ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಆಗ್ರಹಿಸಿದ್ದಾರೆ.
-
ಇಷ್ಟು ದಿನ ಸಂಪುಟ ವಿಸ್ತರಣೆಯಲ್ಲೇ ಮುಳುಗಿ ಹೋಗಿದ್ದ @BSYBJP ರವರು ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ. ಇದೀಗ ಸಂಪುಟ ವಿಸ್ತರಣೆಯೇ @BSYBJP ರವರಿಗೆ ಮುಳುವಾಗಿದ್ದು, ಅವರ ಪಕ್ಷದವರೇ 'ಸಿಡಿ' ರಹಸ್ಯವನ್ನು ಬಯಲು ಮಾಡಿದ್ದಾರೆ. 1/2#BJPfails
— S R Patil (@srpatilbagalkot) January 14, 2021 " class="align-text-top noRightClick twitterSection" data="
">ಇಷ್ಟು ದಿನ ಸಂಪುಟ ವಿಸ್ತರಣೆಯಲ್ಲೇ ಮುಳುಗಿ ಹೋಗಿದ್ದ @BSYBJP ರವರು ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ. ಇದೀಗ ಸಂಪುಟ ವಿಸ್ತರಣೆಯೇ @BSYBJP ರವರಿಗೆ ಮುಳುವಾಗಿದ್ದು, ಅವರ ಪಕ್ಷದವರೇ 'ಸಿಡಿ' ರಹಸ್ಯವನ್ನು ಬಯಲು ಮಾಡಿದ್ದಾರೆ. 1/2#BJPfails
— S R Patil (@srpatilbagalkot) January 14, 2021ಇಷ್ಟು ದಿನ ಸಂಪುಟ ವಿಸ್ತರಣೆಯಲ್ಲೇ ಮುಳುಗಿ ಹೋಗಿದ್ದ @BSYBJP ರವರು ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ. ಇದೀಗ ಸಂಪುಟ ವಿಸ್ತರಣೆಯೇ @BSYBJP ರವರಿಗೆ ಮುಳುವಾಗಿದ್ದು, ಅವರ ಪಕ್ಷದವರೇ 'ಸಿಡಿ' ರಹಸ್ಯವನ್ನು ಬಯಲು ಮಾಡಿದ್ದಾರೆ. 1/2#BJPfails
— S R Patil (@srpatilbagalkot) January 14, 2021
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಷ್ಟು ದಿನ ಸಂಪುಟ ವಿಸ್ತರಣೆಯಲ್ಲೇ ಮುಳುಗಿ ಹೋಗಿದ್ದ ಬಿಎಸ್ವೈ, ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ. ಇದೀಗ ಸಂಪುಟ ವಿಸ್ತರಣೆಯೇ ಯಡಿಯೂರಪ್ಪ ಅವರಿಗೆ ಮುಳುವಾಗಿದ್ದು, ಅವರ ಪಕ್ಷದವರೇ 'ಸಿಡಿ' ರಹಸ್ಯವನ್ನು ಬಯಲು ಮಾಡಿದ್ದಾರೆ. ಯಡಿಯೂರಪ್ಪ ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ:
ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸ್ವಪಕ್ಷದವರೇ ಟೀಕೆ ನಡೆಸಿ ಸಿಡಿ ಹಾಗೂ ಭ್ರಷ್ಟಾಚಾರದ ಸರ್ಕಾರ ಎಂದು ಟೀಕಿಸಿರುವ ಹಿನ್ನೆಲೆ, ಕೂಡಲೇ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ನೀಡಬೇಕು. ಈ ವಿಚಾರವಾಗಿ ಯುವ ಕಾಂಗ್ರೆಸ್ ನಾಯಕರು ಶುಕ್ರವಾರ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಬಳಿ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಗ್ಗೆ 11.30ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಬಿಜೆಪಿ ಒಂದು ಭ್ರಷ್ಟ ಜನತಾಪಕ್ಷ ಎನ್ನುವುದು ಅವರ ಪಕ್ಷದ ನಾಯಕರ ಬಾಯಿಯಿಂದಲೇ ಹೊರಬಿದ್ದಿದೆ. ಇದನ್ನ ಬಿಎಸ್ವೈ ಒಪ್ಪಿಕೊಂಡು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ.