ETV Bharat / state

ಸಿಎಂ ಸೂಚನೆ ಮೇರೆಗೆ ಅರುಣ್ ಸಿಂಗ್ ಭೇಟಿ ರದ್ದುಗೊಳಿಸಿದ ಬಿಎಸ್​ವೈ ಪರ ಶಾಸಕರ ಬಣ - ಬಿಎಸ್​​ವೈ ಬೆಂಬಲಿಗರು

ಸಿಎಂ ಬಿಎಸ್​ವೈ ಪರ ಶಾಸಕರ ತಂಡ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲು ಸಿದ್ಧತೆ ನಡೆಸಿತ್ತು. ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶಾಸಕರನ್ನು ಒಗ್ಗೂಡಿಸಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸಿಎಂ ಸೂಚನೆ ಮೇರೆಗೆ ಅರುಣ್ ಸಿಂಗ್ ಭೇಟಿಯನ್ನು ಶಾಸಕರು ರದ್ದುಗೊಳಿಸಿದ್ದಾರೆ.

CM BSY Supporters  Canceled  Arun Singh meet
ಅರುಣ್ ಸಿಂಗ್ ಭೇಟಿ ರದ್ದು
author img

By

Published : Jun 17, 2021, 12:07 PM IST

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶಾಸಕರ ಸಭೆ ನಡೆಸುವ ಹಿನ್ನೆಲೆ ಸಿಎಂ ನಿವಾಸ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಬದಲಾಗಿತ್ತು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಜೆ‌.ಸಿ.ಮಾಧುಸ್ವಾಮಿ, ಅಂಗಾರ ಸೇರಿದಂತೆ ಕೆಲ ಸಚಿವರು ಭೇಟಿ ನೀಡಿದರು.

ಕೆಲಕಾಲ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿದ ಸಚಿವರು, ರಾಜ್ಯ ಬಿಜೆಪಿಯ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ಆದರೆ ಸಿಎಂ ನಿವಾಸಕ್ಕೆ ಆಗಮಿಸಿದ ಸಚಿವರು, ಶಾಸಕರು ಅರುಣ್ ಸಿಂಗ್ ಭೇಟಿಗೆ ಸಮಯಾವಕಾಶ ಪಡೆದುಕೊಂಡಿಲ್ಲ. ಹಾಗಾಗಿ, ಸಿಎಂ ಭೇಟಿ ನಂತರ ಅರುಣ್ ಸಿಂಗ್ ಭೇಟಿಗೆ ಈ ನಾಯಕರು ತೆರಳುತ್ತಿಲ್ಲ ಎನ್ನಲಾಗಿದೆ.

ಸೆವೆನ್ ಮಿನಿಸ್ಟರ್ ಕ್ವಾಟ್ರಸ್​ನಲ್ಲಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನಿವಾಸದಲ್ಲಿಯೂ ಸಭೆ ನಡೆಯುತ್ತಿದೆ. ಬ್ರೇಕ್ ಫಾಸ್ಟ್ ಮೀಟಿಂಗ್​ಗೆ ವ್ಯವಸ್ಥೆ ಮಾಡಿಕೊಂಡಿದ್ದರೂ ಅದಕ್ಕೆ ಸಿಎಂ ಅನುಮತಿ ನಿರಾಕರಿಸಿ ಅಂತಹ ಚಟುವಟಿಕೆ ನಡೆಸದಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಬ್ರೇಕ್ ಫಾಸ್ಟ್​ಗೆ ಬ್ರೇಕ್ ಹಾಕಿ ಬರೀ ಸಭೆ ನಡೆಸಿದರು.

ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಪರ ಬ್ಯಾಟಿಂಗ್ ಮಾಡಿದ್ದ ಬೆಂಬಲಿಗರು, ಕೊನೆ ಕ್ಷಣದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ರನ್ನು ಭೇಟಿ ಮಾಡುವುದರಿಂದ ಹಿಂದೆ ಸರಿದಿದ್ದಾರೆ.‌ ಸಿಎಂ ಸೂಚನೆ ಮೇರೆಗೆ ನಿರ್ಧಾರ ಬದಲಿಸಿದ್ದು, ಕ್ಷೇತ್ರಗಳಿಗೆ ವಾಪಸ್ ತೆರಳಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ರಾಜಕೀಯವ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಗ್ರಾಮೀಣ ಪ್ರದೇಶದ ಎಲ್ಲಾ ಶಾಸಕರಿಗೂ ಕರೆ ಮಾಡಿ ಉಪಹಾರಕ್ಕೆ ಬರಲು ತಿಳಿಸಿದ್ದೆ. ರಾತ್ರಿ 10.30ಕ್ಕೆ ಸಿಎಂ ಕರೆ ಮಾಡಿದ್ದರು. ಅದೇ ರೀತಿ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಕರೆ ಮಾಡಿದ್ದರು. ನಾವು ಅರುಣ್ ಸಿಂಗ್ ಅವರನ್ನು ಭೇಟಿಯಾಗುತ್ತಿಲ್ಲ. ಮುಖ್ಯಮಂತ್ರಿಯಾಗಲು ಕೆಲವರು ಆಸೆ ಪಡುತ್ತಿದ್ದಾರೆ, ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಮಾತನಾಡುತ್ತಾರೆ ಎಂದರು.

ಇದು ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಮುಜುಗರ ತಂದಿದೆ. ಕೋವಿಡ್ ಸಮಯದಲ್ಲಿ ಪದೇ ಪದೆ ದೆಹಲಿಗೆ ಯಾಕೆ ಹೋಗಬೇಕು? ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​ ಚುನಾವಣೆ ಇದೆ. ದೆಹಲಿಗೆ ಪದೇ ಪದೆ ಹೋಗುತ್ತಿರುವವರು ಪಕ್ಷದ ಹೆಸರು, ಯಡಿಯೂರಪ್ಪನವರ ಹೆಸರು ಹೇಳಿಕೊಂಡು ಗೆದ್ದಿದ್ದಾರೆ. ಇವತ್ತು ಮಧ್ಯಾಹ್ನ ನಾವು ಇಲ್ಲಿ ಇರಲ್ಲ, ನಮ್ಮ ಕ್ಷೇತ್ರಕ್ಕೆ ವಾಪಸ್ ಹೋಗುತ್ತೇವೆ. ಸಿಎಂ ಸೂಚನೆ ಹಿನ್ನೆಲೆ ಅರುಣ್ ಸಿಂಗ್ ಭೇಟಿ ಕೈಬಿಟ್ಟಿದ್ದೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೆಹಲಿಗೆ ಹೋಗಿ ಬರಲಿ, ಅದು ಅವರ ಇಷ್ಟ. ಆದರೆ ಪಕ್ಷಕ್ಕೆ ಡ್ಯಾಮೇಜ್ ಮಾಡಬಾರದು ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಈ ಹಂತದಲ್ಲಿ ಈ ರೀತಿಯ ಮಾತಿನ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರೇ ನಮ್ಮ ನಾಯಕರು, ಪರ ವಿರೋಧ ಪ್ರಶ್ನೆ ಇಲ್ಲ. ಎಲ್ಲರೂ ಯಡಿಯೂರಪ್ಪನವರ ಪರ ಇದ್ದೇವೆ. ಎರಡು ವರ್ಷ ಮಾತ್ರ ಸಮಯ ಇದೆ. ಅಭಿವೃದ್ಧಿ ಕಡೆ ಗಮನಹರಿಸಬೇಕು. ಅನಗತ್ಯ ವಿಚಾರಗಳನ್ನು ಹೈಕಮಾಂಡ್ ಸರಿ ಮಾಡಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.