ETV Bharat / state

ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್​ ಹೇರಿಕೆ ಮಾಡಲ್ಲ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ!

ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣ ದಾಖಲಾಗುತ್ತಿರುವ ಕಾರಣ ಈಗಾಗಲೇ ವಾರಗಳ ಕಾಲ ಲಾಕ್​ಡೌನ್​ ಹೇರಿಕೆ ಮಾಡಲಾಗಿದ್ದು, ಅದು ಮುಕ್ತಾಯಗೊಳ್ಳಲು ಒಂದು ದಿನ ಬಾಕಿ ಇರುವಾಗಲೇ ಸಿಎಂ ಮಹತ್ವದ ಸಭೆ ನಡೆಸಿದರು.

CM BSY Meeting with Bengalore ministers
CM BSY Meeting with Bengalore ministers
author img

By

Published : Jul 20, 2020, 6:59 PM IST

Updated : Jul 20, 2020, 7:08 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್ ಬುಧವಾರ ಬೆಳಗ್ಗೆ 5ಗಂಟೆಗೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರ ಜೊತೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಲಾಕ್​ಡೌನ್​ ಮುಂದುವರಿಕೆ ಮಾಡಲು ಸಾಧ್ಯವಿಲ್ಲ ಎಂದು ಬಿಎಸ್​ವೈ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

CM BSY Meeting with Bengalore ministers
ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭ

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಎಸ್.ಟಿ ಸೋಮಶೇಖರ್, ಸುರೇಶ್ ಕುಮಾರ್, ಬೈರತಿ ಬಸವರಾಜ್, ಗೋಪಾಲಯ್ಯ ಸೇರಿದಂತೆ ಎಂಟು ವಲಯಗಳ ಉಸ್ತುವಾರಿ ಮತ್ತು ಸಿ.ಎಸ್ ವಿಜಯ್ ಭಾಸ್ಕರ್​ ಭಾಗಿಯಾಗಿದ್ದರು. ಬುಧವಾರದ ವೇಳೆಗೆ ವಾರಗಳ ಕಾಲ ಹೇರಿಕೆ ಮಾಡಿರುವ ಬೆಂಗಳೂರು ಲಾಕ್​ಡೌನ್​ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.ಈ ವೇಳೆ ಲಾಕ್​ಡೌನ್ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ. ಈ ವೇಳೆ ಲಾಕ್​ಡೌನ್​ ಬಿಟ್ಟು ಬೇರೆ ಮಾರ್ಗಸೂಚಿ ಅನುಸರಣೆ ಮಾಡಲು ಬಿಎಸ್​ವೈ ಸೂಚನೆ ನೀಡಿದ್ದು,ಸಂಡೇ ಲಾಕ್​ಡೌನ್​ ಮುಂದುವರಿಸುವಂತೆ ತಿಳಿಸಿದ್ದಾರೆ. ನಾಳೆ, ನಾಡಿದ್ದು ಇದೇ ವಿಚಾರವಾಗಿ ಸರಣಿ ಸಭೆ ನಡೆಯಲಿವೆ.

Last Updated : Jul 20, 2020, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.