ETV Bharat / state

ಕಾವೇರಿ ನಿವಾಸದಲ್ಲಿ ಸಿಎಂ ಭೋಜನ‌ ಕೂಟ: ಕುತೂಹಲ ಕೆರಳಿಸಿದ ಸಚಿವರ ಜೊತೆಗಿನ ಲಂಚ್ ಮೀಟ್ - Bangalore latest update news

ಬಹಳ ದಿನಗಳ ಬಳಿಕ ಸಂಪುಟ ಸಚಿವರ ಜೊತೆ ಸಿಎಂ ಬಿಎಸ್​ವೈ ಲಂಚ್ ಮೀಟಿಂಗ್​​ಗೆ ಮುಂದಾಗಿದ್ದಾರೆ. ಆ ಮೂಲಕ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಯತ್ನಿಸಿದ್ದಾರೆ ಎನ್ನಲಾಗ್ತಿದೆ.

Bangalore
ಕಾವೇರಿ‌ ನಿವಾಸದಲ್ಲಿ ಸಚಿವರ ಜೊತೆ ಭೋಜನ‌ ಕೂಟ ಏರ್ಪಡಿಸಿದ ಸಿಎಂ
author img

By

Published : Dec 28, 2020, 4:56 PM IST

ಬೆಂಗಳೂರು: ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಕಾವೇರಿ‌ ನಿವಾಸದಲ್ಲಿ ಸಚಿವರ ಜೊತೆ ಭೋಜನ‌ ಕೂಟ ಏರ್ಪಡಿಸಿದ್ದು, ಕುತೂಹಲ ಕೆರಳಿಸಿದೆ.

ಕಾವೇರಿ‌ ನಿವಾಸದಲ್ಲಿ ಸಚಿವರಿಗೆ ಭೋಜನ‌ ಕೂಟ ಏರ್ಪಡಿಸಿದ ಸಿಎಂ

ಬಹಳ ದಿನಗಳ ಬಳಿಕ ಸಂಪುಟ ಸಚಿವರ ಜೊತೆ ಸಿಎಂ ಲಂಚ್ ಮೀಟಿಂಗ್​​ಗೆ ಮುಂದಾಗಿದ್ದು, ಪ್ರಸಕ್ತ ರಾಜಕೀಯ ವಿದ್ಯಾಮಾನಗಳು, ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಲಂಚ್ ಮೀಟಿಂಗ್ ಮೂಲಕ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಯತ್ನಿಸಿದ್ದಾರೆ ಎನ್ನಲಾಗ್ತಿದೆ.

ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿರುವ ವೇಳೆ ಸಿಎಂ ಲಂಚ್ ಮೀಟಿಂಗ್‌ ನಡೆಸಿರುವುದು ಕುತೂಹಲ ಕೆರಳಿಸಿದೆ. ಸಂಪುಟ ಪುನಾರಚನೆಯಾದರೆ ಕೆಲವರನ್ನು ಕೈ ಬಿಡಲಾಗುವುದೆಂಬ ಮಾತು ಕೇಳಿ ಬರುತ್ತಿದೆ. ಸಂಪುಟ ಕಸರತ್ತಿಗೂ ಮುನ್ನ ಸಚಿವರ ವಿಶ್ವಾಸ ಗಳಿಸಲು ಈ ಮೂಲಕ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ‌ಬರುತ್ತಿವೆ.

ಓದಿ: ಜನವರಿ 1 ರಿಂದ ಶಾಲೆ ಆರಂಭ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ಸಿಎಂ

ಜನವರಿ 2ನೇ ವಾರದಲ್ಲಿ ಮುಖ್ಯಮಂತ್ರಿಗಳಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗಲಿದೆ. ಹೀಗಾಗಿ ಬಜೆಟ್ ಕುರಿತು ಸಹ ಭೋಜನ ಕೂಟದಲ್ಲಿ ಚರ್ಚೆ ನಡೆದಿದೆ. ಕೆಲ ಶಾಸಕರ ಕ್ಷೇತ್ರಗಳಿಂದ ಇಲಾಖೆಗೆ ಆಗಬೇಕಿರುವ ಕೆಲಸಗಳ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ತಿಳಿದು ಬಂದಿದೆ.

ಮುಂದಿನ ತಿಂಗಳು ರಾಜ್ಯದಲ್ಲಿ ಉಪಚುನಾವಣೆ ಘೋಷಣೆ ಸಾಧ್ಯತೆ ಇದ್ದು, ಈ ಹಿನ್ನೆಲೆ ಚುನಾವಣೆಗೆ ಸಜ್ಜಾಗುವ ಬಗ್ಗೆಯೂ ಚರ್ಚಿಸಲಾಗಿದೆ. ಪ್ರಮುಖವಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ‌.

ನೂತನ ಮುಖ್ಯ‌ಕಾರ್ಯದರ್ಶಿ ಆಯ್ಕೆ ಬಗ್ಗೆ ಸಚಿವರ ಸಲಹೆ, ಅಭಿಪ್ರಾಯ ಪಡೆದಿದ್ದಾರೆ. ನೂತನ ಸಿಎಸ್ ಆಯ್ಕೆಗೂ ಮುನ್ನ ಸಚಿವರ ಜೊತೆ ಚರ್ಚಿಸಿ, ಸಿಎಸ್ ಆಯ್ಕೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.