೂಲಕ ಈ ಬಾರಿ ಸಿಎಂ ಸಿದ್ದರಾಮಯ್ಯ ಉಳಿತಾಯದ ಬಜೆಟ್ ಮಂಡಿಸಲಿದ್ದಾರೆ.

ಹೆಚ್ಚಿನ ಸಾಲದ ಹೊರೆ ಅನುಮಾನ: ಸಿದ್ದರಾಮಯ್ಯ ತಮ್ಮ ಬಜೆಟ್​ನಲ್ಲಿ ಹೆಚ್ಚಿನ ಸಾಲದ ಮೊರೆ ಹೋಗುವುದು ಅನುಮಾನವಾಗಿದೆ. ಹಿಂದಿನ ಸರ್ಕಾರ ಮಂಡಿಸಿದ್ದ 2023-24ರ ಬಜೆಟ್​ನಲ್ಲಿ ಅಂದಾಜು 77,750 ಕೋಟಿ ಸಾಲ ಮಾಡುವುದಾಗಿ ತಿಳಿಸಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಪಂಚ ಗ್ಯಾರಂಟಿಯೇ ದೊಡ್ಡ ಹೊರೆಯಾಗಿದೆ. ಆದರೂ ಈ ಬಾರಿಯ ಬಜೆಟ್​ನಲ್ಲಿ ಸಿದ್ದರಾಮಯ್ಯ ಸರ್ಕಾರ ಬೊಮ್ಮಾಯಿ ಸರ್ಕಾರ ಅಂದಾಜಿಸಿದ ಸಾಲದ ಮಿತಿಯಲ್ಲೇ ಇರಲಿದ್ದಾರೆ ಎನ್ನಲಾಗಿದೆ.

ಆರ್ಥಿಕ ವರ್ಷದ 9 ತಿಂಗಳ ಹೊಸ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಸಾಲದ ಮೊರೆ ಹೋಗುವುದು ಅನುಮಾನ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.‌ ಸಾಲದ ಮೊರೆ ಹೋದರೆ ಪ್ರತಿಪಕ್ಷ ಹಾಗೂ ರಾಜ್ಯದ ಜನರ ಟೀಕೆಗೆ ಗುರಿಯಾಗುವ ಭೀತಿಯಿಂದ ಇನ್ನಷ್ಟು ಸಾಲ ಮಾಡುವುದು ಅನುಮಾನ. ಒಂದು ವೇಳೆ ಹೆಚ್ಚಿನ ಸಾಲ ಮೊರೆ ಹೋದರೂ ಅಂದಾಜು 80,000 ಕೋಟಿ ರೂ. ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸ ಯೋಜನೆಗಳು ಅನುಮಾನ: ಪಂಚ ಗ್ಯಾರಂಟಿಗಳೇ ಸಿಎಂ ಸಿದ್ದರಾಮಯ್ಯರ ಬಜೆಟ್ ಹೈಲೈಟ್ ಆಗಿರುವುದರಿಂದ ತಮ್ಮ ಬಜೆಟ್​ನಲ್ಲಿ ಹೊಸ ಯೋಜನೆಗಳ ಘೋಷಣೆ ಅನುಮಾನ ಎನ್ನಲಾಗಿದೆ.‌ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಅಗ್ರ ಆದ್ಯತೆಯಾಗಿರುವುದರಿಂದ ಈ ಬಜೆಟ್ ನಲ್ಲಿ ಹೊಸ ಯೋಜನೆಗಳ ಘೋಷಣೆ ಬಹುತೇಕ ಅನುಮಾನ ಎಂದು ಮೂಲಗಳು ತಿಳಿಸಿವೆ.‌

ಬಿಜೆಪಿ ಸರ್ಕಾರದ ಕೆಲ ಯೋಜನೆಗಳಿಗೆ ಕೊಕ್?: ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಕೆಲ ಯೋಜನೆಗಳಿಗೆ ಕತ್ತರಿ ಹಾಕುತ್ತಾ ಎಂಬ ಅನುಮಾನ ಮೂಡಿದೆ. ಬಿಜೆಪಿ ಸರ್ಕಾರದ ಕೆಲ ಯೋಜನೆಗಳಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರೈತ ಪರವಾದ ಯೋಜನೆಗಳು, ವಿದ್ಯಾನಿಧಿ ಯೋಜನೆಯನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಬಜೆಟ್ ನಿರೀಕ್ಷೆಗಳೇನು?:

  • ಸಮಾಜದ ಎಲ್ಲಾ ವರ್ಗಗಳನ್ನ ಗಮನದಲ್ಲಿಟ್ಟುಕೊಂಡು ಬಜೆಟ್​
  • ರೈತರು, ಕೂಲಿ ಕಾರ್ಮಿಕರು, ಕೈಗಾರಿಕೋದ್ಯಮಿಗಳು, ನೇಕಾರರು, ರೇಷ್ಮೆ ಬೆಳಗಾರರು ಸೇರಿದಂತೆ ಹಲ ವರ್ಗಗಳಿಗೆ ಅನುಕೂಲ
  • ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ವಯೋವೃದ್ಧರಿಗೆ ಯೋಜನೆಗಳು
  • ಇಂದಿರಾ ಕ್ಯಾಂಟೀನ್ ಗೆ ಅನುದಾನ
  • ಅಲ್ಪಸಂಖ್ಯಾತ ಇಲಾಖೆಗೆ ಹೆಚ್ಚಿನ ಅನುದಾನ
  • ಬರ ನಿರ್ವಹಣೆ, ಕುಡಿಯುವ ನೀರಿಗೆ ಹೆಚ್ಚಿನ ಅನುದಾನ
  • ಬೆಂಗಳೂರು ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ
  • ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ

ಇದನ್ನೂ ಓದಿ: ಗ್ಯಾರಂಟಿ ಜಾರಿ ನಡುವೆ ಸರ್ಕಾರಕ್ಕೆ ನೌಕರರ ಬೇಡಿಕೆಗಳ ಭಾರ..! 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಿಗುತ್ತಾ ಅನುದಾನ?

Last Updated : Jul 7, 2023, 8:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.