ETV Bharat / state

28 ಸ್ಮಾರ್ಟ್ ವರ್ಚುಯಲ್‌ ಕ್ಲಿನಿಕ್‌ & ಕಮಾಂಡ್ ಸೆಂಟರ್​ಗೆ ಸಿಎಂ ಚಾಲನೆ - ಅಶ್ವತ್ಥನಾರಾಯಣ

ಆನ್‌ಲೈನ್ ಮೂಲಕ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್‌ ಸೇವೆಗಳು ಲಭ್ಯವಾಗಲಿದ್ದು, ಅತ್ಯಾಧುನಿಕ ವೈದ್ಯಕೀಯ ಸಾಧನಗಳನ್ನು ಒಳಗೊಂಡಿದೆ. ಹೃದಯ, ಶ್ವಾಸಕೋಶ, ಕಣ್ಣು, ಕಿವಿಗಳ ಸಂಕೀರ್ಣ ತಪಾಸಣೆ ಸೇರಿದಂತೆ ಹಲವು ಸೇವೆಗಳು ಎಸ್​​ವಿಸಿಯಲ್ಲಿ ಸಿಗಲಿವೆ.

cm-inaugurate-28-smart-virtual-clinic-and-command-centre
28 ಸ್ಮಾರ್ಟ್ ವರ್ಚುಯಲ್‌ ಕ್ಲಿನಿಕ್‌ & ಕಮಾಂಡ್ ಸೆಂಟರ್​ಗೆ ಸಿಎಂ ಚಾಲನೆ
author img

By

Published : Mar 11, 2023, 7:21 PM IST

ಬೆಂಗಳೂರು: ನಗರದ ಜನರಿಗೆ ಸುಲಭ ಮತ್ತು ಉತ್ಕೃಷ್ಟ ವೈದ್ಯಕೀಯ ಸೇವೆಗಳನ್ನು ದೊರಕಿಸಿ ಕೊಡುವ ಉದ್ದೇಶದ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್‌ (ಎಸ್‌ವಿಸಿ) ಮತ್ತು ಇವುಗಳನ್ನು ನಿರ್ವಹಿಸುವ ಸೆಂಟ್ರಲ್‌ ಕ್ಲಿನಿಕಲ್ ಕಮಾಂಡ್ ಸೆಂಟರ್ (ಸಿಸಿಸಿಸಿ) ಸೇವೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯ ಸದಾಶಿವನಗರದಲ್ಲಿ ವಿದ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, "ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ಬಿಬಿಎಂಪಿ ಸಹಯೋಗದೊಂದಿಗೆ ರೂಪಿಸಿರುವ ಈ ಯೋಜನೆಯಡಿ ಬೆಂಗಳೂರಿನಲ್ಲಿ 28 ಕಡೆಗಳಲ್ಲಿ ಎಸ್‌ವಿಸಿ ಆರಂಭಿಸಲಾಗುತ್ತಿದ್ದು, ಕೇವಲ 11 ತಿಂಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ. ಇದರಿಂದ ನಗರದ ಜನರಿಗೆ ಸುಗಮ ಆರೋಗ್ಯ ಸೇವೆಗಳು ಸಿಗಲಿವೆ. ಇದರ ಕಮಾಂಡ್‌ ಸೆಂಟರ್​ ಸದಾಶಿವನಗರದ ಜನತಾ ಬಜಾರ್​ ಕಟ್ಟಡದಿಂದ ಕೆಲಸ ಮಾಡಲಿದ್ದು, ಇಲ್ಲಿ 20 ತಜ್ಞ ವೈದ್ಯರ ತಂಡ ಜನರ ಸೇವೆಗೆ ಇರಲಿದೆ" ಎಂದರು.

ಆನ್‌ಲೈನ್ ಮೂಲಕ ಎಸ್‌ವಿಸಿ ಸೇವೆಗಳು ಲಭ್ಯವಾಗಲಿದ್ದು, ಇಲ್ಲಿ ಅತ್ಯಾಧುನಿಕ ವೈದ್ಯಕೀಯ ಸಾಧನಗಳು ಇವೆ. ಹೃದಯ, ಶ್ವಾಸಕೋಶ, ಕಣ್ಣು, ಕಿವಿಗಳ ಸಂಕೀರ್ಣ ತಪಾಸಣೆ ಸೇರಿದಂತೆ ಹಲವು ಸೇವೆಗಳು ಇಲ್ಲಿ ಸಿಗಲಿವೆ. ಈ ಕೇಂದ್ರಗಳಿಗೆ ಡಿಜಿಟಲ್ ಸ್ಟೆಥೋಸ್ಕೋಪ್‌, ಗ್ಲೂಕೊ ಮೀಟರ್​, ಡರ್ಮಾಸ್ಕೋಪ್‌, ಇಸಿಜಿ ಮುಂತಾದ ಅಗತ್ಯ ಸೌಲಭ್ಯಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ಅಥವಾ ಪರಿಣತ ವೈದ್ಯರ ಸಲಹೆ ಸಿಗುವುದಿಲ್ಲ ಎನ್ನುವ ಭಾವನೆಯಿಂದ ಜನರು ಹೊರಬರಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು ಎಂದು ಬೊಮ್ಮಾಯಿ ನುಡಿದರು.

ಜನರಿಗೆ ಆರೋಗ್ಯ ಸುರಕ್ಷೆ ಮುಖ್ಯ: ಡಾ.ಸಿ.ಎನ್ ಅಶ್ವತ್ಥನಾರಾಯಣ ಮಾತನಾಡಿ, "ಜನರಿಗೆ ಆರೋಗ್ಯ ಸುರಕ್ಷೆ ಇಂದು ಸವಾಲಾಗಿ ಪರಿಣಮಿಸಿದೆ. ಇಂದಿನ ಸಂಕೀರ್ಣ ಮತ್ತು ಆಧುನಿಕ ಜೀವನಶೈಲಿಯಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನರಿಗೆ ಎಟುಕುತ್ತಿಲ್ಲ. ಇದನ್ನು ಮನಗಂಡು ಸ್ಮಾರ್ಟ್ ವರ್ಚುಯಲ್‌ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಇದಕ್ಕೆ ಒಟ್ಟು 21 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ" ಎಂದರು.

ಈ ಉಪಕ್ರಮದಡಿ ಸಾರ್ವಜನಿಕರು ಸುಲಭವಾಗಿ ಚಿಕಿತ್ಸೆ ಪಡೆಯಬೇಕು ಎಂಬ ಕಳಕಳಿಯಿಂದ ಮೊಬೈಲ್‌ ಆಪ್‌ (iVirtual Vaidya) ಅಭಿವೃದ್ಧಿ ಪಡಿಸಲಾಗಿದೆ. ನಾಗರಿಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಸ್ಮಾರ್ಟ್ ವರ್ಚುಯಲ್‌ ಕ್ಲಿನಿಕ್‌ಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ಸೌಲಭ್ಯವಿದ್ದು, ಡಿಜಿಟಲ್‌ ಪ್ರಿಸ್ಕ್ರಿಪ್ಶನ್‌ ಪಡೆದುಕೊಳ್ಳಬಹುದು. ವೈದ್ಯಕೀಯ ವರದಿಗಳ ಆನ್‌ಲೈನ್‌ ನಿರ್ವಹಣೆ ವ್ಯವಸ್ಥೆ ಇದ್ದು, ಮುಂದಿನ ಸುತ್ತಿನ ವೈದ್ಯಕೀಯ ಸಮಾಲೋಚನೆ ದಿನಾಂಕವನ್ನೂ ಕಾಯ್ದಿರಿಸಿ, ರೋಗಿಗಳಿಗೆ ಆನ್‌ಲೈನ್‌ ಮೂಲಕ ತಿಳಿಸಲಾಗುವುದು ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಕಮಾಂಡ್‌ ಸೆಂಟರ್​ನಲ್ಲಿದ್ದ ಜನರಲ್‌ ಮೆಡಿಸಿನ್‌ ತಜ್ಞರು ಮತ್ತು ಚರ್ಮರೋಗ ತಜ್ಞರು ನಾಗಪ್ಪ ಬ್ಲಾಕ್‌ ಪ್ರಾಥಮಿಕ ಕೇಂದ್ರಕ್ಕೆ ಬಂದಿದ್ದ ಯುವತಿಯ ಆರೋಗ್ಯ ಪರೀಕ್ಷೆಯನ್ನು ರಿಯಲ್‌ ಟೈಮ್‌ನಲ್ಲಿ ನಡೆಸಿ, ಕಫ ಪರೀಕ್ಷೆ ಕೈಗೊಂಡರು. ಇದನ್ನು ಸ್ವತಃ ವೀಕ್ಷಿಸಿದ ಮುಖ್ಯಮಂತ್ರಿಗಳು, ತ್ವರಿತ ಗತಿಯ ವೈದ್ಯಕೀಯ ಪರೀಕ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ಯಾಲೇಸ್‌ ಗುಟ್ಟಹಳ್ಳಿ, ನೇತಾಜಿ ವೃತ್ತ, ಸುಬೇದಾರ್ ಪಾಳ್ಯ, ಗಾಂಧಿ ಗ್ರಾಮ, ನಾಗಪ್ಪ ಬ್ಲಾಕ್‌ಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಈ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿವೆ.

ಇದನ್ನೂ ಓದಿ: ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್‌ ಜೋಶಿ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.