ಬೆಂಗಳೂರು: ರೇಣುಕಾಚಾರ್ಯ ಸಹೋದರನ ಪುತ್ರನ ಸಾವಿನ ಕುರಿತ ಪ್ರಕರಣವನ್ನು ಸಮಗ್ರವಾಗಿ ನೋಡುತ್ತಿದ್ದು, ಈ ಕುರಿತು ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಿ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಅಣ್ಣನ ಮಗನ ಸಾವಿನ ಪ್ರಕರಣ ಕುರಿತು ರೇಣುಕಾಚಾರ್ಯ ಜೊತೆಗೆ ಮಾತಾಡಿ ಮುಂದಿನ ನಿರ್ಧಾರ ಮಾಡುತ್ತೇವೆ. ಎಲ್ಲವನ್ನು ಸಮಗ್ರವಾಗಿಯೇ ನಾವು ನೋಡುತ್ತಿದ್ದೇವೆ. ಮೊದಲು ರೇಣುಕಾಚಾರ್ಯ ಜೊತೆಗೆ ಮಾತಾಡುತ್ತೇನೆ ಎಂದರು.
ನಂತರ ಮೃತ ಯುವಕನ ತಂದೆ ಜೊತೆಗೆ ಮಾತಾಡುತ್ತೇವೆ. ಅದರ ಹಿನ್ನೆಲೆ ಅವರ ಕುಟುಂಬಸ್ಥರಿಗೆ ಗೊತ್ತಿರುತ್ತದೆ. ಅವರ ತಂದೆ ಅನಿಸಿಕೆ ತಿಳಿದುಕೊಳ್ಳುತ್ತೇವೆ. ಅವರು ಏನು ಹೇಳುತ್ತಾರೋ ಅದರ ಪ್ರಕಾರ, ಅವರು ಏನು ದೂರು ಕೊಡುತ್ತಾರೋ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ತುಂಗಾ ಕಾಲುವೆಗೆ ಬಿದ್ದ ಕಾರಿನಲ್ಲಿ ಅಣ್ಣನ ಮಗನ ಶವ ಪತ್ತೆ.. ಮುಗಿಲು ಮುಟ್ಟಿದ ರೇಣುಕಾಚಾರ್ಯ ಆಕ್ರಂದನ