ETV Bharat / state

ಅನರ್ಹ ಶಾಸಕನ​ ಕ್ಷೇತ್ರದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟಿಸಿದ ಸಿಎಂ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಲಭ್ಯವಿರುವ ನೀರನ್ನು ಪೋಲು ಮಾಡದೆ ಮಳೆ‌ನೀರು ಕೊಯ್ಲು, ನೀರಿನ ಮರು ಬಳಕೆಯಂತಹ ದೀರ್ಘಾವಧಿ ಯೋಜನೆಗೆ ನಾವೆಲ್ಲಾ ಮುಂದಾಗಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ತರಾತುರಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟನೆ
author img

By

Published : Nov 8, 2019, 7:01 PM IST

ಬೆಂಗಳೂರು: ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಅನುಪಸ್ಥಿತಿಯಲ್ಲೇ ಅವರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾತುರಿಯಲ್ಲೇ ಚಾಲನೆ ನೀಡಿದ್ದಾರೆ. ಲಭ್ಯವಿರುವ ನೀರನ್ನು ಪೋಲು ಮಾಡದೆ ಮಳೆ‌ನೀರು ಕೊಯ್ಲು, ನೀರಿನ ಮರು ಬಳಕೆಯಂತಹ ದೀರ್ಘಾವಧಿ ಯೋಜನೆಗೆ ನಾವೆಲ್ಲಾ ಮುಂದಾಗಬೇಕಿದೆ ಎಂದು ಸಿಎಂ ಕರೆ ನೀಡಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಂಗೇರಿಯ ದೊಡ್ಡಬೇಲೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಲೋಕಾರ್ಪಣೆ ಬಳಿಕ ಅವರು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಗೆ ಬಂದ ತಕ್ಷಣವೇ ಘಟಕಗಳ ಲೋಕಾರ್ಪಣೆ ಮಾಡಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎಂ, ನಾಡಗೀತೆ, ಸ್ವಾಗತ ಭಾಷಣಕ್ಕೂ ಮುನ್ನವೇ ಭಾಷಣಕ್ಕೆ ಮುಂದಾದರು. ಈ ವೇಳೆ ಸ್ವಾಗತ ಕೋರುತ್ತೇವೆ ಎಂದರೂ ಬೇಡವೆಂದು ಬಿಎಸ್‌ವೈ ಭಾಷಣಕ್ಕೆ ಮುಂದಾದರು. ಬಳಿಕ ನಾಡಗೀತೆ ಹಾಡಬೇಕು ಎನ್ನುವುದನ್ನು ಗಮನಕ್ಕೆ ತಂದ ನಂತರ ತಮಗೆ ನಿಗದಿಪಡಿಸಿದ್ದ‌ ಆಸನದತ್ತ ತೆರಳಿ ನಾಡಗೀತೆ ಹಾಡಿದರು.

ತರಾತುರಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಉದ್ಘಾಟನೆ

ನಂತರ ಮಾತನಾಡಿದ‌ ಸಿಎಂ, ನಾನು ಬೇರೆ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಿದೆ. ಹಾಗಾಗಿ ಹೆಚ್ಚು ಮಾತನಾಡಲ್ಲ, ಬೆಂಗಳೂರು ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಮೊನ್ನೆಯಷ್ಟೇ ಶಾಸಕರು, ಸಂಸದರ ಜೊತೆ ಸಭೆ ಮಾಡಿದ್ದೇನೆ. 2020 ರ ವೇಳೆಗೆ ಹೊರ ವರ್ತುಲ ರಸ್ತೆ ಆಗಲಿದೆ, ‌ಖಾಸಗಿ ವಾಹನ ಓಡಾಟ ಕಡಿಮೆ ಮಾಡಲು ಸರ್ಕಾರಿ ಬಸ್ ಸೇವೆ ಹೆಚ್ಚು ಮಾಡಲಿದ್ದೇವೆ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಗ್ರಾಮಗಳ ಕುಡಿಯುವ ನೀರಿನ ಪೂರೈಕೆಗೆ 1500ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ನೀರಿನ ಸಂಪನ್ಮೂಲದ ದುರ್ಬಳಕೆ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ, ಕೈಗಾರಿಕೀಕರಣದಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ‌ ಕುಸಿಯುತ್ತಿದೆ. ನೀರಿನ‌ ಕೊರತೆಯಾಗುತ್ತಿರುವ ಕಾರಣ ನೀರಿನ ಮರುಪೂರಣ, ಅಂತರ್ಜಲ ವೃದ್ಧಿಸುವ ಕೆಲಸ ಮಾಡಬೇಕಿದೆ. ತ್ಯಾಜ್ಯ ನೀರು ಶುದ್ಧೀಕರಿಸಿ ಸದ್ಬಳಕೆ ಮಾಡಬೇಕಿದೆ. ಅಲ್ಲದೆ, ಶುದ್ಧೀಕರಿಸಿದ‌ ನೀರುನ್ನು ಕೃಷಿ, ಕೈಗಾರಿಕೆಗೆ ಬಳಸಬೇಕಿದೆ. ನೆಲ-ಜಲ ಪರಿಣಾಮಕಾರಿಯಾಗಿ ಸದ್ಬಳಕೆ‌ ಮಾಡಿಕೊಳ್ಳಲು ನಮ್ಮ ಸರ್ಕಾರ‌ ಬದ್ಧವಾಗಿದೆ ಎಂದು ಯಡಿಯೂರಪ್ಪ ಘೋಷಿಸಿದರು.

ದೊಡ್ಡಬೇಲೆ ಭಾಗದಲ್ಲಿ ಗಿಡ ಮರ ಬೆಳೆಸಲು ಕ್ರಮ ಕೈಗೊಳ್ಳಿ. ಈ ಬಗ್ಗೆ ನಿಮಗೆ ನಾನು ಸೂಚನೆ ನೀಡುತ್ತಿದ್ದೇನೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಗೆ ಹೇಳುತ್ತಾ ಸಿಎಂ ವೇದಿಕೆಯಿಂದ ನಿರ್ಗಮಿಸಿದರು.

Intro:

ಬೆಂಗಳೂರು: ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಅನುಪಸ್ಥಿತಿಯಲ್ಲೇ ಅವರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತರಾತುರಿಯಲ್ಲೇ ಚಾಲನೆ ನೀಡಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಂಗೇರಿಯ ದೊಡ್ಡಬೆಲೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದ ವೇದಿಕೆಗೆ ಬಂದ ತಕ್ಷಣವೇ ಘಟಕಗಳ ಲೋಕಾರ್ಪಣೆ ಮಾಡಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎಂ, ನಾಡಗೀತೆ, ಸ್ವಾಗತ ಭಾಷಣಕ್ಕೂ ಮುನ್ನವೇ ಭಾಷಣಕ್ಕೆ ಮುಂದಾದರು. ಈ ವೇಳೆ ಸ್ವಾಗತ ಕೋರುತ್ತೇವೆ ಎಂದರೂ ಬೇಡ ಎಂದು ಬಿಎಸ್‌ವೈ ಭಾಷಣಕ್ಕೆ ಮುಂದಾದರು ಬಳಿಕ ನಾಡಗೀತೆ ಹಾಡಬೇಕು ಎನ್ನುವುದನ್ನು ಗಮನಕ್ಕೆ ತಂದ ನಂತರ ತಮಗೆ ನಿಗದಿಪಡಿಸಿದ್ದ‌ ಆಸನದತ್ತ ತೆರಳಿ ನಾಡಗೀತೆ ಹಾಡಿದರು.

ನಂತರ ಮಾತನಾಡಿದ‌ ಸಿಎಂ,ನಾನು ಬೇರೆ ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಿದೆ ಹಾಗಾಗಿ ಹೆಚ್ಚು ಮಾತನಾಡಲ್ಲ, ಬೆಂಗಳೂರು ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಮೊನ್ನೆಯಷ್ಟೆ ಶಾಸಕರು ಸಂಸದರ ಜೊತೆ ಸಭೆ ಮಾಡಿದ್ದೇನೆ 2020 ರ ವೇಳೆಗೆ ಹೊರ ವರ್ತುಲ ರಸ್ತೆ ಆಗಲಿದೆ ‌ಖಾಸಗಿ ವಾಹನ ಓಡಾಟ ಕಡಿಮೆ ಮಾಡಲು ಸರ್ಕಾರಿ ಬಸ್ ಸೇವೆ ಹೆಚ್ಚು ಮಾಡಲಿದ್ದೇವೆ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ ನೂರಾ ಹತ್ತು ಗ್ರಾಮದ ಕುಡಿಯುವ ನೀರಿನ ಪೂರೈಕೆಗೆ 1500ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಲಭ್ಯವಿರುವ ನೀರಿನ ಸಂಪನ್ಮೂಲಗಳ ಪೋಲು ಮಾಡದೆ ಮಳೆ‌ನೀರು ಕೊಯ್ಲು,ನೀರಿನ ಮರುಬಳಕೆಯಂತಹ ದೀರ್ಘಾವಧಿ ಯೋಜನೆಗೆ ನಾವಲ್ಲಾ ಮುಂದಾಗಬೇಕಿದೆ ಎಂದು ಸಿಎಂ ಕರೆ ನೀಡಿದರು.

ನೀರಿನ ಸಂಪನ್ಮೂಲದ ದುರ್ಬಳಕೆ, ಪರಿಸರ ಮಾಲಿನ್ಯ,ಜಾಗತಿಕ ತಾಪಮಾನ,ಕೈಗಾರಿಕೀಕರಣಸ ಕಾರಣದಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ‌ ಕುಸಿಯುತ್ತಿದೆ,ನೀರಿನ‌ಲಭ್ಯತೆ ಕೊರತೆಯಾಗುತ್ತಿರುವ ಕಾರಣ ನೀರಿನ ಮರುಪೂರಣ ,ಅಂತರ್ಜಲ ವೃದ್ದಿಸುವ ಕೆಲಸ ಮಾಡಬೇಕಿದೆ,ತ್ಯಾಜ್ಯ ನೀರು ಶುದ್ದೀಕರಿಸಿ ಸದ್ಬಳಕೆ ಮಾಡಬೇಕಿದೆ, ಶುದ್ದೀಕರಿಸಿದ‌ ನೀರು‌ ಕೃಷಿ,ಕೈಗಾರಿಕೆಗೆ ಬಳಸಬೇಕಿದೆ, ನೆಲ ಜಲ ಪರಿಣಾಮಕಾರಿಯಾಗಿ ಸದ್ಬಳಕೆ‌ ಮಾಡಿಕೊಳ್ಳಲು ನಮ್ಮ ಸರ್ಕಾರ‌ ಬದ್ದವಾಗಿದೆ ಎಂದರು.

ದೊಡ್ಡಬೆಲೆ ಭಾಗದಲ್ಲಿ ಗಿಡ ಮರ ಬೆಳೆಸಲು ಕ್ರಮ ಕೈಗೊಳ್ಳಿ ತುಷಾರ್ , ಇದು ನಿಮಗೆ ಸೂಚನೆ ನೀಡುತ್ತಾ ಇದ್ದೇನೆ ಎಂದು ಜಲಮಂಡಳ ಅಧ್ಯಕ್ಷ ತುಷಾರ್ ಗಿರಿನಾಥ್ ಗೆ ಸಿಎಂ ಸೂಚನೆ ನೀಡುತ್ತಾ ವೇದಿಕೆಯಿಂದ ನಿರ್ಗಮಿಸಿದರು.

ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್, ಪರಿಷತ್ ಸದಸ್ಯ ಅ ದೇವೇಗೌಡ ಮಾತ್ರ ಭಾಗಿಯಾಗಿದ್ದರು.ಅನರ್ಹ ಶಾಸಕರ ತೀರ್ಪು ನಿರೀಕ್ಷೆ ಹಿನ್ನಲೆಯಲ್ಲಿ ದೆಹಲಿಯಲ್ಲಿ ಇದ್ದ ಕಾರಣ ಸೋಮಶೇಖರ್ ಗೈರಾಗಿದ್ದರೆ,ಎಸ್ ಟಿ ಸೋಮಶೇಖರ್ ಗೆ ಬಿಜೆಪಿ ಟಿಕೆಟ್ ಭರವಸೆ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಜಗ್ಗೇಶ್ ಕಾರ್ಯಕ್ರಮದಿಂದ ದೂರ ಉಳಿದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.