ETV Bharat / state

ನಮ್ಮ ಮುಂದಿನ ಸಿಎಂ ಕುಮಾರಸ್ವಾಮಿ, ತಾಕತ್ತಿದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್​-ಬಿಜೆಪಿಗೆ ಇಬ್ರಾಹಿಂ ಸವಾಲು - ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ನಮ್ಮದು ಒಕ್ಕಲುತನ ಮಾಡುವ ಪಾರ್ಟಿ, ಬಡವರ ಪಾರ್ಟಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

cm-ibrahim-challenges-congress-and-bjp-over-cm-candidate
ನಮ್ಮ ಮುಂದಿನ ಸಿಎಂ ಕುಮಾರಸ್ವಾಮಿ, ತಾಕತ್ತಿದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್​-ಬಿಜೆಪಿಗೆ ಇಬ್ರಾಹಿಂ ಸವಾಲು
author img

By

Published : Jul 2, 2022, 5:16 PM IST

ಬೆಂಗಳೂರು: ತಾಕತ್ತಿದ್ದರೆ ಮುಂದಿನ ಮುಖ್ಯಮಂತ್ರಿ ಯಾರೆಂದು ಈಗಲೇ ಘೋಷಣೆ ಮಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಮತ್ತು ಬಿಜೆಪಿಗೆ ಸವಾಲು ಹಾಕಿದರು. ಜೆಡಿಎಸ್​ ಕಚೇರಿ ಜೆ ಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕಾಂಗ್ರೆಸ್​ನವರು ಸಿಎಂ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ. ಬಿಜೆಪಿಯವರು ಕೂಡ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿಲ್ಲ. ನಾವು ಹೆಚ್​.ಡಿ. ಕುಮಾರಸ್ವಾಮಿಯವರು ನಮ್ಮ ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇವೆ. ನಿಮಗೆ ತಾಕತ್ ಇದ್ದರೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯನವರ ಕಾರ್ಯಕ್ರಮ ಹಾಳು ಮಾಡಲು ಜೆಡಿಎಸ್​ನಿಂದ ಹುನ್ನಾರ ನಡೆಸಿದ್ದಾರೆ ಅಂತಾ ಕೆಲವರು ಆರೋಪ ಮಾಡುತ್ತಿದ್ದಾರೆ. ಜನತಾ ದಳ ಅಸ್ತಿತ್ವದಲ್ಲಿ ಇಲ್ಲ ಅಂತೀರಿ. ಹಾಗಾದರೆ ನಮ್ಮ ಮೇಲೆ ಭಯ ಯಾಕೆ ಎಂದು ಪ್ರಶ್ನಿಸಿದ ಅವರು, ದೇವೇಗೌಡರ ಬಗ್ಗೆ ಮಾತನಾಡಿರುವ ರಾಜಣ್ಣನವರು ಕ್ಷಮೆ ಕೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರು ಉಲ್ಟಾ ಮಾತನಾಡಿದ್ದಾರೆ. ರಾಜಣ್ಣನವರು ಕ್ಷಮೆ ಕೇಳಬೇಕು. ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಮುಖಂಡ ರಾಜಣ್ಣಗೆ ಇಬ್ರಾಹಿಂ ಎಚ್ಚರಿಸಿದರು.

ನಮ್ಮ ಮುಂದಿನ ಸಿಎಂ ಕುಮಾರಸ್ವಾಮಿ, ತಾಕತ್ತಿದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಿಸಿ: ಕಾಂಗ್ರೆಸ್​-ಬಿಜೆಪಿಗೆ ಇಬ್ರಾಹಿಂ ಸವಾಲು

ರಾಜಣ್ಣ ಕ್ಷಮೆ ಕೇಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಹೀಗಾಗಿ ರಾಜಣ್ಣನವರೇ ಇದನ್ನು ಮತ್ತೆ ಎಳೆದಾಡಿಕೊಂಡು ಹೋಗೋದು ಬೇಡ. ಕೈ ಮುಗಿದು ನಾನು ರಾಜಣ್ಣಗೆ ಹೇಳ್ತೀನಿ. ದಯವಿಟ್ಟು ಕ್ಷಮಾಪಣೆ ಕೇಳಿ. ದೇವೇಗೌಡರು ಜಾತಿಯ ಸ್ವತ್ತು ಅಲ್ಲ, ಅವರು ದೇಶದ ಸ್ವತ್ತು ಎಂದು ಹೇಳಿದರು.

ಕಾಂಗ್ರೆಸ್​ಗೆ 110 ಕಡೆ ಅಭ್ಯರ್ಥಿ ಇಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆ. ಗುಬ್ಬಿ ವಾಸು ಅವರನ್ನು ಕಾಂಗ್ರೆಸ್‌ಗೆ ರಾಜಣ್ಣನವರು ಕರೆದುಕೊಂಡು ಹೋಗಿದ್ದಾರೆ. ಅವರು ರಾಜ್ಯಸಭೆಯಲ್ಲಿ ಬಿಜೆಪಿಗೆ ಮತ ಹಾಕಿದರು. ಕೋಲಾರದ ಶ್ರೀನಿವಾಸಗೌಡರಿಂದ ಕಾಂಗ್ರೆಸ್​ಗೆ ಮತ ಹಾಕಿಸಿಕೊಂಡಿದ್ದಿರಾ?. ನೀವು ನಮಗೆ ಜಾತ್ಯತೀತದ ಬಗ್ಗೆ ಮಾತನಾಡ್ತಿರಾ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೇವೇಗೌಡರಿಗೆ ಭೀಷ್ಮಾಚಾರ್ಯರ ಗುಣವಿದೆ, ಭಗವಂತ ಅವರಿಗೆ ಆ ಶಕ್ತಿ ಕೊಟ್ಟಿದ್ದಾನೆ: ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.