ETV Bharat / state

ಹರಿಹರ, ಜಗಳೂರಿಗೆ ನೀರು ಪೂರೈಕೆ: ಯೋಜನೆ ರೂಪಿಸಲು ಸಿಎಂ‌ ಸೂಚನೆ

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದ ನಿಯೋಗ ಭದ್ರಾ ಮೇಲ್ದಂಡೆ ‌ಯೋಜನೆ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ರು.

ಹರಿಹರ, ಜಗಳೂರಿಗೆ ನೀರು ಪೂರೈಸಲು ಯೋಜನೆ ರೂಪಿಸಲು ಸಿಎಂ‌ ಸೂಚನೆ
author img

By

Published : Sep 13, 2019, 2:51 PM IST

ಬೆಂಗಳೂರು: ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತ್ತು.‌ ಈ ವೇಳೆ ಭದ್ರಾ ಮೇಲ್ದಂಡೆ ‌ಯೋಜನೆಗೆ ಸಂಬಂಧಿಸಿದಂತೆ ನಿಯೋಗದ ಮುಖಂಡರು ಚರ್ಚೆ ನಡೆಸಿದರು.

ಹರಿಹರದಿಂದ ಹಳ್ಳಿಗಳಿಗೆ ನೀರು ಹಾಯಿಸುವುದು, ಜಗಳೂರಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು ಸಾಧ್ಯವಾ ಎನ್ನುವ ಬಗ್ಗೆ ಯೋಜನೆ ತಯಾರಿಸಿ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಭೆ ಬಳಿಕ ಮಾತನಾಡಿದ ದಾವಣಗೆರೆ ಸಂಸದ ಜಿ. ಎಂ ಸಿದ್ದೇಶ್ವರ್​, 2500 ಕೋಟಿ ಯೋಜನೆಯ ವೆಚ್ಚದಲ್ಲಿ ಪಾವಗಡಕ್ಕೆ ತುಂಗಭದ್ರಾ ನದಿಯಿಂದ‌ ನೀರು ಹೋಗುತ್ತದೆ. ಅದು ಜಗಳೂರು ಮೇಲೆ‌ ಹಾದು ಹೊಗುವುದರಿಂದ ಜಗಳೂರಿಗೆ ನೀರು ಕೊಡಬೇಕು ಅಂತ ಒತ್ತಾಯ ಮಾಡಿದರು. 109 ಹಳ್ಳಿಗಳ ಕುಡಿಯುವ ನೀರಿನ‌ ಯೋಜನೆ ಕೂಡ ನೆನೆಗುದಿಗೆ ಬಿದ್ದಿದ್ದು ಅದಕ್ಕೂ ಸಹ ಚಾಲನೆ ಮಾಡಬೇಕು ಅಂತ ಭದ್ರಾ ಮೇಲ್ದಂಡೆ ಯೋಜನೆ ಕಮಿಟಿ ಸದಸ್ಯರು ಮುಖ್ಯಮಂತ್ರಿಗೆ ಒತ್ತಾಯಿಸಿದರು. ಇದರ ಜೊತೆಗೆ ಜಗಳೂರು ಮತ್ತು‌ ಹರಿಹರ ಕೆಲವು ಭಾಗದಲ್ಲಿ ಬರಗಾಲ ಆವರಿಸಿದ್ದು, ಕೂಡಲೇ ಮೇವು ಬ್ಯಾಂಕ್ ತೆರೆಯಲು ರೈತರು ಆಗ್ರಹಿಸಿದರು.

ಹರಿಹರ, ಜಗಳೂರಿಗೆ ನೀರು ಪೂರೈಸಲು ಯೋಜನೆ ರೂಪಿಸಲು ಸಿಎಂ‌ ಸೂಚನೆ

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪಾವಗಡ ಯೋಜನೆಗೆ ಈಗಾಗಲೇ ಟೆಂಡರ್ ಮುಗಿದಿದ್ದರಿಂದ ಹೊಸ ಟೆಂಡರ್ ಕರೆಯಲು ಬರುವುದಿಲ್ಲ. ಹಾಗಾಗಿ ಹೊಸದಾಗಿ ಯಾವ ರೀತಿ ಅದೇ ಪೈಪ್​ಲೈನ್ ಮೂಲಕ ನೀರು ತರಲು ಸಾಧ್ಯ ಅನ್ನೋದರ‌ ಬಗ್ಗೆ ವರದಿ‌ ಕೊಡಿ‌ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಷ್ಟೇ ಅಲ್ಲದೆ ಆದಷ್ಟು ಬೇಗ ಆ ಕೆಲಸವನ್ನು‌ ಮುಗಿಸಬೇಕು ಅಂತ ತಅಕೀತು ಮಾಡಿದರು. ಹರಿಹರದಿಂದ ಹಳ್ಳಿಗಳಿಗೆ ನೀರು ಹಾಯಿಸುವುದಕ್ಕೆ ಸಾಧ್ಯವಾ ಅನ್ನೋದರ ಬಗ್ಗೆ ಯೋಜನೆ ತಯಾರಿಸಿ ಎಂದ ಸಿಎಂ, ಕೂಡಲೇ ಗೋ ಶಾಲೆ ಮತ್ತು‌ ಮೇವು ಬ್ಯಾಂಕ್ ತೆರೆಯುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಭದ್ರಾ ಮೇಲ್ದಂಡೆ ಒಳಗೆ ಚಿತ್ರದುರ್ಗ, ಕೋಲಾರ ಜಿಲ್ಲೆಗೆ ನೀರು ಹರಿಸಬೇಕಿತ್ತು.ಜಗಳೂರಿಗೂ ನೀರು ಹರಿಸಲು ಒತ್ತಾಯ ಮಾಡಿದ್ವಿ.ಆದರೆ ಆಗಿರಲಿಲ್ಲ. ಈಗ ಯಡಿಯೂರಪ್ಪಗೆ‌ ಮನವಿ ಮಾಡಿದ್ದೀವಿ. ಯಡಿಯೂರಪ್ಪ ಸಕಾರಾತ್ಮಕವಾಗಿ ಸಮ್ಮತಿಸಿದ್ದಾರೆ ಎಂದರು. ತುಂಗಭದ್ರಾ ಹಿನ್ನೀರಿಂದ ಕುಡಿಯುವ ನೀರಿಗೆ ವ್ಯವಸ್ಥೆ ಭರವಸೆ ಸಿಕ್ಕಿದೆ. 2.4 ಟಿಎಂಎಸಿ ನೀರು ಒದಗಿಸಲು ಸಿಎಂ ಭರವಸೆ ನೀಡಿದ್ದಾರೆ. ಎರಡ್ಮೂರು ತಿಂಗಳಲ್ಲಿ ಈ ಯೋಜನೆ ಜಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 53 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು 663 ಕೋಟಿ ರೂ. ಟೆಂಡರ್ ಆಗಿದೆ. ಹರಿಹರ, ಜಗಳೂರು ಕುಡಿಯುವ ನೀರು ಒದಗಿಸುವುದು, ಮೇವು ಬ್ಯಾಂಕ್ ತೆರೆಯುವ ಬಗ್ಗೆ ಸೂಚನೆ‌ ನೀಡಲಾಗಿದೆ. ಮಾಯಕೊಂಡ ತಾಲೂಕು ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ಸಂಸದ ಸಿದ್ದೇಶ್ವರ್ ವಿವರಿಸಿದರು.

Intro:

ಬೆಂಗಳೂರು: ಹರಿಹರದಿಂದ ಹಳ್ಳಿಗಳಿಗೆ ನೀರು ಹಾಯಿಸುವುದು,ಜಗಳೂರಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು ಸಾಧ್ಯವಾ ಎನ್ನುವ ಬಗ್ಗೆ ಯೋಜನೆ ತಯಾರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು.‌ ಭದ್ರಾ ಮೇಲ್ದಂಡೆ ‌ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು
2500 ಕೋಟಿ ಯೋಜನೆಯ ವೆಚ್ಚದಲ್ಲಿ ಪಾವಗಡಕ್ಕೆ ತುಂಗಭದ್ರಾ ನದಿಯಿಂದ‌ ನೀರು ಹೋಗುತ್ತದೆ ಅದು ಜಗಳೂರು ಮೇಲೆ‌ಹಾದು ಹೊಗುವುದರಿಂದ ಜಗಳೂರಿಗೆ ನೀರು ಕೊಡಬೇಕು ಅಂತ ಒತ್ತಾಯ ಮಾಡಿದರು

ಭದ್ರಾ ಮೇಲ್ದಂಡೆ ಮೂಲಕ‌ ಕೆರೆಗಳಿಗೆ‌ನೀರು ತುಂಬಿಸುವ ಯೋಜನೆ ನೆನಗುದಿಗೆ ಬಿದ್ದಿದೆ ಹಾಗಾಗಿ ಅದನ್ನು‌ ಮತ್ತೆ ಜಾರಿ ಮಾಡಬೇಕು. ಅಷ್ಟೇ ಅಲ್ಲದೆ 1೦9 ಹಳ್ಳಿಗಳ ಕುಡಿಯುವ ನೀರಿನ‌ ಯೋಜನೆ ಕೂಡ ನೆನೆಗುದಿಗೆ ಬಿದ್ದಿದ್ದು ಅದಕ್ಕೂ ಸಹ ಚಾಲನೆ ಮಾಡಬೇಕು ಅಂತ ಭದ್ರಾ ಮೇಲ್ದಂಡೆ ಯೋಜನೆ ಕಮಿಟಿ ಸದಸ್ಯರು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದರು.

ಇದರ ಜೊತೆಗೆ ಜಗಳೂರು ಮತ್ತು‌ ಹರಿಹರ ಕೆಲವು ಭಾಗದಲ್ಲಿ ಬರಗಾಲ ಆವರಿಸಿದ್ದು ಕೂಡಲೇ ಮೇವು ಬ್ಯಾಂಕ್ ತೆರೆಯಲು ರೈತರು ಒತ್ತಾಯ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಪಾವಗಡ ಯೋಜನೆಗೆ ಈಗಾಗಲೇ ಟೆಂಡರ್ ಮುಗಿದಿದ್ದರಿಂದ ಹೊಸ ಟೆಂಡರ್ ಕರೆಯಲು ಬರುವುದಿಲ್ಲ ಹಾಗಾಗಿ ಹೊಸದಾಗಿ ಯಾವ ರೀತಿ ಅದೇ ಪೈಪ್ ಲೈನ್ ಮೂಲಕ ನೀರು ತರಲು ಸಾಧ್ಯ ಅನ್ನೋದರ‌ ಬಗ್ಗೆ ವರದಿ‌ ಕೊಡಿ‌ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು ಅಷ್ಟೇ ಅಲ್ಲದೆ ಆದಷ್ಟು ಬೇಗ ಆ ಕೆಲಸವನ್ನು‌ ಮುಗಿಸಬೇಕು ಅಂತ ಹೇಳಿದರು

ಹರಿಹರದಿಂದ ಹಳ್ಳಿಗಳಿಗೆ ನೀರು ಹಾಯಿಸುವುದಕ್ಕೆ ಸಾಧ್ಯವಾ ಅನ್ನೋದರ ಬಗ್ಗೆ ಯೋಜನೆ ತಯಾರಿಸಿ ಎಂದ ಸಿಎಂ ಕೂಡಲೇ ಗೋ ಶಾಲೆ ಮತ್ತು‌ ಮೇವು ಬ್ಯಾಂಕ್ ತೆರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ,ಭದ್ರಾ ಮೇಲ್ದಂಡೆ ಒಳಗೆ ಚಿತ್ರದುರ್ಗ, ಕೋಲಾರ ಜಿಲ್ಲೆಗೆ ನೀರು ಹರಿಸಬೇಕಿತ್ತು.ಜಗಳೂರಿಗೂ ನೀರು ಹರಿಸಲು ಒತ್ತಾಯ ಮಾಡಿದ್ವಿ.ಆದರೆ ಆಗಿರಲಿಲ್ಲ. ಈಗ ಯಡಿಯೂರಪ್ಪಗೆ‌ ಮನವಿ ಮಾಡಿದ್ದೀವಿ. ಯಡಿಯೂರಪ್ಪ ಸಕಾರಾತ್ಮಕವಾಗಿ ಸಮ್ಮತಿಸಿದ್ದಾರೆ ಎಂದರು.

ತುಂಗಭದ್ರಾ ಹಿನ್ನೀರಿಂದ ಕುಡಿಯುವ ನೀರಿಗೆ ವ್ಯವಸ್ಥೆ ಭರವಸೆ ಸಿಕ್ಕಿದೆ.2.4 ಟಿಎಂಎಸಿ ನೀರು ಒದಗಿಸಲು ಸಿಎಂ ಭರವಸೆ.ಎರಡ್ಮೂರು ತಿಂಗಳಲ್ಲಿ ಈ ಯೋಜನೆ ಜಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.53 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು 663 ಕೋಟಿ ರೂ. ಟೆಂಟರ್ ಆಗಿದೆ.ಹರಿಹರ, ಜಗಳೂರು ಕುಡಿಯುವ ನೀರು ಒದಗಿಸುವುದು, ಮೇವು ಬ್ಯಾಂಕ್ ತೆರೆಯುವ ಬಗ್ಗೆ ಸೂಚನೆ‌ ನೀಡಲಾಗಿದೆ.ಮಾಯಕೊಂಡ ತಾಲೂಕು ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.