ETV Bharat / state

ಸಿಎಂ ಆಯೋಜಿಸಿದ್ದ ಭೋಜನಕೂಟ ದಿಢೀರ್​ ರದ್ದು: ಕಾರಣ? - ಬಿಜೆಪಿ ಸುದ್ದಿ

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದ ಸಿಎಂ ಅಂದು ರಾತ್ರಿಯ ಭೋಜನಕೂಟವನ್ನೂ ಏರ್ಪಡಿಸಿದ್ದರು. ಇದಕ್ಕಾಗಿ ಸಿದ್ದತೆಗಳೂ ನಡೆದಿದ್ದವು. ಆದರೆ ನಿನ್ನೆ ದಿಢೀರ್ ಬೆಳವಣಿಗೆಯಲ್ಲಿ ಶಾಸಕಾಂಗ ಪಕ್ಷದ ಸಭೆ ರದ್ದುಗೊಳಿಸಿದ್ದ ಸಿಎಂ ಯಡಿಯೂರಪ್ಪ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೂಲಕ ಶಾಸಕಾಂಗ ಪಕ್ಷದ ಸಭೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ತಲುಪಿಸಿದ್ದರು.

Dinner arrangement
ಭೋಜನಕೂಟ ದಿಢೀರ್​ ರದ್ದು
author img

By

Published : Jul 21, 2021, 1:02 PM IST

ಬೆಂಗಳೂರು: ಜುಲೈ 26 ರಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದ್ದು, ಅದಕ್ಕೂ ಮುನ್ನ ಆಯೋಜನೆ ಮಾಡಿದ್ದ ಎರಡು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ರದ್ದುಗೊಳಿಸಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆ ಸಂದರ್ಭದಲ್ಲಿ ಸಿಎಂ ಇರಿಸಿರುವ ಈ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಜುಲೈ 26 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಸಾಧನಾ ಕಾರ್ಯಕ್ರಮ ನಡೆಯಲಿದೆ. ‌ಸಭೆಗೂ ಮುನ್ನಾದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದ ಸಿಎಂ ಅಂದು ರಾತ್ರಿಯ ಭೋಜನಕೂಟವನ್ನೂ ಏರ್ಪಡಿಸಿದ್ದರು. ಇದಕ್ಕಾಗಿ ಸಿದ್ದತೆಗಳೂ ನಡೆದಿದ್ದವು. ಆದರೆ, ನಿನ್ನೆ ದಿಢೀರ್ ಬೆಳವಣಿಗೆಯಲ್ಲಿ ಶಾಸಕಾಂಗ ಪಕ್ಷದ ಸಭೆ ರದ್ದುಗೊಳಿಸಿದ್ದ ಸಿಎಂ ಯಡಿಯೂರಪ್ಪ ಪಕ್ಷದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೂಲಕ ಶಾಸಕಾಂಗ ಪಕ್ಷದ ಸಭೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ತಲುಪಿಸಿದ್ದರು.

ಜು.25ರ ಸಂಜೆ 7.30ಕ್ಕೆ ಔತಣಕೂಟದಲ್ಲಿ ಸೇರೋಣ, ಅಲ್ಲಿಯೇ ಕೆಲ ವಿಷಯಗಳ ಕುರಿತು ಚರ್ಚೆ ನಡೆಸೋಣ ಎನ್ನುವ ಸಂದೇಶವನ್ನು ಪಕ್ಷದ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಯಡಿಯೂರಪ್ಪ ಕಳುಹಿಸಿಕೊಟ್ಟಿದ್ದರು. ಆದರೆ, ಇದೀಗ ಭೋಜನಕೂಟವನ್ನು ಸಿಎಂ ರದ್ದು ಪಡಿಸಿದ್ದು ಬೇರೊಂದು ದಿನ ಭೋಜನಕೂಟ ಏರ್ಪಡಿಸಲು ಮುಂದಾಗಿದ್ದಾರೆ.

ಸಿಎಂ ಆಪ್ತ ಮೂಲಗಳ ಪ್ರಕಾರ, ಸರ್ಕಾರದ ಎರಡು ವರ್ಷದ ಸಾಧನಾ ಕಾರ್ಯಕ್ರಮಕ್ಕೆ ಯಾವುದೇ ಗೊಂದಲ ಆಗದಿರಲಿ ಎಂದು ಶಾಸಕಾಂಗ ಪಕ್ಷದ ಸಭೆ ಮತ್ತು ಭೋಜನಕೂಟ ರದ್ದು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜು.26 ರ ಸಮಾರಂಭದ ನಂತರ ಜು.27 ಅಥವಾ ಬೇರೊಂದು ದಿನ ಭೋಜನಕೂಟ ಏರ್ಪಡಿಸಲಿದ್ದಾರೆ ಎನ್ನಲಾಗಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.